ತಿಹಾರ್​​​ ಜೈಲಿಗೂ ತಟ್ಟಿದ ಕೊರೋನಾ ಬಿಸಿ; ಆತಂಕದಲ್ಲಿ ಕ್ರಿಸ್ಟಿಯನ್ ಮೈಕೆಲ್; ಜಾಮೀನು ಕೋರಿ ಕೋರ್ಟ್​ ಮೊರೆ

ಇನ್ನು, ತಿಹಾರ್​​ ಜೈಲಿನಲ್ಲಿ ಕೈದಿಗಳಿಗೆ ಕೊರೋನಾ ಸೋಂಕು ಇರಬಹುದು. ಹೀಗೆ ಜನಸಂದಣಿ ಇರುವ ಈ ಜೈಲಿನಲ್ಲಿ ನನ್ನ ಕಕ್ಷಿದಾರರಿಗೆ ಕೋವಿಡ್-19 ವೈರಸ್​​​ ಸೋಂಕು ತಗುಲಿದರೆ, ಜೀವಕ್ಕೆ ಅಪಾಯವಿದೆ ಎಂದು ಮೈಕೆಲ್​​ ಪರ ವಕೀಲ​​ ಶ್ರೀರಾಮ್ ಪರಾಕ್ಕಟ್ ನ್ಯಾಯಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾರೆ.

news18-kannada
Updated:March 26, 2020, 6:52 PM IST
ತಿಹಾರ್​​​ ಜೈಲಿಗೂ ತಟ್ಟಿದ ಕೊರೋನಾ ಬಿಸಿ; ಆತಂಕದಲ್ಲಿ ಕ್ರಿಸ್ಟಿಯನ್ ಮೈಕೆಲ್; ಜಾಮೀನು ಕೋರಿ ಕೋರ್ಟ್​ ಮೊರೆ
ಇನ್ನು, ತಿಹಾರ್​​ ಜೈಲಿನಲ್ಲಿ ಕೈದಿಗಳಿಗೆ ಕೊರೋನಾ ಸೋಂಕು ಇರಬಹುದು. ಹೀಗೆ ಜನಸಂದಣಿ ಇರುವ ಈ ಜೈಲಿನಲ್ಲಿ ನನ್ನ ಕಕ್ಷಿದಾರರಿಗೆ ಕೋವಿಡ್-19 ವೈರಸ್​​​ ಸೋಂಕು ತಗುಲಿದರೆ, ಜೀವಕ್ಕೆ ಅಪಾಯವಿದೆ ಎಂದು ಮೈಕೆಲ್​​ ಪರ ವಕೀಲ​​ ಶ್ರೀರಾಮ್ ಪರಾಕ್ಕಟ್ ನ್ಯಾಯಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾರೆ.
  • Share this:
ನವದೆಹಲಿ(ಮಾ.26): ಅಗಸ್ಟಾ ವೆಸ್ಟ್​​​ ಲ್ಯಾಂಡ್​​ ಹಗರಣ ಸಂಬಂಧ ತಿಹಾರ್​​ ಜೈಲಿನಲ್ಲಿರುವ ಪ್ರಮುಖ ಆರೋಪಿ ಕ್ರಿಸ್ಟಿಯನ್​​​​ ಮೈಕೆಲ್​​​ಗೂ ಕೊರೋನಾ ಬಿಸಿ ತಟ್ಟಿದೆ. ಜೈಲಿನಲ್ಲಿರುವ ಕಾರಣ ತನಗೂ ಕೊರೊನಾ ವೈರಸ್‌ ಸೋಂಕು ತಗುಲುವ ಅಪಾಯ ಇರುವುದರಿಂದ ಮಧ್ಯಂತರ ಜಾಮೀನಿಗಾಗಿ ಮೈಕೆಲ್​​​​​ ಕೋರ್ಟ್​​ ಹೋಗಿದ್ದಾರೆ.

ನನಗೆ 59 ವರ್ಷ. ನನ್ನ ಆರೋಗ್ಯವೂ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಈಗಾಗಲೇ ಹಲವು ಸೋಂಕುಗಳಿಂದ ಬಳಲುತ್ತಿದ್ದೇನೆ. ಹೀಗಿರುವಾಗ ನನಗೆ ಈ ಕೋವಿಡ್-19 ಸೋಂಕು ತಗುಲಿದರೆ ಸಾವು ಮಾತ್ರ ಖಚಿತ.  ಹಾಗಾಗಿ ನನಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಮೈಕೆಲ್​​ ನ್ಯಾಯಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು, ತಿಹಾರ್​​ ಜೈಲಿನಲ್ಲಿ ಕೈದಿಗಳಿಗೆ ಕೊರೋನಾ ಸೋಂಕು ಇರಬಹುದು. ಹೀಗೆ ಜನಸಂದಣಿ ಇರುವ ಈ ಜೈಲಿನಲ್ಲಿ ನನ್ನ ಕಕ್ಷಿದಾರರಿಗೆ ಕೋವಿಡ್-19 ವೈರಸ್​​​ ಸೋಂಕು ತಗುಲಿದರೆ, ಜೀವಕ್ಕೆ ಅಪಾಯವಿದೆ ಎಂದು ಮೈಕೆಲ್​​ ಪರ ವಕೀಲ​​ ಶ್ರೀರಾಮ್ ಪರಾಕ್ಕಟ್ ನ್ಯಾಯಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಅಗಸ್ಟಾ ವೆಸ್ಟ್​ಲ್ಯಾಂಡ್ ಹಗರಣ: ‘ಸೋನಿಯಾ’ಗೆ ಮಾಹಿತಿ ರವಾನಿಸುತ್ತಿದ್ದಾರೆ ಮೈಕೆಲ್​​; ‘ಇಡಿ’ ಗಂಭೀರ ಆರೋಪ!

ಮೈಕೆಲ್​​ ಯಾರು?: ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಕ್ರಿಶ್ಚಿಯನ್ ಮೈಕೆಲ್‌ನನ್ನು ಯುಎಇಯಿಂದ ಗಡಿಪಾರು ಮಾಡಲಾಗಿತ್ತು. ಮೈಕೆಲ್ ಭಾರತಕ್ಕೆ ಬಂದಿಳಿಯುತ್ತಿದ್ದಂತೆಯೇ ಬಂಧಿಸಲಾಗಿತ್ತು. ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಆದೇಶದಂತೆ ಇ.ಡಿ ವಶಕ್ಕೆ ಪಡೆದಿತ್ತು. ಕೊನೆಗೂ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಮೈಕೆಲ್​​ನನ್ನು ಕೋರ್ಟಿಗೆ ಒಪ್ಪಿಸಿದ್ಧಾರೆ.

ಏನಿದು ವಿವಾದ?: 3,600 ಕೋಟಿ ಮೌಲ್ಯದ 12 ವಿವಿಐಪಿ ಹೆಲಿಕ್ಯಾಪ್ಟರ್​ಗಳನ್ನು ಖರೀದಿಗೆ ಸಂಬಂಧಿಸಿದಂತೆ ಹಗರಣ ಬೆಳಕಿಗೆ ಬಂದಿತ್ತು. ಇದರಲ್ಲಿ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿ ಸೇರಿದಂತೆ ಪ್ರಮುಖ ರಾಜಕೀಯ ನಾಯಕರ ಕೈವಾಡವಿದೆ ಎಂದು ಹೇಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಒಪ್ಪಂದವನ್ನು ಖಾತರಿಪಡಿಸಿಕೊಳ್ಳಲು 2014ರಲ್ಲಿ 423 ಕೋಟಿ ಕಿಕ್​ಬ್ಯಾಕ್​ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು.
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading