ಕೊರೋನಾ ಭೀತಿ; ಕಲಬುರಗಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮದುವೆ ಸಮಾರಂಭಗಳಿಗೆ ಬ್ರೇಕ್

ಮದುವೆ ಆಗುವವರು ರಿಜಿಸ್ಟರ್ ಮ್ಯಾರೇಜ್ ಮಾತ್ರ ಆಗಬೇಕು.  ರಿಜಿಸ್ಟರ್ ಮ್ಯಾರೇಜ್ ಆಗುವವರಿಗೆ ಮಾತ್ರ ಮದುವೆ ಆಗಲು ಅನುಮತಿ ನೀಡುವಂತೆ ಸೂಚನಾ ಪತ್ರದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.

news18-kannada
Updated:July 6, 2020, 6:27 PM IST
ಕೊರೋನಾ ಭೀತಿ; ಕಲಬುರಗಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮದುವೆ ಸಮಾರಂಭಗಳಿಗೆ ಬ್ರೇಕ್
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು; ಇತ್ತೀಚೆಗೆ ಮಾರಕ ಕೊರೋನ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹಬ್ಬುತ್ತಿದೆ. ಅದರಲ್ಲೂ ಮದುವೆ ಸಮಾರಂಭಗಳಲ್ಲೂ ಸೋಂಕು ಹೆಚ್ಚು ಹಬ್ಬಿದೆ. ಹೀಗಾಗಿ ಎರಡು ಜಿಲ್ಲೆಗಳಲ್ಲಿ ಇನ್ನುಮುಂದೆ ಮದುವೆ ಸಮಾರಂಭ ನಡೆಸದಂತೆ ಸರ್ಕಾರ ಆದೇಶ ಹೊರಡಿಸಿದೆ.

ಮದುವೆಗೆ ಹೆಚ್ಚು ಜನ ಸೇರುತ್ತಿರುವುದರಿಂದಲೇ ಸೋಂಕು ಹರಡುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಾಗಲಕೋಟೆ ಮತ್ತು ಕಲ್ಬುರ್ಗಿ ಜಿಲ್ಲೆಯಲ್ಲಿ ಮದುವೆ ಸಮಾರಂಭ ಬಂದ್ ಮಾಡುವಂತೆ ಡಿಸಿಎಂ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರು ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರಮುಖೇನ ಸೂಚನೆ ನೀಡಿದ್ದಾರೆ.

ಇದನ್ನು ಓದಿ: ಸರ್ಕಾರ ಮನವಿ ಮಾಡಿದರೂ ನಿಲ್ಲದ ಗುಳೆ; ಗಂಟು ಮೂಟೆ ಕಟ್ಟಿಕೊಂಡು ಊರುಗಳತ್ತ ಹೊರಟ ಜನರು

ಡಿಸಿಎಂ ಗೋವಿಂದ ಕಾರಜೋಳ ಅವರು ಹೊರಡಿಸಿರುವ ಸೂಚನಾ ಪತ್ರ.


ಕೊರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೂ ಕೊರೋನಾ ವೈರಾಣು  ನಿಯಂತ್ರಣಕ್ಕೆ ಬಾರದಿರುವುದು ಆತಂಕದ ಸಂಗತಿಯಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನರು ಭಾಗವಹಿಸುತ್ತಿದ್ದು, ಇದರ ಪರಿಣಾಮ ಮದುವೆ ಸಮಾರಂಭದಲ್ಲಿ ಪಾಲ್ಗೊಂಡವರಲ್ಲೂ ಕೊರೋನಾ ಸೋಂಕು ಹರಡುತ್ತಿರುವುದು ಗಮನಕ್ಕೆ ಬಂದಿದೆ. ಕೊರೋನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಮದುವೆ ಸಮಾರಂಭ ಹಮ್ಮಿಕೊಳ್ಳುವಂತಿಲ್ಲ. ಮದುವೆ ಆಗುವವರು ರಿಜಿಸ್ಟರ್ ಮ್ಯಾರೇಜ್ ಮಾತ್ರ ಆಗಬೇಕು.  ರಿಜಿಸ್ಟರ್ ಮ್ಯಾರೇಜ್ ಆಗುವವರಿಗೆ ಮಾತ್ರ ಮದುವೆ ಆಗಲು ಅನುಮತಿ ನೀಡುವಂತೆ ಸೂಚನಾ ಪತ್ರದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.
Published by: HR Ramesh
First published: July 6, 2020, 6:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading