ಬೆಂಗಳೂರಿನಲ್ಲಿ ಇಂದಿನಿಂದ ಸಂಚಾರ ಆರಂಭಿಸಿದ ಬಿಎಂಟಿಸಿ ವೋಲ್ವೋ ಬಸ್​ಗಳು

Bangalore News: ಬೆಂಗಳೂರಿನಲ್ಲಿ ಈವರೆಗೆ ಸಂಚಾರ ಸ್ಥಗಿತಗೊಳಿಸಿದ್ದ ಬಿಎಂಟಿಸಿ ವೋಲ್ವೋ ಬಸ್​ಗಳು ಇಂದಿನಿಂದ ರಸ್ತೆಗಿಳಿದಿವೆ. ನಗರದಲ್ಲಿ ಒಟ್ಟು 75 ಬಸ್​ಗಳು ಕಾರ್ಯಾಚರಣೆ ಶುರು ಮಾಡಿವೆ ಎಂದು ತಿಳಿದು ಬಂದಿದೆ.

ವೋಲ್ವೋ ಬಸ್

ವೋಲ್ವೋ ಬಸ್

  • Share this:
ಬೆಂಗಳೂರು(ಜೂನ್​ 1): ಕೊರೋನಾದಿಂದಾಗಿ ಲಾಕ್​ಡೌನ್ ಜಾರಿಯಾದಾಗಿನಿಂದ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಬಳಿಕ ಹಂತ-ಹಂತವಾಗಿ ಲಾಕ್​ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಹೀಗಾಗಿ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಈಗಾಗಲೇ ಸಾಮಾನ್ಯ ಬಿಎಂಟಿಸಿ ಬಸ್​ಗಳ ಸಂಚಾರವೂ ಸಹ ಆರಂಭವಾಗಿದೆ. ಇಂದಿನಿಂದ ಬಿಎಂಟಿಸಿ ವೋಲ್ವೋ ಬಸ್​ಗಳು ತಮ್ಮ ಕಾರ್ಯಾಚರಣೆ ಆರಂಭಿಸಿವೆ. 

ಹೌದು, ಬೆಂಗಳೂರಿನಲ್ಲಿ ಈವರೆಗೆ ಸಂಚಾರ ಸ್ಥಗಿತಗೊಳಿಸಿದ್ದ ಬಿಎಂಟಿಸಿ ವೋಲ್ವೋ ಬಸ್​ಗಳು ಇಂದಿನಿಂದ ರಸ್ತೆಗಿಳಿದಿವೆ. ನಗರದಲ್ಲಿ ಒಟ್ಟು 75 ಬಸ್​ಗಳು ಕಾರ್ಯಾಚರಣೆ ಶುರು ಮಾಡಿವೆ ಎಂದು ತಿಳಿದು ಬಂದಿದೆ. 6 ಡಿಪೋಗಳಿಂದ ಬಸ್​ಗಳು ಹೊರಡಲಿದ್ದು, ಅಲ್ಲಿಯೂ ಸಹ ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

Bangalore Lockdown: ಬೆಂಗಳೂರಿನಲ್ಲಿ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ; ಕಮಿಷನರ್ ಆದೇಶ

ಡಿಪೋ 13 ಕಾಮಾಕ್ಯ
ಡಿಪೋ 18 ವೈಟ್ ಫೀಲ್ಡ್
ಡಿಪೋ 25 ಎಚ್‌ಎಸ್ ಆರ್ ಲೇ ಔಟ್
ಡಿಪೋ 29 ಕೆ.ಆರ್ ಪುರಂ
ಡಿಪೋ 28 ಹೆಬ್ಬಾಳದಿಂದ ಬಸ್​​ಗಳು ಸಂಚಾರ ಆರಂಭಿಸಲು ಸಿದ್ದವಾಗಿವೆ. ಈಗಾಗಲೇ ಕಾಮಾಕ್ಯ ಡಿಪೋ ದಲ್ಲಿ ವೋಲ್ವೋ ಬಸ್ ಗಳಿಗೆ ಪೂಜೆ ಮಾಡಲಾಗಿದೆ.

ಇಂದು ವೋಲ್ವೋ ಬಸ್ ಕಾರ್ಯಾಚರಣೆಗೂ ಮುನ್ನ ಕಂಡಕ್ಟರ್​ ಮತ್ತು ಡ್ರೈವರ್​​ಗಳಲ್ಲಿ ಸಾಕಷ್ಟು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಯಾಕೆಂದರೆ,  12 ಬಸ್ ಗಳಿಗೆ 150ಕ್ಕೂ ಹೆಚ್ಚು ಡ್ರೈವರ್​​ಗಳು ಹಾಗೂ ಕಂಡಕ್ಟರ್​ಗಳು ಆಗಮಿಸಿದ್ದರು. ಅಧಿಕಾರಿಗಳು ಅಷ್ಟೂ ಸಿಬ್ಬಂದಿಗೂ ಡ್ಯೂಟಿಗೆ ಬರುವಂತೆ ಆದೇಶಿಸಿದ್ದರು ಎಂದು ತಿಳಿದು ಬಂದಿದೆ. ಡ್ಯೂಟಿ ಸಿಗದವರು ಮನೆಗಳಿಗೆ ವಾಪಸ್​ ತೆರಳಿದ್ದಾರೆ. ಗೊಂದಲ ಸೃಷ್ಟಿಸಿದ ಅಧಿಕಾರಿಗಳಿಗೆ ಸಾರಿಗೆ ಸಿಬ್ಬಂದಿ ಹಿಡಿಶಾಪ ಹಾಕಿದರು.
First published: