HOME » NEWS » Coronavirus-latest-news » WE START COVID CARE CENTER IN EVERY TALUK SAYS MINISTER ARAVIND LIMBAVALI RHHSN

ರಾಜ್ಯದ ಪ್ರತಿ ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಕ್ಕೆ ನಿರ್ಧಾರ; ಸಚಿವ ಅರವಿಂದ್ ಲಿಂಬಾವಳಿ

ಹೆಚ್ಚು ಕೇಸ್ ಬರುತ್ತಿರುವ ಜಿಲ್ಲೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ಮೊದಲು ದಾಖಲಾಗಬೇಕು. ಆಗ ಬೆಡ್ ಕೊರತೆ ನಿವಾರಣೆ ಆಗುತ್ತೆ. ಟೆಸ್ಟ್ ಮಾಡಿಸುವಾಗ ಜನ ಸಂಪೂರ್ಣ ‌ಮಾಹಿತಿ ಕೊಡಬೇಕು. ಪಾಸಿಟಿವ್ ಬಂದ ಕೂಡಲೇ ಮೊಬೈಲ್ ಸ್ವಿಚ್ಡ್ ಆಫ್ ಮಾಡ್ತಿದ್ದಾರೆ‌. ಹೀಗಾಗಿ ಸಂಪೂರ್ಣ ಮಾಹಿತಿ ನೀಡಿ ಎಂದು ಸಚಿವ ಅರವಿಂದ ಲಿಂಬಾವಳಿ ಮನವಿ ಮಾಡಿದರು.

news18-kannada
Updated:May 5, 2021, 4:42 PM IST
ರಾಜ್ಯದ ಪ್ರತಿ ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಕ್ಕೆ ನಿರ್ಧಾರ; ಸಚಿವ ಅರವಿಂದ್ ಲಿಂಬಾವಳಿ
ಅರವಿಂದ್ ಲಿಂಬಾವಳಿ
  • Share this:
ಬೆಂಗಳೂರು: ಸಿಎಂ ಸೂಚನೆ ಮೇರೆಗೆ ಕೆಲಸ ಪ್ರಾರಂಭ ಮಾಡಿದ್ದೇವೆ. ನಾವು ವಾರ್ ರೂಂ ಸಭೆ ಮಾಡಿದ್ದೇವೆ. ವಾರ್ ರೂಂನಲ್ಲಿ ಕೆಲಸಕ್ಕೆ ಸೂಚನೆ ಕೊಟ್ಟಿದ್ದೇವೆ. ಕೊರೋನಾ ಪಾಸಿಟಿವ್ ಬಂದ ಶೇ. 5-10 ಜನ ಸರಿಯಾಗಿ ರೆಸ್ಪಾನ್ಸ್ ಮಾಡ್ತಿಲ್ಲ. ಇದು ಸರ್ಕಾರಕ್ಕೆ ಸಮಸ್ಯೆ ಆಗ್ತಾಯಿದೆ. ಜನ ನಿರ್ಲಕ್ಷ್ಯ ಮಾಡಬಾರದು. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಮಾಹಿತಿ ನೀಡಬೇಕು. ಸ್ಯಾಂಪಲ್ ಕಲೆಕ್ಷನ್ ಸಮಯದಲ್ಲಿ ಸಂಪೂರ್ಣ ‌ಮಾಹಿತಿ ಕೊಡುತ್ತಿಲ್ಲ. ಇದರಿಂದ ಅವರನ್ನ ಟ್ರಾಕ್ ಮಾಡಲು ಸಾಧ್ಯವಾಗ್ತಿಲ್ಲ. ಹೀಗಾಗಿ ಸಂಪೂರ್ಣ ಮಾಹಿತಿ, ವಿಳಾಸ ನೀಡಬೇಕು ಎಂದು ಸಚಿವ ಅರವಿಂದ ಲಿಂಬಾವಳಿ ಮನವಿ ಮಾಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅರವಿಂದ ಲಿಂಬಾವಳಿ, ರಾಜ್ಯದ ಪ್ರತಿ ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಕ್ಕೆ ನಿರ್ಧಾರ ಮಾಡಲಾಗಿದೆ. 6 ತಾಲೂಕಿನಲ್ಲಿ ಸಮಸ್ಯೆ ಇದೆ. ಅದನ್ನು ಸೇರಿದಂತೆ ಎಲ್ಲಾ ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ ಮಾಡಲು ಸೂಚನೆ ನೀಡಲಾಗಿದೆ.  ವಸತಿ ಶಾಲೆಯಲ್ಲಿ ತಾತ್ಕಾಲಿಕ ಕೇರ್ ಸೆಂಟರ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೋವಿಡ್ ಅಂತ ಮನಸಿಗೆ ಅಂದುಕೊಂಡವರು ಮೊದಲು ಈ ಕೇರ್ ಸೆಂಟರ್ ಗೆ ಬರಬೇಕು.  ವೈದ್ಯರ ನಿರ್ಧಾರ ಮಾಡಿ ಅವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡುತ್ತಾರೆ. ಆಸ್ಪತ್ರೆ ಗೆ ಬೇಡವಾದವರನ್ನು ಕೋವಿಡ್ ಕೇರ್ ಸೆಂಟರ್ ನಲ್ಲಿ ನೋಡಿಕೊಳ್ಳುತ್ತೇವೆ. ಆಗ ಬೆಡ್ ಕೊರತೆ ನಿವಾರಣೆ ಆಗುತ್ತೆ. ಹೆಚ್ಚು ಕೇಸ್ ಬರುತ್ತಿರುವ ಜಿಲ್ಲೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ಮೊದಲು ದಾಖಲಾಗಬೇಕು. ಆಗ ಬೆಡ್ ಕೊರತೆ ನಿವಾರಣೆ ಆಗುತ್ತೆ. ಟೆಸ್ಟ್ ಮಾಡಿಸುವಾಗ ಜನ ಸಂಪೂರ್ಣ ‌ಮಾಹಿತಿ ಕೊಡಬೇಕು. ಪಾಸಿಟಿವ್ ಬಂದ ಕೂಡಲೇ ಮೊಬೈಲ್ ಸ್ವಿಚ್ಡ್ ಆಫ್ ಮಾಡ್ತಿದ್ದಾರೆ‌. ಹೀಗಾಗಿ ಸಂಪೂರ್ಣ ಮಾಹಿತಿ ನೀಡಿ ಎಂದು ಸಚಿವ ಅರವಿಂದ ಲಿಂಬಾವಳಿ ಮನವಿ ಮಾಡಿದರು.

ಲ್ಯಾಬ್ ಗಳು ರಿಪೋರ್ಟ್ ಕೊಡೋದು ತಡ ಮಾಡುತ್ತಿವೆ. ಶೀಘ್ರವೇ ಲ್ಯಾಬ್​ಗಳು ರಿಪೋರ್ಟ್ ಕೊಡಬೇಕು. ರಿಪೋರ್ಟ್ ತಡ ಆಗುತ್ತಿರುವುದರಿಂದ ಸಮಸ್ಯೆ ಆಗುತ್ತಿದೆ. ಇದನ್ನು ಸರಿ ಮಾಡೋ ಕೆಲಸ ಮಾಡುತ್ತೇವೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.
Published by: HR Ramesh
First published: May 5, 2021, 4:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories