HOME » NEWS » Coronavirus-latest-news » WASHINGTON STATE ALLOWS FREE WEED FOR ADULTS WHO GET COVID VACCINE STG KVD

Free Ganja: ಕೊರೊನಾ ಲಸಿಕೆ ಪಡೆದವರಿಗೆ ಗಾಂಜಾ ಉಚಿತ ಎಂದು ಘೋಷಿಸಿದ ಈ ರಾಜ್ಯ ಸರ್ಕಾರ..!

ಸಕ್ರಿಯವಾಗಿರುವ ಲಸಿಕಾ ಕೇಂದ್ರಗಳಲ್ಲಿ ಮೊದಲನೆಯ ಇಲ್ಲವೇ ಎರಡನೇ ಡೋಸ್ ಲಸಿಕೆ ಪಡೆದ 21 ವರ್ಷ ಮೇಲ್ಪಟ್ಟ ಗ್ರಾಹಕರು ಗಾಂಜಾ ವಿತರಕರಿಂದ ಈ ಕೊಡುಗೆ ಪಡೆಯಬಹುದು.

Trending Desk
Updated:June 9, 2021, 5:49 PM IST
Free Ganja: ಕೊರೊನಾ ಲಸಿಕೆ ಪಡೆದವರಿಗೆ ಗಾಂಜಾ ಉಚಿತ ಎಂದು ಘೋಷಿಸಿದ ಈ ರಾಜ್ಯ ಸರ್ಕಾರ..!
ಪ್ರಾತಿನಿಧಿಕ ಚಿತ್ರ
  • Share this:

ಕೋವಿಡ್ ಲಸಿಕೆ ಪಡೆಯಲು ಹಿಂದೇಟು ಹಾಕುವವವರು ಭಾರತದಲ್ಲಿ ಮಾತ್ರವಲ್ಲ, ಅಮೆರಿಕದಲ್ಲೂ ದೊಡ್ಡ ಸಂಖ್ಯೆಯಲ್ಲಿ ಇರುವಂತಿದೆ. ಅಮೆರಿಕದ ವಾಷಿಂಗ್ಟನ್ ರಾಜ್ಯ ಸರಕಾರವು ಕೊಟ್ಟಿರುವ ಆಫರ್ ನೋಡಿದರೆ ಇಂಥ ಸ್ಥಿತಿ ಇನ್ನೂ ಭಾರತಕ್ಕೆ ಬಂದಿಲ್ಲವಲ್ಲ ಎಂದು ಸರಕಾರಗಳು ನೆಮ್ಮದಿ ಹೊಂದಬಹುದೇನೋ. ಭಾರತ ಸರಕಾರದ ಲಸಿಕೆ ಅಭಿಯಾನವನ್ನು ಪ್ರೋತ್ಸಾಹಿಸಲು ದೇಶದ ಕೆಲವು ಬ್ಯಾಂಕ್‌ಗಳು ತಮ್ಮಲ್ಲಿ ನಿಶ್ಚಿತ ಠೇವಣಿ ಇರಿಸಿದ ಗ್ರಾಹಕರಿಗೆ ಹೆಚ್ಚಿನ ಬಡ್ಡಿ ನೀಡುವ ಆಫರ್ ಅನ್ನು ನೀವು ಗಮನಿಸಿರಬಹುದು. ಛತ್ತೀಸ್‌ಗಢದಲ್ಲಿ ಲಸಿಕೆ ಪಡೆದವರಿಗೆ ಉಚಿತ ಟೊಮ್ಯಾಟೋವನ್ನೂ ನೀಡಲಾಗಿತ್ತು. ಆದರೆ ಅಮೆರಿಕದ ವಾಷಿಂಗ್ಟನ್ ರಾಜ್ಯ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 21 ವರ್ಷ ದಾಟಿದ ವಯಸ್ಕರು ಲಸಿಕೆಯನ್ನು ಹಾಕಿಸಿಕೊಂಡರೆ ಗಾಂಜಾದ ಒಂದು ಪ್ರೀ ರೋಲ್ಡ್ ಜಾಯಿಂಟ್ ಅನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ವಾಷಿಂಗ್ಟನ್‌ನ ಕ್ಯಾನಬಿಸ್ ಡಿಸ್ಪೆನ್ಸರಿಗಳು ಈ ಉಚಿತ ಕೊಡುಗೆ ನೀಡಲು ಅಲ್ಲಿನ ಸರಕಾರ ಅನುಮತಿ ನೀಡಿದೆ.
‘ಜಾಯಿಂಟ್ಸ್ ಫಾರ್ ಜ್ಯಾಬ್ಸ್’ ಕೊಡುಗೆ‘ಜಾಯಿಂಟ್ಸ್ ಫಾರ್ ಜ್ಯಾಬ್ಸ್’ ಎಂದೇ ಕರೆಯಲಾಗುವ ಈ ಕೊಡುಗೆಯು ಜುಲೈ 12 ರವರೆಗೆ ಲಭ್ಯವಾಗಲಿದೆ. ವಾಷಿಂಗ್ಟನ್ ರಾಜ್ಯದ ಹೆಚ್ಚಿನ ಮಂದಿಗೆ ಲಸಿಕೆ ನೀಡುವುದೇ ಈ ಕೊಡುಗೆಯ ಗುರಿ ಎಂದು ರಾಜ್ಯದ ಲಿಕ್ಕರ್ ಅಂಡ್ ಕ್ಯಾನಬಿಸ್ ಮಂಡಳಿ ಹೇಳಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.ಸಕ್ರಿಯವಾಗಿರುವ ಲಸಿಕಾ ಕೇಂದ್ರಗಳಲ್ಲಿ ಮೊದಲನೆಯ ಇಲ್ಲವೇ ಎರಡನೇ ಡೋಸ್ ಲಸಿಕೆ ಪಡೆದ 21 ವರ್ಷ ಮೇಲ್ಪಟ್ಟ ಗ್ರಾಹಕರು ಗಾಂಜಾ ವಿತರಕರಿಂದ ಈ ಕೊಡುಗೆ ಪಡೆಯಬಹುದು. ಕೇವಲ ಗಾಂಜಾದ ಜಾಯಿಂಟ್ಸ್ ಮಾತ್ರ ಈ ಕೊಡುಗೆಯಡಿ ಬರುತ್ತದೆ. ಉಳಿದ ಯಾವುದೇ ಯಾವುದೇ ಆಹಾರಯೋಗ್ಯ ಉತ್ಪನ್ನವನ್ನೂ ಈ ಕೊಡುಗೆ ಪ್ರಸ್ತಾಪದಲ್ಲಿ ಸೇರಿಸಿಲ್ಲ ಎಂದು ಮಂಡಳಿ ಖಚಿತಪಡಿಸಿದೆ.


ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ವಾಷಿಂಗ್ಟನ್ನ ಶೇಕಡಾ 58 ರಷ್ಟು ಮಂದಿ ಈಗಾಗಲೇ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದರೆ, 49 ಶೇಕಡಾ ಮಂದಿ ಸಂಪೂರ್ಣವಾಗಿ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ. ಹಾಗೆ ನೋಡಿದರೆ ವಾಷಿಂಗ್ಟನ್ ಮಾತ್ರ ಈ ಗಾಂಜಾದ ಕೊಡುಗೆ ನೀಡುವ ಪ್ರಸ್ತಾಪ ಮಾಡಿರುವುದಲ್ಲ. ಅರಿಜೋನಾದ ಡಿಸ್ಪೆನ್ಸರಿ ಕೂಡ ಇತ್ತೀಚೆಗೆ ಇಂಥದ್ದೇ ಕೊಡುಗೆಯನ್ನು ಅಂದರೆ, 21 ಅಥವಾ ಅದನ್ನು ದಾಟಿದ ಅರಿಜೋನಾದ ವಯಸ್ಕರು ಲಸಿಕೆಯನ್ನು ಹಾಕಿಸಿಕೊಂಡರೆ ಗಾಂಜಾದ ಒಂದು ಪ್ರೀ ರೋಲ್ಡ್ ಜಾಯಿಂಟ್ ಅನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿತ್ತು.
ಇದನ್ನೂ ಓದಿ: ಕಣ್ಣೋಟದ ಫೋಟೋ ಬಳಿಕ ಮತ್ತೊಂದು ವ್ಯಾಕ್ಸಿನ್ ಪ್ರಹಸನ ವೈರಲ್: ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರ!


ಲಸಿಕೆ ಹಾಕಿಸಿದರೆ ಉಚಿತ ಬಿಯರ್..!ಲಸಿಕೆ ಹಾಕಿಸಿಕೊಂಡು ಬಂದ ದಾಖಲೆ ನೀಡಿದ ನಾಗರಿಕರಿಗೆ ಉಚಿತ ಬಿಯರ್, ವೈನ್ ಅಥವಾ ಕಾಕ್ ಟೇಲ್ ಅನ್ನು ನೀಡುವ ಆಫರ್ ಅನ್ನು ವಾಷಿಂಗ್ಟನ್ ಲಿಕ್ಕರ್ ಅಂಡ್ ಕ್ಯಾನಬಿಸ್ ಮಂಡಳಿ ನೀಡಿದೆ. ನ್ಯೂಜೆರ್ಸಿ ಸಹಿತ ಅಮೆರಿಕದ ಅನೇಕ ರಾಜ್ಯಗಳು ಹಾಗೂ ನಗರಗಳು ಕೂಡ ಲಸಿಕೆ ಹಾಕಿಸಿಕೊಂಡವರಿಗೆ ಉಚಿತ ಬಿಯರ್ ಕೊಡುವುದಾಗಿ ಪ್ರಕಟಿಸಿವೆ.
ಏಪ್ರಿಲ್ ಮಧ್ಯಭಾಗದಲ್ಲಿ ಲಸಕೀಕರಣದ ದರ ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ಹಾಗೂ ಓಹಿಯೋದಲ್ಲಿ ಲಸಿಕೆ ಹಾಕಿಸಿಕೊಂಡ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜು ವಿದ್ಯಾರ್ಥಿಗಳ ಸಂಪೂರ್ಣ ವೆಚ್ಚ ಭರಿಸುವ ವಿದ್ಯಾರ್ಥಿವೇತನ ನೀಡುವ ಕೊಡುಗೆಯನ್ನು ಪ್ರಕಟಿಸಲಾಗಿತ್ತು.


ಕೆಲವು ರಾಜ್ಯಗಳು ಲಸಿಕೆ ಹಾಕಿಸಿಕೊಂಡವರಿಗೆ 10 ಲಕ್ಷ ಡಾಲರ್ ಮೊತ್ತದ ಡ್ರಾ ಇರುವ ಲಾಟರಿ ಮತ್ತಿತರ ನಗದು ಬಹುಮಾನವವಿರುವ ಲಾಟರಿಯನ್ನು ಪ್ರಕಟಿಸಿದೆ.ಲಸಿಕೆ ಅಭಿಯಾನಕ್ಕೆ ಅಮೆರಿಕ ಮಾಡುತ್ತಿರುವ ಹರಸಾಹಸ ನೋಡಿದರೆ, ಭಾರತದ ಆಫರ್ಗಳೇನೂ ಅಂಥ ‘ರಸವತ್ತಾಗಿ’ ಇದ್ದಂತಿಲ್ಲ!

Published by: Kavya V
First published: June 9, 2021, 5:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories