ಕೋವಿಡ್​​-19 ಭೀತಿ ನಡುವೆಯೇ ಎದುರಾಯ್ತು ನೀರಿನ ಸಂಕಷ್ಟ - ದೊಡ್ಡಬಳ್ಳಾಪುರದಲ್ಲಿ ಜನರ ಪರದಾಟ

ನಮಗೆ ಕಳೆದ 15 ದಿನಗಳಿಂದ ಕುಡಿಯಲು ನೀರಿಲ್ಲದೆ ಪರದಾಡುವಂತೆ ಆಗಿದೆ. ಅಧಿಕಾರಿಗಳು ಯಾರೂ ನಮ್ಮ ಕಡೆ ಗಮನ ಹರಿಸುತ್ತಿಲ್ಲ. ಬರೀ ಕಂದಾಯ ವಸೂಲಿ ಮಾಡಲು ಮಾತ್ರ ಬರುತ್ತಾರೆ. ನಮ್ಮ ಕಷ್ಟಗಳಿಗೆ ಸ್ಪಂದಿಸುವುದಿಲ್ಲ. ನಮಗೆ ಕುಡಿಯಲು ನೀರು ಕೊಡಿ ಇಲ್ಲದಿದ್ದರೆ ನೀರಿಲ್ಲದೆ ಸಾಯಬೇಕಾಗುತ್ತದೆ ಎಂದು ಗ್ರಾಮಸ್ಥೆ ಲಕ್ಷ್ಮಮ್ಮ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ‌.

ನೀರಿಲ್ಲದೇ ಪರದಾಡುತ್ತಿರುವ ಗ್ರಾಮಸ್ಥರು

ನೀರಿಲ್ಲದೇ ಪರದಾಡುತ್ತಿರುವ ಗ್ರಾಮಸ್ಥರು

  • Share this:
ಬೆಂಗಳೂರು (ಜೂ. 24): ಒಂದೆಡೆ ಕೊರೋನಾದಿಂದ ಜನರು ಭಯಭೀತರಾಗಿದ್ದರೇ ಇಲ್ಲಿನ ಗ್ರಾಮಸ್ಥರು ಮಾತ್ರ ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮದುರೆ ಸಮೀಪದ ಇಸ್ತೂರು ಪಾಳ್ಯ ಗ್ರಾಮದಲ್ಲಿ  ಕಳೆದ 15 ದಿನದಿಂದ ನೀರೇ ಬರುತ್ತಿಲ್ಲ. ಹೀಗಾಗಿ ಕುಡಿಯಲು ಮತ್ತು ಬಳಕೆ ಮಾಡಲು ನೀರಿಲ್ಲ. ಅಧಿಕಾರಿಗಳು ಕಂಡರೂ ಕಾಣದಂತೆ ಕುರುಡು ಜಾಣತನವನ್ನು ಪ್ರದರ್ಶನ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು 45 ಕುಟುಂಬಗಳು ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಾನುವಾರುಗಳಿಗೆ ನೀರಿಲ್ಲ. ಮುಂಗಾರು ಮಳೆ ಕೊರತೆಯಿಂದ ಸರಿಯಾಗಿ ಮಳೆಯಾಗದೆ ಕೆರೆ ಕುಂಟೆಗಳಲ್ಲಿ ನೀರಿಲ್ಲದೆ ಜಾನುವಾರುಗಳು ಬಾಯಾರಿಕೆಯಿಂದ ಬಳಲುವಂತೆ ಆಗಿದೆ.  ಬಹುತೇಕ ಕುಟುಂಬಳು ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದು, ದನಕರುಗಳಿಗೆ ನೀರಿಲ್ಲದೆ ಪರದಾಡುವಂತೆ ಆಗಿದೆ.

ಸರ್ಕಾರಿ ಸೌಕರ್ಯಗಳಿಂದ ನೀರು ಸಿಗದ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ತೋಟಗಳಲ್ಲಿನ ಬೋರ್‌ವೆಲ್‌ಗಳನ್ನು ಗ್ರಾಮಸ್ತರು ನೀರಿಗಾಗಿ ಅವಲಂಬಿಸಿದ್ದಾರೆ. ಮಳೆ ಇಲ್ಲದೆ ತೋಟಗಳಲ್ಲಿರುವ ನೀರು ಬೆಳೆಗಳಿಗೆ ಸಾಕಾಗುತ್ತಿಲ್ಲ, ಇನ್ನೂ ಎಲ್ಲಾ ಕುಟುಂಬಗಳಿಗೆ ನೀರು ಬಿಡಲು ಹೇಗೆ ಸಾದ್ಯ ಎಂದು ತೋಟಗಳ ಮಾಲೀಕರು ಇಂದೆಡೆ ಅಸಹನೆ ಹೊರಹಾಕಿದರೆ ತೋಟಗಳಲ್ಲಿ ಬಿಡುವ ನೀರನ್ನೇ ನಂಬಿ ಜೀವನ ಮಾಡುತ್ತಿದ್ದಾರೆ.

ಇನ್ನೂ ಮೂಲಭೂತ ಸೌಕರ್ಯವಾದ ಕುಡಿಯುವ ನೀರಿನ ಸಮಸ್ಯೆ ಗ್ರಾಮದಲ್ಲಿ ಉಲ್ಬಣಿಸಿದ್ದು ಹೊನ್ನಾವರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಈ ಇಸ್ತೂರು ಪಾಳ್ಯ ಗ್ರಾಮಕ್ಕೆ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳು ಯಾರೂ ಸಹ ಭೇಟಿ ನೀಡಿಲ್ಲ. ಪಿಡಿಒಗೆ ಕರೆ ಮಾಡಿದರೆ ಬೇಜಾವಾಬ್ದಾರಿ ಉತ್ತರವನ್ನು ನೀಡುತ್ತಾರೆ ಕೆಲವೊಮ್ಮೆ ಕರೆ ಮಾಡಿದರೆ ಉತ್ತರಿಸದೆ ಸಂಪರ್ಕಕ್ಕೆ ಸಿಗುವುದಿಲ್ಲ ಎಂಬುದು ಗ್ರಾಮಸ್ಥರು ಗಂಭಿರ ಆರೋಪವಾಗಿದೆ.

ನಮಗೆ ಕಳೆದ 15 ದಿನಗಳಿಂದ ಕುಡಿಯಲು ನೀರಿಲ್ಲದೆ ಪರದಾಡುವಂತೆ ಆಗಿದೆ. ಅಧಿಕಾರಿಗಳು ಯಾರೂ ನಮ್ಮ ಕಡೆ ಗಮನ ಹರಿಸುತ್ತಿಲ್ಲ. ಬರೀ ಕಂದಾಯ ವಸೂಲಿ ಮಾಡಲು ಮಾತ್ರ ಬರುತ್ತಾರೆ. ನಮ್ಮ ಕಷ್ಟಗಳಿಗೆ ಸ್ಪಂದಿಸುವುದಿಲ್ಲ. ನಮಗೆ ಕುಡಿಯಲು ನೀರು ಕೊಡಿ ಇಲ್ಲದಿದ್ದರೆ ನೀರಿಲ್ಲದೆ ಸಾಯಬೇಕಾಗುತ್ತದೆ ಎಂದು ಗ್ರಾಮಸ್ಥೆ ಲಕ್ಷ್ಮಮ್ಮ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ‌.

ನೀರಿನ ಸಮಸ್ಯೆ ಬಗೆಹರಿಸಲು ಪಂಚಾಯತಿ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಆದಷ್ಟು ಬೇಗ ಪರ್ಯಾಯವಾಗಿ ನೀರನ್ನು ಒದಗಿಸಲು ತಿಳಿಸುತ್ತೇನೆ ಎಂದು ದೊಡ್ಡಬಳ್ಳಾಪುರ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ಮುರುಡಯ್ಯ ತಿಳಿಸಿದರು.
First published: