ವಿನಾಕಾರಣ ರಸ್ತೆಗಿಳಿದರೆ ವಾಹನಗಳ ಆರ್.ಸಿ, ಚಾಲಕರ ಡಿಎಲ್ ರದ್ದು; ವಿಜಯಪುರ ಜಿಲ್ಲಾಡಳಿತ ನಿರ್ಧಾರ

ಆರೋಗ್ಯ ಇಲಾಖೆ ಸಿಬ್ಬಂದಿ ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರತರಾಗಿದ್ದಾರೆ.  ಮನೆ ನಿಗಾದಲ್ಲಿರುವವರ ಸೇವೆಯಲ್ಲಿಯೂ ನಿರತರಾಗಿದ್ದಾರೆ

news18-kannada
Updated:March 26, 2020, 7:32 PM IST
ವಿನಾಕಾರಣ ರಸ್ತೆಗಿಳಿದರೆ ವಾಹನಗಳ ಆರ್.ಸಿ, ಚಾಲಕರ ಡಿಎಲ್ ರದ್ದು; ವಿಜಯಪುರ ಜಿಲ್ಲಾಡಳಿತ ನಿರ್ಧಾರ
ಬೈಕ್​​ ಸವಾರನಿಗೆ ತರಾಟೆಗೆ ತೆಗೆದುಕೊಂಡ ಪೊಲೀಸರು
  • Share this:
ವಿಜಯಪುರ(ಮಾ.26): ಇಡೀ ಭಾರತ ಲಾಕ್​ಡೌನ್ ಆಗಿದ್ದರೂ ವಿಜಯಪುರದಲ್ಲಿ ವಿನಾಕಾರಣ ಜನ ತಮ್ಮ ವಾಹನಗಳಲ್ಲಿ ರಸ್ತೆಗಿಳಿಯುತ್ತಿದ್ದಾರೆ. ಲಾಠಿ ಏಟು ಕೊಟ್ಟರೂ ಕ್ಯಾರೆ ಎನ್ನದ ಇಂಥವರ ವಿರುದ್ಧ ಈಗ ಮತ್ತಷ್ಟು ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಈ ವಿಷಯವಾಗಿ ಮಾತನಾಡಿದ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ವಿನಾಕಾರಣ ರಸ್ತೆಗಿಳಿಯರುವ ದ್ವಿಚಕ್ರ ವಾಹನ, ಕಾರುಗಳ ನೋಂದಣಿ, ವಾಹನ ಚಾಲನಾ ಲೈಸೆನ್ಸ್ ನ್ನು 21 ದಿನಗಳ ಕಾಲ ಸಸ್ಪೆಂಡ್ ಮಾಡಲಾಗುವುದು. ಭಾರತ ಲಾಕ್​​​​​​ ಡೌನ್ ಘೋಷಣೆಯಾದ ಎರಡನೆ ದಿನ ಸ್ವಲ್ಪ ಮಟ್ಟಿಗೆ ತೊಂದರೆ ಆಗುತ್ತಿದೆ. ಅನನುಕೂಲತೆ ಆಗುವುದನ್ನು ಸರಿ ಮಾಡುತ್ತೇವೆ. ಪಾಸ್​​ ಕೊಡುವ ಮೂಲಕವಾಗಿ ನಾವು ಸರಿ ಮಾಡುತ್ತಿದ್ದೇವೆ. ಸಾಮಾಜಿಕ ಅಂತರ ಪಾಲಿಸುವ ಮೂಲಕ ದಿನಸಿ ಅಂಗಡಿಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

ತರಕಾರಿ ಮತ್ತು ಹಣ್ಣು ವ್ಯಾಪಾರವನ್ನು ಸರಿ ಮಾಡುತ್ತೇವೆ. ಮನೆ ಮನೆಗೆ ಬಂದು ಹಣ್ಣು ಹಂಪಲುಗಳನ್ನು ಕೊಡಲು ಮುಂದೆ ಬಂದರೆ ಪಾಸ್ ನೀಡಿ ಅವಕಾಶ ಕಲ್ಪಿಸಲಾಗುತ್ತದೆ.  ಹೋಂ ಡೇಲಿವರಿ ಪಾಸ್ ತೆಗೆದುಕೊಂಡು ವ್ಯಾಪಾರ ಮಾಡಬಹುದು. ಆದರೆ, ಅಂಥವರು ತಮಗೆ ಹತ್ತಿರದ ಪ್ರದೇಶಗಳಲ್ಲಿ ಮಾತ್ರ ಮಾರಾಟ ಮಾಡಬೇಕು. ತಳ್ಳು ಗಾಡಿಗಳನ್ನು ಹೆಚ್ಚು ವಾರ್ಡುಗಳಲ್ಲಿ ಬಿಡುವ ಮೂಲಕ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಅನುಕೂಲ ಮಾಡಲಾಗುವುದು ಎಂದು ಅವರು ತಿಳಿಸಿದರು.

ಇದನ್ನೂ ಓದಿ : ಕೊರೋನಾ ನಿಗ್ರಹ ಹೋರಾಟ ಬೆಂಬಲಿಸಿ ಮೂರು ತಿಂಗಳ ವೇತನ ನೀಡಿದ ಶಾಸಕ ಯತ್ನಾಳ್

ಆರೋಗ್ಯ ಇಲಾಖೆ ಸಿಬ್ಬಂದಿ ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರತರಾಗಿದ್ದಾರೆ.  ಮನೆ ನಿಗಾದಲ್ಲಿರುವವರ ಸೇವೆಯಲ್ಲಿಯೂ ನಿರತರಾಗಿದ್ದಾರೆ. ಬೀಟ್ ಪೊಲೀಸ್ ನಿಯೋಜನೆ ಮಾಡಲಾಗಿದೆ. ಅಲ್ಲದೇ, ಜಿಲ್ಲಾಡಳಿತಕ್ಕೆ ನೆರವಾಗಲು ಸ್ವಯಂ ಸೇವಕರ ಅಗತ್ಯವಿದೆ.  ಅದಕ್ಕಾಗಿ ಜಿಲ್ಲಾ ಮಟ್ಟದ ಆ್ಯಪ್ ತೆರೆಯಲಾಗುತ್ತದೆ. ಆ್ಯಪ್ ಮೂಲಕ ಸ್ವಯಂ ಸೇವಕರ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಮನೆ ನಿಗಾ ಸಂಖ್ಯೆ ಇಳಿಕೆಯಾಗಿದೆ. ಈವರೆಗೆ ಜಿಲ್ಲೆಗೆ 320 ಜನ ವಿದೇಶಗಳಿಂದ ಬಂದಿದ್ದಾರೆ. ಅವರಲ್ಲಿ 33 ಜನ 15 ರಿಂದ 28 ದಿನ ಎರಡೂ ನಿಗಾ ಪೂರೈಸಿದ್ದಾರೆ. 165 ಜನ ರಿಪೋರ್ಟಿಂಗ್ ಪಿರೀಡ್ ನಲ್ಲಿದ್ದಾರೆ. 122 ಜನ ಮನೆ ನಿಗಾದಲ್ಲಿದ್ದಾರೆ. 7 ಜನರ ಕೊರೋನಾ ವರದಿಯಲ್ಲಿ ನೆಗೆಟಿವ್ ಬಂದಿದೆ.
 
First published: March 26, 2020, 6:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading