ಕೋವಿಡ್ನಿಂದಾಗಿ ದೇಶದೆಲ್ಲೆಡೆ ಆಕ್ಸಿಜನ್ ಅಭಾವ ಉಂಟಾಗಿದೆ. ಸೂಕ್ತ ಸಮಯದಲ್ಲಿ ಆಕ್ಸಿಜನ್ ಸಿಗದೇ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಸೋಂಕಿತರ ಜೀವ ಉಳಿಸಲು ಆಕ್ಸಿಜನ್ ಪೂರೈಕೆಗಾಗಿ ಅವರ ಸಂಬಂಧಿಗಳು ಒದ್ದಾಡುತ್ತಿರುವ ದೃಶ್ಯಗಳು ದೇಶದೆಲ್ಲೆಡೆ ನಡೆಯುತ್ತಲೇ ಇದೆ. ಇದೇ ರೀತಿ ಉತ್ತರ ಪ್ರದೇಶದ ಆಗ್ರಾದ ವ್ಯಕ್ತಿಯೊಬ್ಬ ಪೊಲೀಸರ ಮುಂದೆ ಬೇಡಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಯವಿಟ್ಟು ಆಕ್ಸಿಜನ್ ತೆಗೆದುಕೊಂಡು ಹೋಗಬೇಡಿ. ನೀವು ಆಕ್ಸಿಜನ್ ತೆಗೆದುಕೊಂಡು ಹೋದರೆ ನನ್ನ ತಾಯಿ ಸತ್ತೆ ಹೋಗುತ್ತಾಳೆ. ಆಕೆಯ ಜೀವ ಉಳಿಸಿ ಎಂದು ವ್ಯಕ್ತಿ ಪೊಲೀಸರ ಎದುರು ಅಂಗಲಾಚುತ್ತಿದ್ದಾನೆ. ಈ ವಿಡಿಯೋ ನೋಡಿದ ಬಹುತೇಕ ಮಂದಿ ಉತ್ತರ ಪ್ರದೇಶದಲ್ಲಿನ ಆಕ್ಸಿಜನ್ ಅಭಾವದ ಬಗ್ಗೆ ಯೋಗಿ ಸರ್ಕಾರವನ್ನು ಟೀಕಿಸಿದ್ದಾರೆ.
ಆಗ್ರಾದ ಉಪಾದ್ಯಾಯ ಆಸ್ಪತ್ರೆಯಲ್ಲಿ ಪೊಲೀಸರು ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಹೋಗುವಾಗ ಪಿಪಿಇ ಕಿಟ್ ಧರಿಸಿದ ವ್ಯಕ್ತಿಯೊಬ್ಬ ದಯಮಾಡಿ ಆಕ್ಸಿಜನ್ ತೆಗೆದುಕೊಂಡು ಹೋಗಬೇಡಿ ಎಂದು ಮಂಡಿಯೂರಿ ಅಂಗಲಾಚಿದ್ದಾನೆ. ಈ ವಿಡಿಯೋವನ್ನು ಯೂಥ್ ಕಾಂಗ್ರೆಸ್ ಶೇರ್ ಮಾಡಿದ್ದು, ಯೋಗಿ ಸರ್ಕಾರದ ವಿರುದ್ಧ ಟೀಕಿಸಿದೆ.
ಇದನ್ನು ಓದಿ: ಸಿದ್ಧಾರ್ಥ್ಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ; ಬಿಜೆಪಿ ಐಟಿ ಸೆಲ್ ವಿರುದ್ಧ ನಟ ಆಕ್ರೋಶ
ಇನ್ನು ಈ ಘಟನೆ ಕುರಿತು ಸ್ಪಷ್ಟ ಪಡಿಸಿರುವ ಆಗ್ರಾ ಪೊಲೀಸರು, ನಾವು ಯಾವುದೇ ಆಕ್ಸಿಜನ್ ಅನ್ನು ತೆಗೆದುಕೊಂಡು ಹೋಗುತ್ತಿರಲಿಲ್ಲ. ಖಾಲಿ ಆಕ್ಸಿಜನ್ ಟ್ಯಾಂಕ್ಗಳನ್ನು ನಾವು ಕೊಂಡೊಯ್ಯುತ್ತಿದ್ದೇವು. ಈ ವೇಳೆ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ದಾಖಲಾಗಿರುವ ತಮ್ಮ ಸಂಬಂಧಿಗೆ ಆಕ್ಸಿಜನ್ ಅನ್ನು ವ್ಯವಸ್ಥೆ ಮಾಡುವಂತೆ ಕೇಳಿಕೊಳ್ಳುತ್ತಿದ್ದ. ನಾವು ಯಾವುದೇ ಆಸ್ಪತ್ರೆಯಿಂದ ಆಕ್ಸಿಜನ್ ತೆಗೆದುಕೊಂಡು ಹೋಗಿಲ್ಲ ಎಂದಿದ್ದಾರೆ.
ಅಲ್ಲದೇ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಜನರಿಗೆ ತಪ್ಪು ಸಂದೇಶ ರವಾನೆ ಮಾಡಲಾಗುತ್ತಿದೆ. ಇಂತಹ ಘಟನೆಗಳನ್ನು ಖಂಡಿಸುತ್ತೇವೆ ಎಂದು ಆಗ್ರಾ ಎಸ್ಪಿ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಕೆಲವು ಆಸ್ಪತ್ರೆಗಳು ಆಕ್ಸಿಜನ್ ಕೊರತೆಯನ್ನು ಅನುಭವಿಸಾಗುತ್ತಿದೆ ಎಂದಿದ್ದರು. ಆಸ್ಪತ್ರೆಗೆ ದಾಖಲಾಗದ ಕೆಲವು ರೋಗಿಗಳು ತಮ್ಮ ಸೋಂಕಿತರಿಗೆ ಆಕ್ಸಿಜನ್ ಪೂರೈಕೆಗೆ ಆಗುತ್ತಿರುವ ತೊಂದರೆ ಬಗ್ಗೆ ಆರೋಪ ಮಾಡಿದ್ದವು. ಆದರೂ ಕೂಡ ಉತ್ತರ ಪ್ರದೇಶ ಸರ್ಕಾರ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಾಗಲೀ, ಬೆಡ್ ಸಮಸ್ಯೆಯಾಗಲಿ ಇಲ್ಲ ಎಂದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ