ಸಭೆ ಸೇರಬಾರದು ಎಂಬುದೇ ನಮಗೆ ಗೊತ್ತಿರಲಿಲ್ಲ; ದೆಹಲಿ ನಿಜಾಮುದ್ದೀನ್ ಧರ್ಮ ಪ್ರಚಾರದಲ್ಲಿ ತೊಡಗಿದ್ದವರ ಅಳಲು!

ದೆಹಲಿಯಲ್ಲಿ ಧಾರ್ಮಿಕ ಸಭೆ ಆಯೋಜಿಸಿದ್ದ ಆಯೋಜಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆದರೆ, ಈ ಕುರಿತು ಸಭೆ ಆಯೋಜಿಸಿದ್ದವರು ಬುಧವಾರ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆಯನ್ನೂ ನೀಡಿದ್ದರು.

MAshok Kumar | news18-kannada
Updated:April 2, 2020, 12:20 PM IST
ಸಭೆ ಸೇರಬಾರದು ಎಂಬುದೇ ನಮಗೆ ಗೊತ್ತಿರಲಿಲ್ಲ; ದೆಹಲಿ ನಿಜಾಮುದ್ದೀನ್ ಧರ್ಮ ಪ್ರಚಾರದಲ್ಲಿ ತೊಡಗಿದ್ದವರ ಅಳಲು!
ನಿಜಾಮುದ್ದೀನ್​ನಲ್ಲಿ ಪರಿಶೀಲನೆ ನಡೆಸುತ್ತಿರುವ ಸಿಬ್ಬಂದಿ
  • Share this:
ಹುಬ್ಬಳ್ಳಿ (ಏಪ್ರಿಲ್‌ 02); ಕೊರೋನಾ ಭೀತಿ ಹಿನ್ನೆಲೆಯಲ್ಲಿ ಯಾರೂ ದೊಡ್ಡ ಸಂಖ್ಯೆಯಲ್ಲಿ ಸಭೆ ಸೇರಬಾರದು ಎಂದು ಸರ್ಕಾರದ ತೆಗೆದುಕೊಂಡಿದ್ದ ತೀರ್ಮಾನ ನಮಗೆ ಗೊತ್ತಿರಲಿಲ್ಲ. ನಾವು ಧರ್ಮ ಪ್ರಚಾರದ ಸಭೆಗೆಂದು ದೆಹಲಿಯ ನಿಜಾಮುದ್ದೀನ್ ಮಸೀದಿಗೆ ತೆರಳಿ ವಾಪಸ್ ಬಂದಿದ್ದೇವೆ ಎಂದು ಈ ಸಭೆಯಲ್ಲಿ ಪಾಲ್ಗೊಂಡ ಹುಬ್ಬಳ್ಳಿಯ ಯುವಕನೋರ್ವ ತಿಳಿಸಿದ್ದಾರೆ.

ದೆಹಲಿಯ ನಿಜಾಮುದ್ದೀನ್‌ನ ಮಸೀದಿಯಲ್ಲಿ ಮಾರ್ಚ್ 13 ರಿಂದ 15ರ ಅವಧಿಯಲ್ಲಿ ಇಸ್ಲಾಂ ಧರ್ಮದವರು ಧಾರ್ಮಿಕ ಸಭೆ ನಡೆಸಿದ್ದರು. ಆದರೆ, ಈ ಸಭೆಯಲ್ಲಿ ಪಾಲ್ಗೊಂಡಿದ್ದ 10 ಜನ ಇದೀಗ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಹತ್ತಾರು ಜನರಿಗೆ ಈ ಸೋಂಕು ಹರಡಿದ್ದು ಅವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಅಲ್ಲದೆ, ದೇಶದ ನಾನಾ ಭಾಗಗಳಿಂದ ಜನ ಈ ಸಭೆಯಲ್ಲಿ ಪಾಲ್ಗೊಂಡಿದ್ದು ಎಲ್ಲೆಡೆ ಈ ವೈರಸ್ ಹರಡುವ ಭೀತಿಯನ್ನು ಮುಂದಿಟ್ಟಿದೆ.

ಹೀಗಾಗಿ ಈ ಸಭೆ ಆಯೋಜಿಸಿದ್ದ ಆಯೋಜಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆದರೆ, ಈ ಕುರಿತು ಸಭೆ ಆಯೋಜಿಸಿದ್ದವರು ಬುಧವಾರ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿರುವ ಯುವಕ, “ನಾವು ಗದಗ ಮತ್ತು ಹುಬ್ಬಳ್ಳಿಯಿಂದ ಸುಮಾರು 12 ಈ ಕಾರ್ಯಕ್ರಮದಲ್ಲಿ ಪಾಲ್ಲೊಂಡಿದ್ದೆವು. ಆದರೆ, ಕೊರೋನಾ ಭೀತಿಯಿಂದಾಗಿ ಜನ ಸಭೆ ಸೇರಬಾರದು ಎಂದು ಸರ್ಕಾರ ಹೊರಡಿಸಿರುವ ಆದೇಶ ನಮಗೆ ಗೊತ್ತಿರಲಿಲ್ಲ. ನಮ್ಮಲ್ಲಿ ಯಾರಿಗೂ ಈ ಸೋಂಕು ತಗುಲಿಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕೊರೋನಾ ಸ್ಕ್ರೀನಿಂಗ್‌ಗೆ ಮುಂದಾದ ವೈದ್ಯರ ಮೇಲೆ ಹಲ್ಲೆ; ಕಲ್ಲೆಸೆದು ಪ್ರತಿರೋಧಿಸಿರುವ ಮಧ್ಯಪ್ರದೇಶದ ಜನ
First published: April 2, 2020, 12:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading