ಕೊರೋನಾ ಪರಿಸ್ಥಿತಿ ತಿಳಿ ಆದಮೇಲೆ ಎಸ್ಸೆಸ್ಸೆಲ್ಸಿ, ಪಿಯು ಇಂಗ್ಲಿಷ್ ಪರೀಕ್ಷೆ ದಿನಾಂಕ ನಿಗದಿ; ಸಚಿವ ಸುರೇಶ್ ಕುಮಾರ್

ಹತ್ತನೇ ತರಗತಿ ಹಾಗೂ ಪಿಯು ಪರೀಕ್ಷೆ ದಿನಾಂಕ ನಾನೇ ಅಧಿಕೃತವಾಗಿ ಪ್ರಕಟಿಸುತ್ತೇನೆ. ಅಲ್ಲಿಯವರೆಗೂ ವಿದ್ಯಾರ್ಥಿಗಳು ಮತ್ತು ಪೋಷಕರು ವದಂತಿಗಳಿಗೆ ಕಿವಿ ಕೊಡ್ಬೇಡಿ ಎಂದು ಹೇಳಿದರು.

ಶಿಕ್ಷಣ ಸಚಿವ ಸುರೇಶ್ ಕುಮಾರ್.

ಶಿಕ್ಷಣ ಸಚಿವ ಸುರೇಶ್ ಕುಮಾರ್.

 • Share this:
  ಬೆಂಗಳೂರು: ಈಗ ಇರುವ ಪಿಯು ಮೌಲ್ಯಮಾಪನ ಕೇಂದ್ರಗಳಿಗಿಂತ ಹೆಚ್ಚು ಕೇಂದ್ರಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್​.ಸುರೇಶ್​ ಕುಮಾರ್ ತಿಳಿಸಿದರು.

  ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಎಸ್​ಎಸ್​ಎಲ್​ಸಿ ಪರೀಕ್ಷೆ ದಿನಾಂಕವನ್ನು  ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ನಿಗದಿ ಮಾಡಲು ತೀರ್ಮಾನಿಸಲಾಗಿದೆ. ಪಿಯುಸಿ ಇಂಗ್ಲಿಷ್​ ಪರೀಕ್ಷೆ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ. ಯಾವುದೇ ಊಹಾಪೋಹಗಳಿಗೆ ಕಿವಿನೀಡದಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.

  ಪಿಯುಸಿ ಉಪನ್ಯಾಸಕ ಕೌನ್ಸೆಲಿಂಗ್ ದಿನಾಂಕ ಪ್ರಕಟಿಸಲಾಗುತ್ತದೆ. ಟಿಇಟಿ ಪರೀಕ್ಷೆ ದಿನಾಂಕವನ್ನು ಸಹ ಪ್ರಕಟಿಸಲಾಗುತ್ತದೆ. ಸೋಮವಾರ ಎಲ್ಲಾ ಡಿಡಿಪಿಐ ಅಧಿಕಾರಿಗಳ ಸಭೆ ಕರೆಯಲಾಗಿದೆ. ಯೂಟ್ಯೂಬ್ ಮೂಲಕ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

  ಕೊರೋನಾ ಪರಿಸ್ಥಿತಿ ತಿಳಿ ಆದಮೇಲೆ ಪಿಯುಸಿ ಇಂಗ್ಲಿಷ್​ ಹಾಗೂ ಹತ್ತನೇ ತರಗತಿ ಪರೀಕ್ಷೆ ನಡೆಸಲಾಗುವುದು. ರಾಜ್ಯದ ಎಲ್ಲಾ ಪಿಯುಸಿ ಮಕ್ಕಳು ಹಾಗೂ ಹತ್ತನೇ ತರಗತಿ ಮಕ್ಕಳಿಗೂ ಅನ್ವಯವಾಗಲಿದೆ. ಹತ್ತನೇ ತರಗತಿ ಹಾಗೂ ಪಿಯು ಪರೀಕ್ಷೆ ದಿನಾಂಕ ನಾನೇ ಅಧಿಕೃತವಾಗಿ ಪ್ರಕಟಿಸುತ್ತೇನೆ. ಅಲ್ಲಿಯವರೆಗೂ ವಿದ್ಯಾರ್ಥಿಗಳು ಮತ್ತು ಪೋಷಕರು ವದಂತಿಗಳಿಗೆ ಕಿವಿ ಕೊಡ್ಬೇಡಿ ಎಂದು ಹೇಳಿದರು.

  ಇದನ್ನು ಓದಿ: ಲಾಕ್ ಡೌನ್ ಮುಂದುವರೆಯುವುದು ಗ್ಯಾರಂಟಿ, ಮಾನಸಿಕವಾಗಿ‌ ಸಿದ್ದರಾಗಿ!

  ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯ ನಂತರ ಪೂರಕ ಪರೀಕ್ಷೆಗೆ ಚಿಂತನೆ ಮಾಡಲಾಗಿದೆ. ರಜೆ ಸಮಯದಲ್ಲಿ ಹತ್ತನೇ ತರಗತಿ ಮಕ್ಕಳು ಏನ್ ಮಾಡ್ಬೇಕು ಅನ್ನೋದ್ರ ಬಗ್ಗೆ ಸೂಚನೆ ಪ್ರಕಟಿಸಲಾಗುವುದು. ಸೋಮವಾರ ಮಧ್ಯಾಹ್ಯ ರಾಜ್ಯದ ಎಲ್ಲಾ ಡಿಡಿಪಿಐ ಹಾಗೂ ಪ್ರಾಂಶುಪಾಲರ ಜೊತೆ ವೀಡಿಯೋ ಕಾನ್ಪರೆನ್ಸ್ ಸಭೆ ಕರೆಯಲಾಗಿದೆ. ಶಿಕ್ಷಣ ಇಲಾಖೆಯಿಂದ ಯೂಟ್ಯೂಬ್ ಚಾನೆಲ್ ಮಾಡಿ, ಅದರ ಮೂಲಕ ಮಕ್ಕಳಿಗೆ ಎಲ್ಲಾ ಅಂಶಗಳು ಸಿಗಲಿವೆ. ಉತ್ಸಾಹದ ರೀತಿಯ ಕಾರ್ಯಕ್ರಮದ ರೂಪಿಸಲಾಗುವುದು.  ಆಕಾಶವಾಣಿ ದೂರವಾಣಿ ಮೂಲಕ ಹತ್ತನೇ ತರಗತಿ ಮಕ್ಕಳಿಗೆ ಪುನರ್ ಮನನ ಕಾರ್ಯಕ್ರಮ ಮಾಡಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದರು.
  First published: