Corona Fear for Navratri 2021| ಕೇರಳ‌ ಮಾದರಿಯಲ್ಲಿ ಕೊರೋನಾ ಸೋಂಕು ಸ್ಪೋಟದ ಎಚ್ಚರಿಕೆ; ನವರಾತ್ರಿ ಹಬ್ಬಕ್ಕೆ ಕಡಿವಾಣ ಸಾಧ್ಯತೆ?

ನವರಾತ್ರಿ ಹಬ್ಬಕ್ಕೆ ಇನ್ನೂ ಕೇವಲ 2 ದಿನ ಮಾತ್ರ ಬಾಕಿ ಇದೆ. ಆದರೆ, ಗಣೇಶ ಹಬ್ಬದಂತೆ ದುರ್ಗಾದೇವಿ ಪ್ರತಿಷ್ಟಾಪನೆಗೂ ಸಂಕಟ ಎದುರಾಗಲಿದೆಯಾ? ಎಂಬ ಆತಂಕ ಇದೀಗ ಮನೆ ಮಾಡಿದೆ. ಹಬ್ಬಕ್ಕೆ ಅನುಮತಿಗಾಗಿ ಈಗಾಗಲೇ 80 ಕ್ಕೂ ಹೆಚ್ಚು ಅರ್ಜಿಗಳು ಅನುಮತಿಗಾಗಿ ಬಿಬಿಎಂಪಿಯಲ್ಲಿ ಸಲ್ಲಿಸಲಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    ಬೆಂಗಳೂರು (ಅಕ್ಟೋಬರ್​ 05); ಏಪ್ರಿಲ್-ಮೇ ನಲ್ಲಿ ದೇಶದಾದ್ಯಂತ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡಿದ್ದರೂ ಸಹ ಜೂನ್-ಜುಲೈ ವೇಳೆಗೆ ತಹಬಂದಿಗೆ ಬಂದಿತ್ತು. ಆದರೆ, ಕೇರಳ ಸರ್ಕಾರ 10 ದಿನಗಳ ಓನಂ ಹಬ್ಬದ ಆಚರಣೆಗಾಗಿ ಕೋವಿಡ್​ ಮಾರ್ಗಸೂಚಿಯನ್ನು ಸಡಿಲಿಸಿತ್ತು. ಪರಿಣಾನ ಜನ ಹಬ್ಬದ ಸಡಗರದಲ್ಲಿ ಬೀದಿಗೆ ಇಳಿಯಲು ಶುರು ಮಾಡಿದ್ದರು. ಪರಿಣಾಮ ಕೊರೋನಾ ಸ್ಫೋಟ ಉಂಟಾಗಿತ್ತು. ನೋಡನೋಡುತ್ತಲೇ ದಿನಕ್ಕೆ 1 ಲಕ್ಷದ ವರೆಗೆ ಸೋಂಕು ಪ್ರಕರಣಗಳು ಪತ್ತೆಯಾಗಲು ಆರಂಭಿಸಿದ್ದವು. ಪರಿಣಾಮ ದಕ್ಷಿಣ ಭಾರತದಾತ್ಯಂತ ಈ ಸೋಂಕು ಹರಡಲು ಆರಂಭಿಸಿತ್ತು. ಹೀಗಾಗಿ ರಾಜ್ಯ ಸರ್ಕಾರ ಗಣೇಶ ಚತುರ್ಥಿಗೆ ಹಲವು ಕಡಿವಾಣಗಳನ್ನು ಹೇರಿತ್ತು. ಆದರೆ, ಇದೀಗ ಗಣೇಶ ಚತುರ್ಥಿ ಬೆನ್ನಿಗೆ ನವರಾತ್ರಿ ಹಬ್ಬ ಸಹ ಬಂದಿದ್ದು, ರಾಜ್ಯ ಸರ್ಕಾರ ಈ ಹಬ್ಬಕ್ಕೂ ಕಡಿವಾಣ ಹಾಕುತ್ತಾ? ಎಂಬ ಮಾತುಗಳು ಕೇಳಿ ಬರುತ್ತಿವೆ.

    ಈಗಾಗಲೇ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿವೆ. ಪರಿಣಾಮ ಕೋವಿಡ್ ಮಾರ್ಗಸೂಚಿಯಲ್ಲಿ ಹಲವು ಸಡಿಲಿಕೆಗಳನ್ನು ನೀಡಲಾಗಿದೆ. ಆದರೆ, ಕೊರೋನಾ ಕಡಿಮೆಯಾಗಿದೆ ಎಂದು ಮೈಮರೆಯುವಂತಿಲ್ಲ. ಕಡಿವಾಣ ಹಾಕದಿದ್ದರೆ ಕೇರಳ‌ ಮಾದರಿಯಲ್ಲಿ ಸೋಂಕು ಸ್ಪೋಟಗೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಬ್ಬ ಹರಿದಿನಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡಿದ್ದು, ದಸರಾ, ದೀಪಾವಳಿ, ಮಹಾಲಯ ಅಮಾವಾಸ್ಯೆಗೆ ಕಡಿವಾಣ ಅಗತ್ಯ ಎಂದಿದೆ.

    ಈ ಎಲ್ಲಾ ಹಬ್ಬಗಳಿಗೆ ಕಠಿಣ ಮಾರ್ಗಸೂಚಿ ಅನುಸರಿಸುವಂತೆ ತಾಂತ್ರಿಕ ಸಮಿತಿ ಈಗಾಗಲೇ ಸರ್ಕಾರಕ್ಕೆ ಸಲಹೆ ನೀಡಿದೆ. ಹಬ್ಬವನ್ನು ಗಮನದಲ್ಲಿಟ್ಟುಕೊಂಡು TAC (Technical Advisory Committee) ಸಮಿತಿ ಸಲಹೆ ನೀಡಿದ್ದು, ಈಗಾಗಲೇ ಈ ಬಗ್ಗೆ ಪೊಲೀಸ್ ಆಯುಕ್ತರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಆದರೆ, ಪೊಲೀಸ್ ಆಯುಕ್ತರನ್ನು ಕೇಳಿದರೆ ಇದು ಸರ್ಕಾರಕ್ಕೆ ಸಂಬಂಧ ಪಟ್ಟ ವಿಷಯ ಸರ್ಕಾರವೇ ನಿರ್ಧಾರ ಮಾಡಲಿದೆ ಎಂದು ಉತ್ತರಿಸಿದ್ದಾರೆ.

    ಒಟ್ಟಾರೆ ಈ ಎಲ್ಲಾ ಪ್ರಸಂಗಗಳನ್ನು ಗಮನಿಸಿದರೆ ಹಬ್ಬಗಳ ಮೇಲೆ ನಿರ್ಬಂಧ ವಿಧಿಸುವ ಕುರಿತು ಸರ್ಕಾರ ಮತ್ತು ಅಧಿಕಾರ ವರ್ಗದ ನಡುವೆ ಗೊಂದಲ ಇರುವದು ಸ್ಪಷ್ಟವಾಗುತ್ತಿದೆ. ಆದರೆ, ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಸರ್ಕಾರ ಹಬ್ಬಗಳ ಮೇಲೆ ಕಠಿಣ ಹಾಕುವ ಕ್ರಮಕ್ಕೆ ಮುಂದಾಗಲಿದೆ ಎನ್ನಲಾಗುತ್ತಿದೆ.

    ಹಬ್ಬದ ಕುರಿತು ಸರ್ಕಾರಕ್ಕೆ TAC ಸಲಹೆಗಳು

    # ಗೌರಿ ಗಣೇಶ ಹಬ್ಬದ ರೀತಿಯಲ್ಲಿ ನವರಾತ್ರಿ ಹಬ್ಬಕ್ಕೆ ಅವಕಾಶ ಕೊಡಬೇಡಿ.

    # ಜನರ ಗುಂಪುಗೂಡುವಿಕೆಯನ್ನ ನಿಯಂತ್ರಣ ಮಾಡಬೇಕು.

    # ಕಂಟೈನ್ಮೆಂಟ್ ಜೋನ್ ಗಳಲ್ಲಿ ಕಡ್ಡಾಯವಾಗಿ ಜನರ ಸೇರುವಿಕೆಯನ್ನ ನಿಯಂತ್ರಿಸಬೇಕು.

    # ಒಂದು ವೇಳೆ ಜನ ಸೇರುವಿಕೆ ಅನಿವಾರ್ಯ ಆದರೆ ಅದಕ್ಕೆ ಸೂಕ್ತ ಮಾರ್ಗ ಸೂಚಿ ಹೊರಡಿಸಿ.

    # ಕನಿಷ್ಠ ಜನರ ಸೇರುವಿಕೆಗೆ ಮಾತ್ರ ಅನುಮತಿ ನೀಡುವಂತೆ ಸೂಚನೆ.

    # ಪಾಸಿಟಿವಿಟಿ ದರ 2% ಮೇಲ್ಪಟ್ಟಿಟುವ ಜಿಲ್ಲೆಗಳಲ್ಲಿ ಹಬ್ಬದ ಆಚರಣೆಗೆ ಅವಕಾಶ ಕೊಡದಿದ್ದರೆ ಒಳ್ಳೆಯದು.

    # ನಿಯಮಗಳ ಸಡಿಲಿಕೆ ಹಾಗೂ ನಿರ್ಬಂಧಗಳನ್ನು ವಿಧಿಸುವುದು.

    # ಇದಕ್ಕಾಗಿ ಒಂದು ವಾರದ ಕೇಸ್ ಪಾಸಿಟಿವಿಟಿ ದರವನ್ನು ಪರಿಗಣನೆ ಮಾಡಬೇಕು.

    # ಕಾರ್ಯಕ್ರಮ ಆಯೋಜಕರಿಗೆ ಹಾಗೂ ಅಲ್ಲಿ ಸೇರುವ ಜನರಿಗೆ ಲಸಿಕೆ ಕಡ್ಡಾಯ ಮಾಡಿ.

    ಹಬ್ಬಕ್ಕೆ ಕೇವಲ 2 ದಿನ ಅಷ್ಟೇ ಬಾಕಿ.!!

    ನವರಾತ್ರಿ ಹಬ್ಬಕ್ಕೆ ಇನ್ನೂ ಕೇವಲ 2 ದಿನ ಮಾತ್ರ ಬಾಕಿ ಇದೆ. ಆದರೆ, ಗಣೇಶ ಹಬ್ಬದಂತೆ ದುರ್ಗಾದೇವಿ ಪ್ರತಿಷ್ಟಾಪನೆಗೂ ಸಂಕಟ ಎದುರಾಗಲಿದೆಯಾ? ಎಂಬ ಆತಂಕ ಇದೀಗ ಮನೆ ಮಾಡಿದೆ. ಹಬ್ಬಕ್ಕೆ ಅನುಮತಿಗಾಗಿ ಈಗಾಗಲೇ 80 ಕ್ಕೂ ಹೆಚ್ಚು ಅರ್ಜಿಗಳು ಅನುಮತಿಗಾಗಿ ಬಿಬಿಎಂಪಿಯಲ್ಲಿ ಸಲ್ಲಿಸಲಾಗಿದೆ. ಸಾರ್ವಜನಿಕವಾಗಿ ಮೂರ್ತಿ ಕೂರಿಸಿ ಆಚರಣೆಗೆ ಅವಕಾಶ ಕೋರಲಾಗಿದೆ. ಕನಿಷ್ಟ 500 ಜನ‌ ಸೇರುವ ಬಗ್ಗೆಯೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

    ಇದನ್ನೂ ಓದಿ: 10 ದಿನಗಳ ಕ್ವಾರಂಟೈನ್ ಉಲ್ಲೇಖಿಸಿ ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ಅಧಿಕೃತ ಘೋಷಣೆ ನವೀಕರಿಸಿದ ಇಂಗ್ಲೆಂಡ್

    ಮೆರವಣಿಗೆ, ಪ್ರಸದಾ ಹಂಚಿಕೆ ಅನುಮತಿ ಕೋರಲಾಗಿದೆ. ಆದರೆ, ಕೇಂದ್ರ ಸರ್ಕಾರ ಈಗಾಗಲೇ ಹಬ್ಬಗಳ ಬಗ್ಗೆ ಮಾರ್ಗಸೂಚಿ ಹೊರಡಿಸಿ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನವರಾತ್ರಿ ಹಬ್ಬದ ಆಚರಣೆ ಮತ್ತು ಸಾರ್ವಜನಿಕವಾಗಿ ದುರ್ಗಾದೇವಿ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕೆ-ಬೇಡವೇ? ಎಂಬ ನಿರ್ಧಾರ ಇದೀಗ ರಾಜ್ಯ ಸರ್ಕಾರದ ಅಂಗಳದಲ್ಲಿದೆ. ಆದರೆ, ಸರ್ಕಾರ ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ? ಎಂಬುದನ್ನು ಕಾದುನೋಡಬೇಕಿದೆ.
    Published by:MAshok Kumar
    First published: