ಖಂಡಿತವಾಗಿಯೂ ನಾವು ನಮ್ಮ ಅಭಿವೃದ್ಧಿಯನ್ನು ಮರಳಿ ಸಾಧಿಸುತ್ತೇವೆ; ಪ್ರಧಾನಿ ಮೋದಿ ವಿಶ್ವಾಸ

ನಾವು ಖಂಡಿತವಾಗಿಯೂ ನಮ್ಮ ಬೆಳವಣಿಗೆಯನ್ನು ಮರಳಿ ಪಡೆಯುತ್ತೇವೆ ಎಂದು ವಿಶ್ವಾಸದಿಂದ ಹೇಳುತ್ತೇನೆ. ಕೋವಿಡ್ -19ರ ವಿರುದ್ಧದ ಹೋರಾಟದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಏಕೆಂದರೆ ನಾವು ಸಮಯಕ್ಕೆ ಸರಿಯಾದ ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ. ಇಡೀ ಜಗತ್ತನ್ನೇ ಒಂದು ವೈರಸ್ ಅಲ್ಲೋಲಕಲ್ಲೋಲ ಸೃಷ್ಟಿಸಿದೆ ಮೋದಿ ಎಂದರು.

news18-kannada
Updated:June 2, 2020, 1:01 PM IST
ಖಂಡಿತವಾಗಿಯೂ ನಾವು ನಮ್ಮ ಅಭಿವೃದ್ಧಿಯನ್ನು ಮರಳಿ ಸಾಧಿಸುತ್ತೇವೆ; ಪ್ರಧಾನಿ ಮೋದಿ ವಿಶ್ವಾಸ
ನರೇಂದ್ರ ಮೋದಿ
  • Share this:
ನವದೆಹಲಿ: ಭಾರತ ಲಾಕ್​ಡೌನ್​ನಿಂದ ತ್ಯಜಿಸಿದೆ ಮತ್ತು ಅನ್​ಲಾಕ್​ ಒಂದನೇ ಹಂತಕ್ಕೆ ಪ್ರವೇಶಿಸಿದೆ. ಜೂನ್​ 8ರಿಂದ ಸಾಕಷ್ಟು ವಹಿವಾಟು ಆರಂಭವಾಗಲಿದೆ. ಭಾರತದ ಸಾಮರ್ಥ್ಯ ಮತ್ತು ಎದುರಾಗಿರುವ ಬಿಕ್ಕಟ್ಟಿನಿಂದ ಹೊರಬರಲಿದ್ದೇವೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಸಿಐಐ ವಾರ್ಷಿಕೋತ್ಸವ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ನಾನು ಭಾರತದ ತಂತ್ರಜ್ಞಾನ ಮತ್ತು ಆವಿಷ್ಕಾರವನ್ನು ನಂಬುತ್ತೇನೆ. ನಾನು ರೈತರು, ಸಣ್ಣ ಕೈಗಾರಿಕೆಗಳು ಮತ್ತು ಉದ್ಯಮಿಗಳನ್ನು ನಂಬುತ್ತೇನೆ. ಭಾರತವು ಮರಳಿ ತನ್ನ ಬೆಳವಣಿಗೆ, ಅಭಿವೃದ್ಧಿಯನ್ನು ಸಾಧಿಸಲಿದೆ ಎಂಬುದನ್ನು ನಾನು ನಂಬುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊರೋನಾ ವಿರುದ್ಧ ಆರ್ಥಿಕತೆಯನ್ನು ಪುನಃ ಬಲಪಡಿಸುವುದು ನಮ್ಮ ಮೊದಲ ಆದ್ಯತೆಗಳಲ್ಲಿ ಒಂದಾಗಿದೆ. ಇದಕ್ಕಾಗಿ ಸರ್ಕಾರ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಂಡಿದೆ. ನಾವು ದೀರ್ಘಾವಧಿಯಲ್ಲಿ ದೇಶಕ್ಕೆ ಸಹಾಯ ಮಾಡುವ ನಿರ್ಧಾರಗಳನ್ನು ಸಹ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ನಾವು ಖಂಡಿತವಾಗಿಯೂ ನಮ್ಮ ಬೆಳವಣಿಗೆಯನ್ನು ಮರಳಿ ಪಡೆಯುತ್ತೇವೆ ಎಂದು ವಿಶ್ವಾಸದಿಂದ ಹೇಳುತ್ತೇನೆ. ಕೋವಿಡ್ -19ರ ವಿರುದ್ಧದ ಹೋರಾಟದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಏಕೆಂದರೆ ನಾವು ಸಮಯಕ್ಕೆ ಸರಿಯಾದ ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ. ಇಡೀ ಜಗತ್ತನ್ನೇ ಒಂದು ವೈರಸ್ ಅಲ್ಲೋಲಕಲ್ಲೋಲ ಸೃಷ್ಟಿಸಿದೆ ಮೋದಿ ಎಂದರು.

ಇದನ್ನು ಓದಿ: Amit Shah Interview: ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದು ಹಲವು ವರ್ಷಗಳ ಬೇಡಿಕೆಯಾಗಿತ್ತು - ಅಮಿತ್​​ ಶಾ

ಮಧ್ಯವರ್ತಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ನಾವು ಅತ್ಯುತ್ತಮ ಪ್ರಯತ್ನ ಮಾಡಿದ್ದೇವೆ. ಜನರ ಜೀವನದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇನೆ ಎಂದು ನಾನು ಕೆಂಪು ಕೋಟೆಯ ಮೇಲೆ ನಿಂತು ಜನರಿಗೆ ಹೇಳಿದ್ದೆ. ಸ್ವಾತಂತ್ರ್ಯೋತ್ತರ ನಂತರದ ಕಾನೂನುಗಳು ರೈತರನ್ನು ಮಧ್ಯವರ್ತಿಗಳ ಕೈಯಲ್ಲಿ ಸಿಲುಕಿಸಿಬಿಟ್ಟವು. ಮಧ್ಯವರ್ತಿಗಳ ಕೈಯಿಂದ ರೈತರನ್ನು ರಕ್ಷಿಸಲು ನಾವು ಸಾಕಷ್ಟು ಪ್ರಯತ್ನಿಸಿದ್ದೇವೆ. ಎಪಿಎಂಸಿ ಕಾಯ್ದೆಯಲ್ಲಿ ನಾವು ಮಹತ್ವದ ಬದಲಾವಣೆಗಳನ್ನು ತಂದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
Published by: HR Ramesh
First published: June 2, 2020, 11:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading