ಬೆಂಗಳೂರು: ವಾರ್ ರೂಮ್, ಟೆಲಿ ಕಮ್ಯುನಿಕೇಶನ್ಸ್ ಬಗ್ಗೆ ನಮಗೆ ಸಿಎಂ ಉಸ್ತುವಾರಿ ನೀಡಿದ್ದಾರೆ. ನಾನು ಬಿಬಿಎಂಪಿ ವಾರ್ ರೂಮ್ಗೆ ಭೇಟಿ ಕೊಟ್ಟು ಸುದೀರ್ಘ ಸಮಾಲೋಚನೆ ಮಾಡಿದ್ದೇನೆ. ಒಂದು ಝೋನ್ಗೆ ಸಂಬಂಧಿಸಿದಂತೆ ಭೇಟಿ ನೀಡಿ, ಒಂಬತ್ತರಲ್ಲಿ ಎರಡಕ್ಕೆ ಭೇಟಿ ನೀಡಿದ್ದೇನೆ. ಆಸ್ಪತ್ರೆಗಳಲ್ಲಿ ಹಾಕಿರುವ ನೋಡಲ್ ಆಫೀಸರ್ಗಳ ಜೊತೆಗೆ ಸಭೆ ಮಾಡಿದ್ದೇನೆ. ಇವತ್ತು ಕೂಡ ಕೋವಿಡ್ ಹಿನ್ನೆಲೆಯಲ್ಲಿ ಸಭೆ ಮಾಡಿದ್ದೇನೆ. ನಮ್ಮ ಡಿಸಾಸ್ಟರ್ ಮ್ಯಾನೆಜ್ಮೆಂಟ್ ಕಾರ್ಯದರ್ಶಿ ಮಂಜುನಾಥ್ ಅವರ ಜೊತೆ ಸಭೆ ಮಾಡಿದ್ದೇನೆ. ಮುಂಬೈನಲ್ಲಿ ಯಾವ ರೀತಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ತಂದಿದ್ದಾರೆ, ಆ ರೀತಿ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ವಾರ್ಡ್ ಮಟ್ಟದಲ್ಲಿ ಇದನ್ನು ಕಾರ್ಯಾರಂಭ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ ಲಿಂಬಾವಳಿ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರಯಲು ಉದೇಶಿಸಿದ್ದೇವೆ. ವಾರ್ಡ್ನ ಆರ್ಡಬ್ಲ್ಯುಎಸ್ ಸೇರಿದಂತೆ 50 ಜನರನ್ನು ಸೇರಿ ಕೋವಿಡ್ ಹ್ಯಾಂಡಲ್ ಮಾಡಲು ತಯಾರಿ ಮಾಡುತ್ತೇವೆ. ವಾರ್ಡ್ಗಳಿಗೆ ದಿನಕ್ಕೆ 100 ರಿಂದ 150 ಪ್ರಕರಣ ಬರುತ್ತಿವೆ. ನಮ್ಮ ಝೋನ್ ಕಮಾಂಡಿಂಗ್ ಸೆಂಟರ್ನಿಂದ ಟೆಲಿಫೋನ್ ನಿಂದ ನಿರ್ವಹಣೆ ಮಾಡುತ್ತಿದ್ದೇವೆ. ಇದನ್ನು ಫಿಸಿಕಲ್ ಆಗಿ ನಿರ್ವಹಣೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಡಾಕ್ಟರ್, ನರ್ಸ್ ಸೇರಿದಂತೆ ಎಲ್ಲರನ್ನು ಇದರಲ್ಲಿ ಬಳಸಿಕೊಳ್ಳುತ್ತೇವೆ. ವಾರ್ಡ್ ನಲ್ಲಿ ಪೇಶೆಂಟ್ ಟ್ರಯಾಸ್ ಸೆಂಟರ್ ಗೆ ಬಂದ್ರೆ ರೋಗಿ ರೋಗ ಲಕ್ಷಣ ಕಂಡು ಹಿಡಿಯುತ್ತಾರೆ. ಪಾಸಿಟಿವ್ ಇದ್ರೆ ಅವರನ್ನು ಎಲ್ಲಿ ಕಳಿಸಬೇಕು ಎನ್ನುವುದನ್ನು ಅವರೇ ತೀರ್ಮಾನ ಮಾಡುತ್ತಾರೆ. ಬಹುತೇಕ ಎಲ್ಲರೂ ಮನೆಯಲ್ಲಿ ಇರಲು ಹೇಳುತ್ತಾರೆ. ಅವರಿಗೆ ಮೆಡಿಕಲ್ ಕಿಟ್ ಕೂಡ ನೀಡುತ್ತೇವೆ. ಮನೆಗೆ ಹೋಗಬೇಕಾ? ಸ್ಟೆಬಿಲೈಸ್ ಸೆಂಟರ್ ಗೆ ಹೋಗಬೇಕಾ? ಅಥವಾ ಆಸ್ಪತ್ರೆಗೆ ಕಳಿಸಬೇಕಾ ಎಲ್ಲಾ ಆ ವಾರ್ಡ್ ಸಮಿತಿಗೆ ತೀರ್ಮಾನಕ್ಕೆ ಬಿಟ್ಟದ್ದು ಎಂದು ಹೇಳಿದರು.
ಇದನ್ನು ಓದಿ: ಸುಪ್ರೀಂಕೋರ್ಟ್ನಿಂದ 1,200 ಮೆ.ಟನ್ ಆಕ್ಸಿಜನ್ ಹಂಚಿಕೆ: 20,000 ಆಕ್ಸಿಜನ್ ಬೆಡ್ ವ್ಯವಸ್ಥೆಗೆ ಮುಂದಾದ ಸರಕಾರ
ಮುಂಬಯಿ, ಚೆನ್ನೈನಲ್ಲಿ ಈ ರೀತಿಯಲ್ಲಿ ಮಾಡಿದ್ದಾರೆ. ಅದೇ ಮಾದರಿಯಲ್ಲಿ ನಾವು ಮಾಡುತ್ತೇವೆ. ಎರಡನೆ ಡೋಸ್ಗೆ ಸಮಸ್ಯೆ ಆಗುತ್ತಿದೆ ಎಂದು ಹೇಳಿದ್ದಾರೆ. ಅದನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಪ್ರತಿ ತಾಲೂಕಿನಲ್ಲಿ ವಾರ್ ರೂಮ್ ಇರುತ್ತೆ, ಅದರಲ್ಲಿ ಪ್ರತಿಯೊಂದು ಡೀಟೈಲ್ಸ್ ಇರಬೇಕು. ಇದನ್ನು ಡ್ಯಾಶ್ ಬೋರ್ಡ್ನಲ್ಲಿ ಹಾಕಬೇಕು. 57 ತಾಲೂಕಿನಲ್ಲಿ ಮಾಡಲು ತಯಾರಿ ಇದೆ. ಆಕ್ಸಿಜನ್ ಬೆಡ್ , ಐಸಿಯು ವೆಂಟಿಲೇಟರ್ ಬೆಡ್ ಡಿಸ್ ಪ್ಲೆ ಮಾಡಬೇಕು. ಅದರ ಸಂಪೂರ್ಣ ವಿವರ ಮಂಗಳವಾರ ನೀಡುತ್ತೇವೆ. ಬೆಂಗಳೂರಿನಲ್ಲಿ ಕಮಾಂಡಿಂಗ್ ಸೆಂಟರ್ನಲ್ಲಿ ನಿರ್ವಹಣೆ ಕಾರ್ಯ ನಡೆಯುತ್ತಿದೆ. ಇದರಲ್ಲಿ ಸುಧಾರಣೆ ತರಲಾಗಿದೆ. ಬೆಡ್ ಆಲಾಟ್ ಮಾಡಿದಾಗ ಅವರಿಗೆ ಮೆಸೇಜ್ ಹೋಗುತ್ತಿರಲಿಲ್ಲ. ಇನ್ನೂ ಮುಂದೆ ಬೆಡ್ ಅಲಾಟ್ ಆದ ಮೇಲೆ ಮೆಸೇಜ್ ಹೋಗುತ್ತೆ ಎಂದು ಸಚಿವ ಅರವಿಂದ ಲಿಂಬಾವಳಿ ಅವರು ಮಾಹಿತಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ