ನರಬಲಿ: ಕೊರೋನಾದಿಂದ ಕಾಪಾಡೆಂದು ದೇವರೆದುರು ಮನುಷ್ಯನ ತಲೆ ಕತ್ತರಿಸಿಟ್ಟ ಅರ್ಚಕ!

ಕನಸಿನಲ್ಲಿ ದೇವರು ಬಂದು ನರಬಲಿ ನೀಡಿದರೆ ಕೊರೋನಾ ನಿರ್ಮೂಲನೆ ಆಗುತ್ತದೆ ಎಂದು ಹೇಳಿದ್ದರಿಂದ ದೇಶದ ಒಳಿತಿಗಾಗಿ ನರಬಲಿ ನೀಡಿದೆ ಎಂದು ಅರ್ಚಕ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

Sushma Chakre | news18-kannada
Updated:May 29, 2020, 6:54 AM IST
ನರಬಲಿ: ಕೊರೋನಾದಿಂದ ಕಾಪಾಡೆಂದು ದೇವರೆದುರು ಮನುಷ್ಯನ ತಲೆ ಕತ್ತರಿಸಿಟ್ಟ ಅರ್ಚಕ!
ನರಬಲಿ ನೀಡಿದ ಅರ್ಚಕ
  • Share this:
ಕೊರೋನಾ ಎಂಬ ಮಹಾಮಾರಿಯನ್ನು ತೊಲಗಿಸಲು ವೈದ್ಯರು ಹಗಲಿರುಳು ಸಂಶೋಧನೆಗಳನ್ನು ಮಾಡುತ್ತಲೇ ಇದ್ದಾರೆ. ಆದರೂ ಮೂರ್ನಾಲ್ಕು ತಿಂಗಳಿಂದ ಇಡೀ ವಿಶ್ವದಲ್ಲಿ ಕೊರೋನಾಗೆ ಪರಿಹಾರ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೆ, ಒರಿಸ್ಸಾದ ಅರ್ಚಕನೊಬ್ಬ ಕೊರೋನಾ ನಿರ್ಮೂಲನೆ ಮಾಡೆಂದು ದೇವರಿಗೆ ನರಬಲಿ ನೀಡಿರುವ ಘಟನೆ ನಡೆದಿದೆ.

ದೇವರಿಗೆ ಮನುಷ್ಯನನ್ನು ಬಲಿ ಕೊಡುವುದರಿಂದ ಕೊರೋನಾ ತೊಲಗುತ್ತದೆ ಎಂದು ನಂಬಿದ್ದ ಒರಿಸ್ಸಾದ ಕಟಕ್ ಜಿಲ್ಲೆಯ ನರಸಿಂಗ್‍ಪುರದ ಅರ್ಚಕ 72 ವರ್ಷದ ಸನ್ಸಾರಿ ಓಜಾ ಎಂಬಾತ ಮಾಡಿರುವ ಈ ಕೆಲಸಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಕಟಕ್ ಜಿಲ್ಲೆಯ ಬಂಧಾಹೂಡಾದ ಬಳಿ ಇರುವ ಬಂಧಾ ಮಾ ಬುಧ ಬ್ರಾಹ್ಮಿಣಿ ದಿ ದೇವಸ್ಥಾನದ ಹಿರಿಯ ಅರ್ಚಕರಾಗಿರುವ ಸನ್ಸಾರಿ ಬುಧವಾರ ರಾತ್ರಿ ದೇವರಿಗೆ ನರಬಲಿ ನೀಡಿದ್ದಾರೆ.

ಇದನ್ನೂ ಓದಿ: Viral Video: ಸತ್ತ ಅಮ್ಮನನ್ನು ಎಬ್ಬಿಸಲು ಮಗುವಿನ ಪರದಾಟ; ಟ್ವಿಟ್ಟರ್​ನಲ್ಲಿ ಮನಕಲಕುವ ವಿಡಿಯೋ ವೈರಲ್

ತನ್ನ ಪಕ್ಕದ ಮನೆಯ ವ್ಯಕ್ತಿಯ ತಲೆಯನ್ನೇ ಕತ್ತರಿಸಿ, ಬುಧವಾರ ರಾತ್ರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಸನ್ಸಾರಿ ನಂತರ ಪೊಲೀಸರ ಮುಂದೆ ಶರಣಾಗಿದ್ದಾರೆ. ಸನ್ಸಾರಿಯ ಪಕ್ಕದ ಮನೆಯ 52 ವರ್ಷದ ಸರೋಜ್ ಕುಮಾರ್ ಪ್ರಧಾನ್ ಎಂಬುವವರು ಅರ್ಚಕನ ಕೃತ್ಯಕ್ಕೆ ಬಲಿಯಾಗಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಕನಸಿನಲ್ಲಿ ದೇವರು ಬಂದು ನರಬಲಿ ನೀಡಿದರೆ ಕೊರೋನಾ ನಿರ್ಮೂಲನೆ ಆಗುತ್ತದೆ ಎಂದು ಹೇಳಿದ್ದರಿಂದ ದೇಶದ ಒಳಿತಿಗಾಗಿ ನರಬಲಿ ನೀಡಿದೆ ಎಂದು ಅರ್ಚಕ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

 
First published: May 29, 2020, 6:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading