HOME » NEWS » Coronavirus-latest-news » VIOLATION OF CORONA RULE ARREST OF A FAMOUS PUNJABI ACTOR HTV MAK

CoronaVirus: ಕೊರೋನಾ ನಿಯಮ ಉಲ್ಲಂಘನೆ, ಖ್ಯಾತ ನಟನ ಬಂಧನ; ಸ್ಟಾರ್​ಗಳ ಬೇಜವಾಬ್ದಾರಿಗೆ ವ್ಯಾಪಕ ಖಂಡನೆ!

ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ನಟ ಜಿಮ್ಮಿ ಶೇರ್ಗಿಲ್ ಸಹ ಕೊರೋನಾ ಲಾಕ್‌ಡೌನ್ ರೂಲ್ಸ್ಅನ್ನು ಉಲ್ಲಂಘಿಸಿ ಪಂಜಾಬ್‌ನ ಲುಧಿಯಾನದಲ್ಲಿ ತಮ್ಮ ವೆಬ್‌ಸಿರೀಸ್ ಒಂದರ ಶೂಟಿಂಗ್ ನಡೆಸಿ ಪೊಲೀಸರ ಅತಿಥಿಯಾಗಿದ್ದರು.

news18-kannada
Updated:May 3, 2021, 6:54 AM IST
CoronaVirus: ಕೊರೋನಾ ನಿಯಮ ಉಲ್ಲಂಘನೆ, ಖ್ಯಾತ ನಟನ ಬಂಧನ; ಸ್ಟಾರ್​ಗಳ ಬೇಜವಾಬ್ದಾರಿಗೆ ವ್ಯಾಪಕ ಖಂಡನೆ!
ಪಂಜಾಬಿ ನಟ ಜಿಪ್ಪಿ ಗ್ರೇವಾಲ್.
  • Share this:
ಕೊರೋನಾನಾ ಎರಡನೇ ಅಲೆಯ ಅಟ್ಟಹಾಸ ಮಿತಿಮೀರಿದೆ. ಭಾರತದಾದ್ಯಂತ ಪ್ರತಿದಿನ ಸರಾಸರಿ ಮೂರೂವರೆ ಲಕ್ಷಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೀಗಾಗಿಯೇ ಬಹುತೇಕ ಎಲ್ಲ ರಾಜ್ಯಗಳಲ್ಲೂ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಆದರೆ ಇಂತಹ ಕಠಿಣ ಕ್ರಮಗಳನ್ನು ಪಾಲಿಸುವ ಮೂಲಕ ಎಲ್ಲರಿಗೂ ಮಾದರಿಯಾಗಬೇಕಾದ ಸ್ಟಾರ್‌ಗಳೇ ನಿಯಮಗಳನ್ನು ಗಾಳಿಗೆ ತೂರುವ ಪ್ರಕರಣಗಳು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು, ಇತ್ತೀಚೆಗಷ್ಟೇ ಖ್ಯಾತ ಬಾಲಿವುಡ್ ಹಾಗೂ ಪಂಜಾಬಿ ನಟ ಜಿಮ್ಮೆ ಶೆರ್ಗಿಲ್ ಅವರು ಕೊರೋನಾ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಶೂಟಿಂಗ್‌ನಲ್ಲಿ ತೊಡಗಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಲಾಗಿತ್ತು. ಅವರ ಬೆನ್ನಲ್ಲೇ ಮತ್ತೊಬ್ಬ ಪಂಜಾಬಿ ಚಿತ್ರರಂಗದ ಸ್ಟಾರ್ ನಟ, ಖ್ಯಾತ ಸಿಂಗರ್ ಕೂಡ ಆಗಿರುವ ಜಿಪ್ಪಿ ಗ್ರೇವಾಲ್ ಕೂಡ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಶೂಟಿಂಗ್‌ನಲ್ಲಿ ಪಾಲ್ಗೊಂಡು ಬಂಧನಕ್ಕೊಳಗಾಗಿದ್ದಾರೆ.

ದೇಶದ ಬಹುತೇಕ ಎಲ್ಲ ರಾಜ್ಯಗಳಂತೆಯೇ ಪಂಜಾಬ್‌ನಲ್ಲೂ ಕೊರೊನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಹೀಗಾಗಿ ಪಂಜಾಬ್ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಸಿನಿಮಾ ಹಾಗೂ ಧಾರಾವಾಹಿ ಚಿತ್ರೀಕರಣಕ್ಕೂ ಬ್ರೇಕ್ ಹಾಕಲಾಗಿದೆ. ಆದರೆ ನಟ ಜಿಪ್ಪಿ ಗ್ರೇವಾಲ್, ಪಂಜಾಬ್‌ನ ಪಟಿಯಾಲದ ಬಾನೂರ್‌ನಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ನೂರಕ್ಕೂ ಹೆಚ್ಚು ಜನರ ತಂಡದ ಜೊತೆ ಶೂಟಿಂಗ್‌ನಲ್ಲಿ ತೊಡಗಿದ್ದು ಬೆಳಕಿಗೆ ಬಂದಿದೆ.

ತಕ್ಷಣ ಎಚ್ಚೆತ್ತ ಸ್ಥಳೀಯ ಪೊಲೀಸರು ಬಾನೂರಿಗೆ ತೆರಳಿದ್ದಾರೆ. ಪೊಲೀಸರು ಬಂದಿದ್ದನ್ನ ಕಂಡ ಕೂಡಲೇ ಚಿತ್ರೀಕರಣ ಸ್ಥಳದಲ್ಲಿ ಜಮಾಯಿಸಿದ್ದ ನೂರಕ್ಕೂ ಹೆಚ್ಚು ªಜನರಲ್ಲಿ ಬಹುತೇಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹೀಗಾಗಿಯೇ ಸ್ಥಳದಲ್ಲಿದ್ದ ಚಿತ್ರದ ನಾಯಕ ಜಿಪ್ಪಿ ಗ್ರೇವಾಲ್ ಹಾಗೂ ಚಿತ್ರತಂಡದ ಕೆಲವರನ್ನು ಪೊಲೀಸರು ಬಂಧಿಸಿ ಬಾನೂರ್ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ಜಿಪ್ಪಿ ಗ್ರೇವಾಲ್ ಹಾಗೂ ತಂಡದ ಮೇಲೆ ಐಪಿಸಿ ಸೆಕ್ಷನ್ ೧೮೮, ಎಪಿಡೆಮಿಕ್ ಡಿಸೀಸ್ ಆಕ್ಟ್ ಹಾಗೂ ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನು ಜಿಪ್ಪಿ ಗ್ರೇವಾಲ್ ಬಂಧನದ ವಿಷಯ ಗೊತ್ತಾಗುತ್ತಲೇ ಹಲವು ರಾಜಕಾರಿಣಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಬಾನೂರ್ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಕರೆ ಮಾಡಿ ಪ್ರಕರಣ ದಾಖಲಿಸಿಕೊಳ್ಳದಿರಲು ಹಾಗೂ ಕ್ರಮ ಕೈಗೊಳ್ಳದಿರಲು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಇನ್ನು ಬಂಧನವಾದ ಕೆಲವೇ ಸಮಯದಲ್ಲಿ ನಟ ಜಿಪ್ಪಿ ಗ್ರೇವಾಲ್ ಹಾಗೂ ಚಿತ್ರತಂಡದವರು ಬೇಲ್ ಪಡೆದಿದ್ದಾರೆ.

ಇದನ್ನೂ ಓದಿ: Happy Birthday Harshika Poonacha: ಜನರ ಮುಖದ ಮೇಲೆ ಮತ್ತೆ ನಗು ಮೂಡಿದಾಗಲೇ ನನ್ನ ಹುಟ್ಟುಹಬ್ಬ ಎಂದ ಹರ್ಷಿಕಾ ಪೂಣಚ್ಚ

ಚಿತ್ರತಂಡದವರು ಶೂಟಿಂಗ್‌ಗಾಗಿ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ಆದರೆ ಸದ್ಯದ ಪರಿಸ್ಥಿತಿ ಚಿತ್ರೀಕರಣಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಹಾಗಿದ್ದರೂ ಸಹ ಚಿತ್ರತಂಡದವರು ಬಾನೂರ್‌ಗೆ ಬಂದು ಎಲ್ಲ ಕ್ರಮಗಳನ್ನು ಗಾಳಿಗೆ ತೂರಿ ಶೂಟಿಂಗ್‌ನಲ್ಲಿ ತೊಡಗಿದ್ದರು ಎನ್ನಲಾಗಿದೆ. ಇದು ಕೊನೆಯ ದಿನದ ಶೂಟ್ ಆಗಿದ್ದು, ಕ್ಲೈಮ್ಯಾಕ್ಸ್ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿತ್ತು ಎನ್ನಲಾಗಿದೆ.
Youtube Video
ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ನಟ ಜಿಮ್ಮಿ ಶೇರ್ಗಿಲ್ ಸಹ ಕೊರೋನಾ ಲಾಕ್‌ಡೌನ್ ರೂಲ್ಸ್ಅನ್ನು ಉಲ್ಲಂಘಿಸಿ ಪಂಜಾಬ್‌ನ ಲುಧಿಯಾನದಲ್ಲಿ ತಮ್ಮ ವೆಬ್‌ಸಿರೀಸ್ ಒಂದರ ಶೂಟಿಂಗ್ ನಡೆಸುತ್ತಿದ್ದರು. ವಿಷಯ ಗೊತ್ತಾಗಿ ಸ್ಥಳೀಯ ಪೊಲೀಸರು ಶೂಟಿಂಗ್ ಸ್ಥಳಕ್ಕೆ ಭೇಟಿ ಕೊಟ್ಟು ಚಿತ್ರೀಕರಣ ಸ್ಥಗಿತಗೊಳಿಸುವಂತೆ ತಿಳಿಸಿದ್ದರು. ಜೊತೆಗೆ ನಟ ಜಿಮ್ಮಿ ಶೇರ್ಗಿಲ್ ಸೇರಿದಂತೆ ೩೫ ಜನರ ಮೇಲೆ ಎಫ್‌ಐಆರ್ ದಾಖಲಿಸಿದ್ದರು.
Published by: MAshok Kumar
First published: May 3, 2021, 6:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories