HOME » NEWS » Coronavirus-latest-news » WE DO NOT COLLECT PERSONAL INFORMATION OF ANYONE WHO HAS BEEN VACCINATED THE GOVERNMENT IS CLEAR MAK

Cowin: ಕೋವಿಡ್ ಲಸಿಕೆ ಪಡೆದ ಯಾರ ವೈಯಕ್ತಿಕ ಮಾಹಿತಿಯನ್ನೂ ನಾವು ಸಂಗ್ರಹಿಸುತ್ತಿಲ್ಲ; ಸರ್ಕಾರ ಸ್ಪಷ್ಟನೆ

ಕೋವಿನ್ ಲಸಿಕೆ ನೀಡುವ ವೇದಿಕೆಯೇ ಹೊರತು, ಕೋವಿಡ್​ ಲಸಿಕೆ ಹಾಕಿಸಿಕೊಂಡವರ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

news18-kannada
Updated:May 31, 2021, 9:49 PM IST
Cowin: ಕೋವಿಡ್ ಲಸಿಕೆ ಪಡೆದ ಯಾರ ವೈಯಕ್ತಿಕ ಮಾಹಿತಿಯನ್ನೂ ನಾವು ಸಂಗ್ರಹಿಸುತ್ತಿಲ್ಲ; ಸರ್ಕಾರ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
  • Share this:
ನವ ದೆಹಲಿ (ಮೇ 31); ಕೋವಿಡ್​ ಲಸಿಕೆಯನ್ನು ಹಾಕಿಸಿಕೊಳ್ಳುವ ಯಾರ ವೈಯಕ್ತಿಕ ಮಾಹಿತಿಯನ್ನೂ ಸಹ ಸರ್ಕಾರ ಸಂಗ್ರಹಿಸುತ್ತಿಲ್ಲ. ಅದೇ ರೀತಿ ವ್ಯಾಕ್ಸಿನ್ ಪಡೆದ ನಂತರ ಅದರ ಪ್ರಮಾಣ ಪತ್ರವನ್ನೂ ಸಹ ಯಾರೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳ ಬೇಡಿ ಎಂದು ಕೇಂದ್ರ ಗೃಹ ಸಚಿವಾಲಯ ಇಂದು ಟ್ವೀಟ್ ಮೂಲಕ ಜನರಿಗೆ ಅಗತ್ಯ ಸೂಚನೆ ನೀಡಿದೆ. ಈಗಾಗಲೇ ಸರ್ಕಾರ ಮೂರು ಹಂತದ ಲಸಿಕೆ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದೆ. ಅಲ್ಲದೇ ಲಸಿಕೆಯನ್ನು ತೆಗೆದುಕೊಳ್ಳುವಂತೆ ಮನವಿ ಮಾಡುತ್ತಿದೆ. ರಾಜಕೀಯ ನಾಯಕರು, ಸಿನಿಮಾ ಸೆಲೆಬ್ರಿಟಿಗಳು ಕೂಡ ಲಸಿಕೆ ಪಡೆಯುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊ ಳ್ಳುವ ಮೂಲಕ ಇತರರಿಗೂ ಲಸಿಕೆ ಪಡೆಯಲು ಉತ್ತೇಜಿಸುತ್ತಿದ್ದಾರೆ. ಆದರೆ, ವೈಯಕ್ತಿಕ ಮಾಹಿತಿಯನ್ನು ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳು ವುದು ಸರಿಯಾದ ಕ್ರಮ ಅಲ್ಲ , ಅಲ್ಲದೆ, ನಾವು ಲಸಿಕೆ ಪಡೆದ ಯಾರ ವೈಯಕ್ತಿಕ ಮಾಹಿತಿಯನ್ನೂ ಸಂಗ್ರಹಿಸಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.ಲಸಿಕೆಯ ಮೂರನೇ ಹಂತದ ಕಾರ್ಯಚರಣೆ ವೇಳೆ ಅನೇಕ ಮಂದಿ ಯುವ ಪೀಳಿಗೆ ಜನರು ಮೊದಲ ಡೋಸ್​ ಲಸಿಕೆ ಪಡೆದಿದ್ದಾರೆ. ಇವರಲ್ಲಿ ಬಹುತೇಕರು ತಮ್ಮ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ಕಂಡು ಬಂದಿದೆ. ಈ ಪ್ರಮಾಣ ಪತ್ರದಲ್ಲಿ ಕೆಲವು ನಿರ್ಣಾಯಕ ಡೇಟಾಗಳಿದ್ದು, ಅವುಗಳನ್ನು ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಹಂಚುವುದು ಅಪಾಯಕಾರಿ, ಅಲ್ಲದೆ, ಕೋವಿನ್ ಎಂಬುದು ಕೇವಲ ಲಸಿಕೆಯನ್ನು ನೀಡುವ ವೇದಿಕೆಯೇ ಹೊರತು, ಇಲ್ಲಿ ಕೋವಿಡ್​ ಲಸಿಕೆ ಹಾಕಿಸಿಕೊಂಡವರ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುವುದಿಲ್ಲ ಎಂದೂ ತಿಳಿಸಿದೆ.

ಸೈಬರ್​ ಸುರಕ್ಷತೆ ಮತ್ತು ಜಾಗೃತೆ ದೃಷ್ಠಿಯಿಂದಾಗಿ ಈ ರೀತಿಯ ಯಾವುದೇ ಲಸಿಕೆ ಪ್ರಮಾಣ ಪತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡದಂತೆ ಗೃಹ ಸಚಿವಾಲಯ ಟ್ವಿಟರ್​ನಲ್ಲಿ ತಿಳಿಸಿದೆ. ಲಸಿಕೆ ಪ್ರಮಾಣ ಪತ್ರದಲ್ಲಿ ಹೆಸರು ಸೇರಿದಂತೆ ವ್ಯಕ್ತಿಯ ವೈಯಕ್ತಿಕ ವಿವರಗಳು ಒಳಗೊಂಡಿರುವ ಕಾರಣ ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಮಾಹಿತಿ ದುರುಪಯೋಗವಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನಲೆ ಈ ಬಗ್ಗೆ ಎಚ್ಚರವಹಿಸುವಂತೆ ಗೃಹ ಸಚಿವಾಲಯದ ಟ್ವೀಟ್​ನಲ್ಲಿ ಎಚ್ಚರಿಸಿದೆ.

ಇದನ್ನೂ ಓದಿ: Rahul Gandhi: ಜನತೆಗೆ ಲಸಿಕೆ ಕೊಡುವಲ್ಲಿ ಮೋದಿ ಸರ್ಕಾರದ ಸೋಲು ಭಾರತ ಮಾತೆಯ ಎದೆಗೆ ಇರಿದಂತೆ: ರಾಹುಲ್ ಗಾಂಧಿ ​​ಲಸಿಕೆ ಪ್ರಮಾಣಪತ್ರವು ಕೂಡ ಆಧಾರ್​ ಕಾರ್ಡ್​ನಂತೆ ಸಹಾಯಕಾರಿಯಾಗಿದೆ. ಯಾವುದೇ ನಗರ, ದೇಶಗಳಿಗೆ ಪ್ರಯಾಣಿಸುವಾಗ ಕೋವಿಡ್​ ಲಸಿಕೆ ಪಡೆದ ಕುರಿತು ಪ್ರಮಾಣ ಪತ್ರ ಹಾಜರು ಪಡಿಸುವುದು ಅನಿವಾರ್ಯವಾಗಿದೆ. ಲಸಿಕೆ ಪಡೆಯಲು ಮೊಬೈಲ್​ ಮೂಲಕ ನೋಂದಾಯಿಸಿಕೊಂಡಿರುವ ಹಿನ್ನಲೆ ಎಲ್ಲಾ ವಿವರಗಳನ್ನು ಪಡೆಯುವುದು ಸುಲಭವಾಗಿದೆ.

ಇದನ್ನೂ ಓದಿ: ನಮ್ಮ ಕಣ್ಣು ಮುಚ್ಚಿಸಿ, ನಮ್ಮ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ; ಗೌತಮ್ ಗಂಭೀರ್​ಗೆ ದೆಹಲಿ ಹೈಕೋರ್ಟ್​ ಛೀಮಾರಿ

ಮೊದಲ ಡೋಸ್​ ಪಡೆದಾಕ್ಷಣ ಸರ್ಕಾರ ಲಸಿಕೆ​​ ಪ್ರಮಾಣ ಪತ್ರ ನೀಡುತ್ತದೆ, ಇದರಲ್ಲಿ ವಾಕ್ಸಿನೇಷನ್​ ಪಡೆದ ಸಮಯ ಮತ್ತು ದಿನಾಂಕ ಕೂಡ ನಮೂದಾಗಿರುತ್ತದೆ. ಜೊತೆಗೆ ವಾಕ್ಸಿನೇಷನ್​ ಕೇಂದ್ರದ ಹೆಸರು ಆಧಾರ್​ ಕಾರ್ಡ್​ನ ಕೊನೆಯ ನಾಲ್ಕು ಅಂಕೆಗಳನ್ನು ಹೊಂದಿದೆ. ಎರಡನೇ ಡೋಸ್​ ವಾಕ್ಸಿನೇಷನ್ ಪಡೆಯುವ​ ದಿನಾಂಕವನ್ನು ಕೂಡ ಇಲ್ಲಿ ಉಲ್ಲೇಖಿಸಲಾಗಿದೆ.
Youtube Video

ಎರಡನೇ ಡೋಸ್​ ವಾಕ್ಸಿನೇಷನ್​ ಪಡೆದ ಬಳಿಕ ಸಿಗಲಿರುವ ಪ್ರಮಾಣ ಪತ್ರ ಪೂರ್ಣ ಪ್ರಮಾಣದ ಅರ್ಹತೆ ಹೊಂದಿದ್ದು, ಮೊದಲ ಡೋಸ್​ ಪ್ರಮಾಣಪತ್ರ ತಾತ್ಕಾಲಿಕವಾಗಿದೆ. ಕೋವಿಡ್​ ಎರಡನೇ ಅಲೆಗೆ ಈಗಾಗಲೇ ಸಾಕಷ್ಟು ಜನರು ತತ್ತರಿಸಿದ್ದಾರೆ. ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆ ಜನರು ಈ ಬಗ್ಗೆ ಕಾಳಜಿವಹಿಸುವುದು ಅತ್ಯಗತ್ಯ. ಈ ಹಿನ್ನಲೆ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್​ ಧರಿಸುವುದು, ಪದೇ ಪದೇ ಕೈ ತೊಳೆದುಕೊಳ್ಳುವ ಮೂಲಕ ಸೋಂಕಿನಿಂದ ಪಾರಾಗಬಹುದಾಗಿದೆ. ಅಲ್ಲದೇ ಹಲವೆಡೆ ಎಲ್ಲಾ ವಯೋ ಮಾನದವರಿಗೂ ಲಸಿಕೆ ಲಭ್ಯವಿದ್ದು, ಲಸಿಕೆ ಪಡೆಯಲು ಮುಂದಾಗಬೇಕಿದೆ ಎಂದು ಸರ್ಕಾರ ಮನವಿ ಮಾಡುತ್ತಿದ್ದು, ನ್ಯೂಸ್​ 18 ಕನ್ನಡದ ಕಾಳಜಿ ಕೂಡ ಇದೇ ಆಗಿದೆ.
Published by: MAshok Kumar
First published: May 31, 2021, 9:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories