ವಿಜಯಪುರದಲ್ಲಿ ಕೋವಿಡ್​​-19 ಕಾವು: ಐದು ದಿನದಲ್ಲಿ 147 ಕೇಸ್​, 4 ಪೊಲೀಸ್​ ಸ್ಟೇಷನ್​ ಸೀಲ್​ಡೌನ್​​​

ವಿಜಯಪುರ ಜಿಲ್ಲಾದ್ಯಂತ ಕೊರೋನಾ ಅಟ್ಟಹಾಸ ಅತೀ ವೇಗವಾಗಿ ಪಸರಿಸುತ್ತಿದ್ದು, ಜನತೆಗೆ ಆತಂಕ ಮೂಡಿಸಿದೆ. ಇದೀಗ ಸರಕಾರದ ನಿರ್ದೇಶನದಂತೆ ಪ್ರತಿನಿತ್ಯ ಕೊರೋನಾ ಟೆಸ್ಟಿಂಗ್ ಸಂಖ್ಯೆಯನ್ನು ವಿಜಯಪುರ ಜಿಲ್ಲಾಡಳಿತ ಗಣನೀಯವಾಗಿ ಹೆಚ್ಚಳ ಮಾಡಿದೆ. ಈಗ ಪ್ರತಿನಿತ್ಯ ಸುಮಾರು 800 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆ ಮಾಡಲಾಗುತ್ತಿದೆ.

news18-kannada
Updated:July 5, 2020, 1:55 PM IST
ವಿಜಯಪುರದಲ್ಲಿ ಕೋವಿಡ್​​-19 ಕಾವು: ಐದು ದಿನದಲ್ಲಿ 147 ಕೇಸ್​, 4 ಪೊಲೀಸ್​ ಸ್ಟೇಷನ್​ ಸೀಲ್​ಡೌನ್​​​
ಸಾಂದರ್ಭಿಕ ಚಿತ್ರ
  • Share this:
ವಿಜಯಪುರ(ಜು.05): ಸಾಕಷ್ಟು ಮುನ್ನೆಚ್ಚರಿಕಾ ಕ್ರಮದ ಮಧ್ಯೆಯೂ ಕೊರೋನಾ ಸೋಂಕು ಹರಡುತ್ತಿರುವ ವೇಗ ಬಸವನಾಡಿನ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.  ಕಳೆದ ಕೇವಲ 5 ದಿನದಲ್ಲಿ 147 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದು ಇಡೀ ಜಿಲ್ಲೆಯ ಜನರಲ್ಲಿ ದುಗುಡ ಹೆಚ್ಚಿಸಿದೆ.

ವಿಜಯಪುರ ಜಿಲ್ಲೆಯಲ್ಲಿ ಮೊದಲ ಕೊರೋನಾ ಕೇಸ್ ಮೇ.12 ರಂದು ಪತ್ತೆಯಾಗಿತ್ತು.  ನಂತರ ಈ ಕೇಸುಗಳ ಸಂಖ್ಯೆ 100 ತಲುಪಲು 19 ದಿನಗಳು ಬೇಕಾದವು. 200ರ ಗಡಿ ತಲುಪಲು ಕೇವಲ 8 ದಿನಗಳು ತಗುಲಿದರೆ, 300 ಸಂಖ್ಯೆಗೇರಲು 15 ದಿನಗಳು ಹಿಡಿದವು.  ಮುಂದೆ ಕೇವಲ 8 ದಿನಗಳಲ್ಲಿ ಸೋಂಕಿತರ ಸಂಖ್ಯೆ 400 ಗಡಿ ದಾಟಿದೆ.  ಆದರೆ, ಈಗ ಕೇವಲ 5 ದಿನಗಳಲ್ಲಿ 147 ಜನರಿಗೆ ಕೊರೋನಾ ಸೋಂಕು ತಗುಲಿರುವ ಅಂಕಿ ಅಂಶಗಳು ಜನರಷ್ಟೇ ಅಲ್ಲ, ವಿಜಯಪುರ ಜಿಲ್ಲಾಡಳಿತಕ್ಕೂ ತೀವ್ರ ತಲೆ ನೋವು ತಂದಿವೆ.

ಕಳೆದ 5 ದಿನಗಳಲ್ಲಿ ಪತ್ತೆಯಾದ 147 ಕೇಸುಗಳೊಂದಿಗೆ ಕೊರೋನಾ ಸೋಂಕಿತರ ಸಂಖ್ಯೆ 507ಕ್ಕೇ ಏರಿಕೆಯಾಗಿದೆ. ನಾನಾ ರೋಗಗಳಿಂದ ಬಳಲುತ್ತಿದ್ದ 11 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ವಿಜಯಪುರ ಜಿಲ್ಲಾದ್ಯಂತ ಕೊರೋನಾ ಅಟ್ಟಹಾಸ ಅತೀ ವೇಗವಾಗಿ ಪಸರಿಸುತ್ತಿದ್ದು, ಜನತೆಗೆ ಆತಂಕ ಮೂಡಿಸಿದೆ. ಇದೀಗ ಸರಕಾರದ ನಿರ್ದೇಶನದಂತೆ ಪ್ರತಿನಿತ್ಯ ಕೊರೋನಾ ಟೆಸ್ಟಿಂಗ್ ಸಂಖ್ಯೆಯನ್ನು ವಿಜಯಪುರ ಜಿಲ್ಲಾಡಳಿತ ಗಣನೀಯವಾಗಿ ಹೆಚ್ಚಳ ಮಾಡಿದೆ.  ಈಗ ಪ್ರತಿನಿತ್ಯ ಸುಮಾರು 800 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆ ಮಾಡಲಾಗುತ್ತಿದೆ.

ಕೆಮ್ಮು ಮತ್ತು ಜ್ವರ ಇರುವ ಯಾವುದೇ ರೋಗಿಗಳು ಬಂದರೂ ಕೂಡ ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವುದನ್ನು ಕಡ್ಡಾಯ ಮಾಡಿ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Bangalore Crime: ಜ್ಯೂಸ್​ನಲ್ಲಿ ಮತ್ತು ಬರುವ ಮಾತ್ರೆ ಹಾಕಿ ಸ್ಯಾಂಡಲ್​ವುಡ್ ನಟಿ ಮೇಲೆ ಅತ್ಯಾಚಾರ!ಐದು ದಿನದಲ್ಲಿ ದಾಖಲಾದ ಕೇಸ್​​ ಲಿಸ್ಟ್​


  • ಜೂ. 30 -39 ಹೊಸ ಪ್ರಕರಣ, 2 ಸಾವು

  • ಜು. 1- 28 ಹೊಸ ಪ್ರಕರಣ ಪತ್ತೆ

  • ಜು. 2- 4 ಹೊಸ ಪ್ರಕರಣ ಪತ್ತೆ

  • ಜು. 3- 39 ಹೊಸ ಕೇಸ್ ಪತ್ತೆ, 2 ಸಾವು

  • ಜು. 4- 37 ಹೊಸ ಕೇಸ್ ಪತ್ತೆ


ಇನ್ನು, ಪೊಲೀಸರಿಗೂ ಸೋಂಕು ತಗುಲಿದ್ದರಿಂದ ರೇಲ್ವೆ ಪೊಲೀಸ್ ಸ್ಟೇಷನ್, ಬಸವನ ಬಾಗೇವಾಡಿ, ಕೂಡಗಿ ಎನ್​​ಟಿಪಿಸಿ ಪೊಲೀಸ್ ಠಾಣೆಗಳನ್ನು ಸೀಲಡೌನ್ ಮಾಡಲಾಗಿದೆ.  ಅಲ್ಲದೇ, ಆರೋಪಿಯೊಬ್ಬನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯನ್ನು ಎರಡನೇ ಬಾರಿಗೆ ಸೀಲಡೌನ್ ಮಾಡಲಾಗಿದೆ.  ಅಲ್ಲದೇ, ಇವರ ಸಂಪರ್ಕಕ್ಕೆ ಬಂದಿರುವ ಪಿಎಸ್‌ಐ  ಹಾಗೂ ಪೊಲೀಸ್ ಕಾನಸ್ಟೇಬಲ್ ಗಳಿಗೆ ಕ್ವಾರಂಟೈನ್ ಮಾಡಲಾಗಿದೆ.
Published by: Ganesh Nachikethu
First published: July 5, 2020, 1:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading