ಕೊರೋನಾ ತಡೆಗೆ ಆತ್ಮ ವಿಶ್ವಾಸ, ಸಹಭಾಗಿತ್ವ, ಸಂವಹನ, ಅನುಕಂಪ ಎಂಬ 4C ಸೂತ್ರ - ಸಚಿವ ಡಾ. ಸುಧಾಕರ್​​

ಕೊರೋನಾ ಸೋಂಕಿತರನ್ನು ಅಸ್ಪೃಶ್ಯರಂತೆ ನೋಡಬಾರದು. ಸರಿಯಾದ ಮಾಹಿತಿ ಪಡೆದುಕೊಂಡು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಮೂಲಕ ಕೊರೋನಾ ಮಣಿಸಬೇಕು ಎಂದು ಡಾ.ಸುಧಾಕರ್ ಮನವಿ ಮಾಡಿದರು.

ಡಾ. ಸುಧಾಕರ್

ಡಾ. ಸುಧಾಕರ್

  • Share this:
ಬೆಂಗಳೂರು(ಜು.08): ಕೊರೋನಾ ನಿಯಂತ್ರಣಕ್ಕಾಗಿ 5T ಸೂತ್ರ ಅನುಸರಿಸುತ್ತಾ ಬಂದಿರುವ ಕರ್ನಾಟಕದಲ್ಲಿ ಇನ್ಮುಂದೆ ಇದರೊಂದಿಗೆ 4C ಸೂತ್ರ ಅನುಸರಿಸುವ ನಿರ್ಧಾರ ಮಾಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದರು. ಇಂದು ಜೂಮ್​​​ ಆ್ಯಪ್​​ ಮೂಲಕ ಸುದ್ದಿಗೋಷ್ಠಿ ನಡೆಸಿದ ಸುಧಾಕರ್, ಕೊರೋನಾ ಸೋಂಕಿತರ ಸಾವಿನ ಪ್ರಮಾಣ ಶೇ.01ಕ್ಕಿಂತ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿರುವ ಚಿಕಿತ್ಸಾ ಕ್ರಮಗಳನ್ನು ಅಧ್ಯಯನ ಮಾಡಲು ಹಾಗೂ ಅವುಗಳನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲೇ ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು ಎಂದರು.

4C ಸೂತ್ರ ಎಂದರೇ ಆತ್ಮ ವಿಶ್ವಾಸ(Confidence), ಸಹಭಾಗಿತ್ವ( Collaboration), ಸಂವಹನ(Communication) ಮತ್ತು ಅನುಕಂಪ(Compassion) ಅನುಸರಿಸಬೇಕು. ಪ್ರಸ್ತುತ ಕೋವಿಡ್ ಸೇವೆಯಲ್ಲಿ ತೊಡಗಿರುವ ಆರೋಗ್ಯ ಯೋಧರು ಕಳೆದ 4 ತಿಂಗಳಿನಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಒತ್ತಡಕ್ಕೆ ಒಳಗಾಗಿದ್ದಾರೆ. ಅವರಿಗೆ ವಿಶ್ರಾಂತಿಯ ಅಗತ್ಯವಿದ್ದು, ಖಾಸಗಿ ವಲಯಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಇರುವ ಪರಿಣಿತರು ಕೆಲದಿನಗಳ ಮಟ್ಟಿಗೆ ಅವರ ಸ್ಥಾನ ತುಂಬಬೇಕಿದೆ ಎಂದರು.

ಇನ್ನು ಸರ್ಕಾರ, ನಾಗರಿಕರು ಮತ್ತು ಸಂಘಸಂಸ್ಥೆಗಳ ಸಹಭಾಗಿತ್ವದಿಂದ ಕೊರೋನಾ ಮಣಿಸಲು ಸಾಧ್ಯ. ಇದಕ್ಕಾಗಿ ಸರ್ಕಾರ ಆಪ್ ಬಿಡುಗಡೆ ಮಾಡಲಿದ್ದು, ಸ್ವಯಂ ಪ್ರೇರಿತರಾಗಿ ನೋಂದಾಯಿಸಿಕೊಳ್ಳಬಹುದು. ಕೊರೋನಾ ವಿರುದ್ಧದ ಈ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಬಹುದು ಎಂದು ಹೇಳಿದರು.

ಕೊರೋನಾ ಸೋಂಕಿತರನ್ನು ಅಸ್ಪೃಶ್ಯರಂತೆ ನೋಡಬಾರದು. ಸರಿಯಾದ ಮಾಹಿತಿ ಪಡೆದುಕೊಂಡು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಮೂಲಕ ಕೊರೋನಾ ಮಣಿಸಬೇಕು ಎಂದು ಡಾ.ಸುಧಾಕರ್ ಮನವಿ ಮಾಡಿದರು.

ಇದನ್ನೂ ಓದಿ: ‘ಒಂದು ತಿಂಗಳಿನಲ್ಲಿ ಎಲ್ಲಾ ಗುತ್ತಿಗೆ ವೈದ್ಯರನ್ನು ಖಾಯಂ ಮಾಡುವಂತೆ ನಾಳೆಯೇ ಆದೇಶ‘ - ಸಚಿವ ಶ್ರೀರಾಮುಲು ಭರವಸೆ

ಕೇಂದ್ರ ಸರ್ಕಾರದ ಉನ್ನತಮಟ್ಟದ ನಿಯೋಗ ರಾಜ್ಯದ ಕೋವಿಡ್-19 ನಿಯಂತ್ರಣಾ ಕ್ರಮಗಳನ್ನು ಪರಿಶೀಲಿಸಿದ್ದು, ರಾಜ್ಯದ ಕ್ರಮಗಳನ್ನು ಶ್ಲಾಘಿಸಿದ್ದಾರೆ ಎಂದು ಸಚಿವ ಸುಧಾಕರ್ ಸಂತಸ ವ್ಯಕ್ತಪಡಿಸಿದರು. ಕೇಂದ್ರದ ನಿಯೋಗದ ಶಿಫಾರಸ್ಸಿನಂತೆ ಮುಂದಿನ ದಿನಗಳಲ್ಲಿ ಹೆಚ್ಚುಹೆಚ್ಚು ಟೆಸ್ಟ್ ನಡೆಸುವ ಅವಶ್ಯಕತೆ ಇದ್ದು, ಪಾಸಿಟಿವ್ ಪ್ರಕರಣಗಳು ಹೆಚ್ಚಾಗಲಿವೆ ಎಂದರು.

ಜನರು ಆತಂಕಪಡದೆ ಮುನ್ನೆಚ್ಚರಿಕೆವಹಿಸಬೇಕು. ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಹೆಚ್ಚು ಆಂಟಿಜೆನ್ ಟೆಸ್ಟ್ ನಡೆಸಬೇಕು. ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಬೇಕು ಎಂಬುದು ಕೇಂದ್ರ ನಿಯೋಗದ ಅಭಿಪ್ರಾಯ ಎಂದು ಮಾಹಿತಿ ನೀಡಿದರು ಸುಧಾಕರ್​​.
Published by:Ganesh Nachikethu
First published: