ರಾಮನಗರ(ಮೇ.04): ಎಣ್ಣೆ ಏಟಲ್ಲಿ ಕೆಲವರು ಮಾಗಡಿ ಶಾಸಕ ಎ. ಮಂಜುಗೆ ಬಹಿರಂಗವಾಗಿ ಧಮ್ಕಿ ಹಾಕಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿಯಲ್ಲಿ ನಡೆದಿದೆ. ಮಾಗಡಿಯ ಬಸವನಪಾಳ್ಯದಲ್ಲಿ ರಸ್ತೆ ಕಾಮಗಾರಿಯ ಪೂಜೆಗೆ ಶಾಸಕ ಎ.ಮಂಜು ಗ್ರಾಮಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಕೆಲ ಕುಡುಕರು ಶಾಸಕರ ಮೇಲೆ ಗರಂ ಆಗಿ ಬಾಯಿಗೆಬಂದಂತೆ ಅವಾಜ್ ಹಾಕಿದ್ದಾರೆ.
ಗ್ರಾಮದ ಹಾಲಿನ ಡೈರಿಯ ಆಡಳಿತ ಮಂಡಳಿ ಸೂಪರ್ ಸೀಡ್ ಆದರೂ ನೀವು ಯಾವ ಕ್ರಮವೂ ಕೈಗೊಳ್ಳುತ್ತಿಲ್ಲ. ಬೇಕಾಬಿಟ್ಟಿ ಗ್ರಾಮಕ್ಕೆ ಬರುತ್ತೀರಿ. ನಮ್ಮ ಊರಿಗೆ ಏನ್ ಕೆಲಸ ಮಾಡಿದ್ದೀರಿ? ಯಾವ ಅಭಿವೃದ್ಧಿ ಕೆಲಸಗಳು ಮಾಡಿಲ್ಲ ಎಂದು ಎಣ್ಣೆ ಕುಡಿದ ಮತ್ತಿನಲ್ಲಿ ಪ್ರಶ್ನಿಸಿದ್ಧಾರೆ.
ಇನ್ನು, ಈ ಘಟನೆ ನಡೆದ ಕೂಡಲೇ ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಇನ್ನು ಕೆಲವರನ್ನು ವಿಚಾರಣೆಗೊಳಪಡಿಸಿ ಪರಿಸ್ಥಿತಿ ನಿಯಂತ್ರಣ ಮಾಡಿದ್ದಾರೆ. ಜತೆಗೆ ಗ್ರಾಮದ ಶಾಸಕ ಎ. ಮಂಜು ಬೆಂಬಲಿಗರು ಮತ್ತು ಎಣ್ಣೆ ಹೊಡೆದು ಗಲಾಟೆ ಮಾಡಿದವರ ನಡುವೆಯೂ ವಾಗ್ವಾದ ನಡೆದಿದೆ.
ಇನ್ನು, ಈ ಗಲಾಟೆ ಹಿಂದೆ ಮಾಜಿ ಶಾಸಕ ಮತ್ತು ಕಾಂಗ್ರೆಸ್ ಮುಖಂಡ ಬಾಲಕೃಷ್ಣಾ ಬೆಂಬಲಿಗರ ಕೈವಾಡ ಇದೆ ಎಂದು ಶಾಸಕ ಎ ಮಂಜು ಬೆಂಬಲಿರು ಸಂಶಯ ವ್ಯಕ್ತಪಡಿಸಿದ್ದಾರೆ.
(ವರದಿ: ಎ.ಟಿ ವೆಂಕಟೇಶ್)
ಇದನ್ನೂ ಓದಿ: LockDown News: ದೇಶದಾದ್ಯಂತ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣ ದರ ತುಂಬುವುದಾಗಿ ಘೊಷಿಸಿದ ಕಾಂಗ್ರೆಸ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ