• Home
  • »
  • News
  • »
  • coronavirus-latest-news
  • »
  • Corona Virus: ಮಾಸ್ಕ್ ಹಾಕದೆ ಹೊರಗೆ ಹೋಗುವಂತಿಲ್ಲ, ರಸ್ತೆಯಲ್ಲಿ ಉಗುಳಿದ್ರೂ ಬೀಳುತ್ತೆ ದಂಡ- ಸರ್ಕಾರದ ಆದೇಶ

Corona Virus: ಮಾಸ್ಕ್ ಹಾಕದೆ ಹೊರಗೆ ಹೋಗುವಂತಿಲ್ಲ, ರಸ್ತೆಯಲ್ಲಿ ಉಗುಳಿದ್ರೂ ಬೀಳುತ್ತೆ ದಂಡ- ಸರ್ಕಾರದ ಆದೇಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊರೊನಾ ಹೆಚ್ಚಳವಾಗ್ತಿರೋ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಕನಿಷ್ಠ 2 ಅಡಿ ಅಂತರ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ

  • Share this:

ಬೆಂಗಳೂರು (ಏ.25): ದೇಶದ ಕೆಲ ರಾಜ್ಯಗಳಲ್ಲಿ ಕೊರೊನಾ  ಪ್ರಕರಣಗಳು (Corona Case) ಹೆಚ್ಚುತ್ತಲಿದೆ ಹೀಗಾಗಿ ರಾಜ್ಯಕ್ಕೆ ನಾಲ್ಕನೇ ಅಲೆಯ ಆತಂಕ ಹೆಚ್ಚಾಗಿದ್ದು, ರಾಜ್ಯದಲ್ಲಿ ಮಾಸ್ಕ್​ ಕಡ್ಡಾಯಗೊಳಿಸಿ ಸರ್ಕಾರ ಆದೇಶ (Government Order) ಹೊರಡಿಸಿದೆ. ಕೊರೊನಾ ಹೆಚ್ಚಳವಾಗ್ತಿರೋ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ (Mask) ಹಾಕಿಕೊಳ್ಳಿ, ಸಾಮಾಜಿಕ ಅಂತರ (Social Distancing) ಕಾಯ್ದುಕೊಳ್ಳಬೇಕು ಕನಿಷ್ಠ 2 ಅಡಿ ಅಂತರ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿರ್ಬಂಧಿಸಲಾಗಿದೆ. ವಾಹನದಲ್ಲಿ ತೆರಳುವ ವೇಳೆ ಸಾರ್ವಜನಿಕ ಉಗುಳಿದರೆ ಹಾಗೂ ಮಾಸ್ಕ್ ಹಾಕದಿದ್ದರೆ ದಂಡ ಶುಲ್ಕ ವಿಧಿಸಲು ಸ್ಥಳೀಯ ಆಡಳಿತಕ್ಕೆ ಅಧಿಕಾರ ನೀಡಿ  ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಆದೇಶ ಹೊರಡಿಸಿದ್ದಾರೆ.


ಮುಂಜಾಗೃತ ಕ್ರಮಗಳ ಬಗ್ಗೆ ಸಭೆ


ಕೊರೊನಾ ಪ್ರಕರಣಗಳು  ಹೆಚ್ಚುತ್ತಿರುವ ಹಿನ್ನೆಲೆ ಸಿಎಂ ಬಸವರಾಜ​ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಿತು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿನ ಕೋವಿಡ್ ಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಸಿಎಂ ಬೊಮ್ಮಾಯಿ ಮಾಹಿತಿ ಪಡೆದಿದ್ದಾರೆ.  ದೆಹಲಿ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯ್ತು. ಇತ್ತೀಚಿನ ದಿನಗಳಲ್ಲಿ ಜನರು ಮಾಸ್ಕ್​ (Mask) ಧರಿಸೋದನ್ನೇ ಮರೆತು ಬಿಟ್ಟಿದ್ದಾರೆ. ಇನ್ಮುಂದೆ ಜನರು ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು, ಸಾಮಾಜಿಕ ಅಂತರವನ್ನು ಎಲ್ಲರೂ ಪಾಲಿಸಬೇಕು ಎಂದು ಸಚಿವ ಸುಧಾಕರ್  ಹೇಳಿದ್ದಾರೆ.


ಸಭೆ ಬಳಿಕ ಆರೋಗ್ಯ ಸಚಿವ ಡಾ ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಮಾತಾಡಿದ್ರು. ಬೆಂಗಳೂರಿನಲ್ಲಿ ಶೇ. 1.9 ರಷ್ಟು ಕೋವಿಡ್ ಹೆಚ್ಚಳವಾಗಿದೆ. ಕೋವಿಡ್ ಲಸಿಕೆ ತೆಗೆದುಕೊಂಡಿರದವರಿಗೆ ಸೋಂಕು ಹೆಚ್ಚುತ್ತಿದೆ. ಹೀಗಾಗಿ ಲಸಿಕೆ ಹಾಗೂ ಬೂಸ್ಟರ್​ ಡೋಸ್​ಗಳನ್ನು ತಪ್ಪದೇ ಹಾಕಿಸಿಕೊಳ್ಳಿ ಎಂದು ಜನರಿಗೆ ಸುಧಾಕರ್​ ಮನವಿ ಮಾಡಿದ್ರು. ದೇಶದಲ್ಲಿ 4ನೇ ಅಲೆ ಆತಂಕ ಹೆಚ್ಚಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳು ಅಗತ್ಯವಾಗಿದೆ. ಥೈಲ್ಯಾಂಡ್, ದಕ್ಷಿಣ ಕೊರಿಯಾ, ಜಪಾನ್ ನಿಂದ ಬೆಂಗಳೂರಿಗೆ ಬರುವವರ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಏರ್​ಪೋರ್ಟ್​ನಲ್ಲಿ ಬಿಗಿಭದ್ರತೆಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಡಾ. ಸುಧಾಕರ್​ ಹೇಳಿದ್ದಾರೆ.


Eye Donation: ನೇತ್ರದಾನಕ್ಕೆ ಸಹಿ ಹಾಕಿದ ಸಚಿವ ಬಿ.ಸಿ ನಾಗೇಶ್; ಅಂಧರ ಬಾಳಿಗೆ ಬೆಳಕಾಗಿ ಎಂದು ಸಚಿವರ ಕರೆ


ಕಡ್ಡಾಯವಾಗಿ ಮಾಸ್ಕ್​ ಧರಿಸಿ


ಇತ್ತೀಚಿನ ದಿನಗಳಲ್ಲಿ ಜನರು ಮಾಸ್ಕ್​ ಧರಿಸೋದನ್ನೇ ಮರೆತು ಬಿಟ್ಟಿದ್ದಾರೆ. ಇನ್ಮುಂದೆ ಜನರು ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು, ಸಾಮಾಜಿಕ ಅಂತರವನ್ನು ಎಲ್ಲರೂ ಪಾಲಿಸಬೇಕು ಎಂದು ಸುಧಾಕರ್​ ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ ಸ್ಪಲ್ಪ ಮಟ್ಟಿಗೆ ಕೊರೊನಾ ಸೋಂಕು ಹೆಚ್ಚಾಗಿದೆ. ಹೀಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್​ ಹೆಚ್ಚಿರುವ ದೇಶಗಳಿಂದ ಬರುವಂತವರಿಗೆ ಟೆಲಿ ಮಾನಿಟರಿಂಗ್​ ಮಾಡಲು ನಿರ್ಧರಿಸಲಾಗಿದೆ. ಲ್ಯಾಬ್ ವರದಿ ಬರೋತನಕ ಯಾವ ತಳಿ ಎಂದು ಹೇಳಲು ಸಾಧ್ಯವಿಲ್ಲ ಎಂದ್ರು.


ನರೇಂದ್ರ ಮೋದಿ ಅವರು ಕೋವಿಡ್​ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಸಭೆ ನಡೆಸುತ್ತಿದ್ದಾರೆ. ಪ್ರಧಾನಿಗಳು ಸಭೆಯಲ್ಲಿ ಏನು ನಿರ್ದೇಶನ ಕೊಡುತ್ತಾರೆ ನೋಡುತ್ತೇವೆ, ಬಳಿಕ ಮತ್ತೊಮ್ಮೆ ಸಭೆ ಸೇರಿ ರಾಜ್ಯ ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್​ ಹೇಳಿದ್ದಾರೆ.


ಇದನ್ನೂ ಓದಿ: Mysore: ಮುಡಾದಲ್ಲಿ ನಡೆದಿದೆ ಬ್ರಹ್ಮಾಂಡ ಭ್ರಷ್ಟಾಚಾರ! ನೂರಾರು ನಿವೇಶನಗಳ ದಾಖಲೆಯೇ ಮಂಗ ಮಾಯ!


ಇನ್ಮುಂದೆ ಕಡ್ಡಾಯ ಮಾಸ್ಕ್​


ಓಮಿಕ್ರಾನ್ ನ ತಳಿಯೇ ಆದ್ರೆ ರೋಗ ಲಕ್ಷಣಗಳು ಸೇಮ್ ಇರುತ್ತವೆ. ಎಲ್ಲ ಪಕ್ಷಗಳೂ ಸಭೆ, ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದ್ರು. ಸಭೆಯಲ್ಲಿ ಕಡ್ಡಾಯ ಮಾಸ್ಕ್​ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ. ಮಾಸ್ಕ್​ ಹಾಕದವರಿಗೆ ಸದ್ಯಕ್ಕೆ ದಂಡ ವಿಧಿಸಲ್ಲ. ಕಡ್ಡಾಯ ಮಾಸ್ಕ್ ಸಂಬಂಧ ಮತ್ತೆ ಮಾರ್ಗಸೂಚಿ ಹೊರಡಿಸಲಾಗುವುದು. ಹೊರ ರಾಜ್ಯಗಳಿಂದ ಬರುವವರ ಮೇಲೆ ಯಾವ ರೀತಿ‌‌ ನಿಗಾ ಇಡಬೇಕೆಂದು ಆ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ.

Published by:ಪಾವನ ಎಚ್ ಎಸ್
First published: