‘ನಾನು ಸಮಾಜವಿರೋಧಿ’ - ಲಾಕ್​ಡೌನ್ ಉಲ್ಲಂಘಿಸಿದವರ ಹಣೆ ಮೇಲೆ ಪೊಲೀಸರ ಬರಹ

ಪೊಲೀಸರು ಹಲವಾರು ಬಾರಿ ಸಮಾಧನಾದಿಂದ, ಸಿಟ್ಟಿನಿಂದ, ಲಾಠಿಯಿಂದ ಬುದ್ದಿವಾದ ಹೇಳಿದರೂ ಅನೇಕ ಜನ ಕೇಳುತ್ತಿಲ್ಲ. ಇದರಿಂದ ರೋಸಿ ಹೋಗಿರುವ ಪೊಲೀಸರು ಈ ಹೊಸ ವಿಧಾನ ಕಂಡುಕೊಂಡಿದ್ದಾರೆ.

news18-kannada
Updated:March 30, 2020, 7:14 AM IST
‘ನಾನು ಸಮಾಜವಿರೋಧಿ’ - ಲಾಕ್​ಡೌನ್ ಉಲ್ಲಂಘಿಸಿದವರ ಹಣೆ ಮೇಲೆ ಪೊಲೀಸರ ಬರಹ
ನಿಯಮ ಉಲ್ಲಂಘಿಸಿದ ವ್ಯಕ್ತಿಯ ಹಣೆಗೆ ವಿಜಯಪುರ ಪೊಲೀಸರಿಂದ ಮುದ್ರೆ
  • Share this:
ವಿಜಯಪುರ(ಮಾ. 29): ಭಾರತ ಲಾಕ್​ಡೌನ್ ಉಲ್ಲಂಘಿಸಿದವರ ಹಣೆಯ ಸೀಲ್ ಹಾಕುವ ಮೂಲಕ ವಿಜಯಪುರ ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಎಷ್ಟೇ ಹೇಳಿದರೂ ಕೇಳದ ಪುಂಡರ ವಿರುದ್ಧ ವಿಜಯಪುರ ಪೊಲೀಸರೂ ರೋಸಿ ಹೋಗಿದ್ದು, ವಿನಾಕಾರಣ ರಸ್ತೆಗಿಳಿದು ಶೋ ತೋರಿಸುತ್ತಿದ್ದವರಿಗೆ ಈ ಮೂಲಕ ತಕ್ಕ ಪಾಠ ಕಲಿಸಿದ್ದಾರೆ.

ಲಾಕ್ ಡೌನ್ ಉಲ್ಲಂಘಿಸಿದರಿಗೆ ವಿಶಿಷ್ಟ ರೀತಿ ಶಿಕ್ಷೆ ನೀಡಲಾಗುತ್ತಿದ್ದು, ಹಣೆಯ ಮೇಲೆ ಮುದ್ರೆ ಒತ್ತಲಾಗುತ್ತಿದೆ. ನಾನು ಸಮಾಜದ ವಿರೋಧಿ ಇದ್ದೇನೆ.  ಲಾಕ್ ಡೌನ್ ಉಲ್ಲಂಘಿಸಿದ್ದೇನೆ ಎನ್ನುವ ಬರಹವನ್ನು ಈ ಮುದ್ರೆ ಹೊಂದಿದ್ದು, ಅದನ್ನು ಇಂಥವರ ಹಣೆಯ ಮೇಲೆ ಒತ್ತುವ ಮೂಲಕ ಪೊಲೀಸರು ಹೊಸ ವಿಧಾನ ಕಂಡುಕೊಂಡಿದ್ದಾರೆ.

ಇದನ್ನೂ ಓದಿ: ನಾಲ್ಕೈದು ರಾಜ್ಯ ಸರ್ಕಾರಗಳನ್ನು ಒಪ್ಪಿಸಿದ ವಿಜಯಪುರ ಅಧಿಕಾರಿಗಳು; ತವರಿಗೆ ಮರಳಿದ 3 ಸಾವಿರ ಉತ್ತರ ಭಾರತೀಯ ಕಾರ್ಮಿಕರು

ಮುಂದಿನ ಬಾರಿ ಲಾಕ್​ಡೌನ್ ಉಲ್ಲಂಘಿಸಿದಂತೆ ಈ ಮೂಲಕ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ವಿಜಯಪುರ ಪೊಲೀಸರ ವಿನೂತನ ಶಿಕ್ಷೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ: ಮಹೇಶ ವಿ. ಶಟಗಾರ

First published:March 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading