ವಿಜಯಲಕ್ಷ್ಮಿ ದರ್ಶನ್​-ರವಿಶಂಕರ್ ಇರುವ ಅರ್ಪಾಟ್​ಮೆಂಟ್​ಗೂ ಕಾಲಿಟ್ಟ ಕೊರೋನ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ನಟ..!

ಈಗ ದರ್ಶನ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ರವಿಶಂಕರ್ ಗೌಡ  ಅವರ ಕುಟುಂಬ ವಾಸವಿರುವ ಅಪಾರ್ಟ್​ಮೆಂಟ್​ನಲ್ಲೂ ಕೊರೋನಾ ಕಾಟ ಆರಂಭವಾಗಿದೆ. ಹೌದು, ತಮ್ಮ ಎದುರು ಮನೆಯಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ರವಿಶಂಕರ್​ ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಮಡದಿ ವಿಜಯಲಕ್ಷ್ಮಿ ಜತೆ ದರ್ಶನ್​

ಮಡದಿ ವಿಜಯಲಕ್ಷ್ಮಿ ಜತೆ ದರ್ಶನ್​

  • Share this:
ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೇ ಕಾರಣದಿಂದಾಗಿ ರಾಜ್ಯ ಸರ್ಕಾರ ಮತ್ತೆ ಲಾಕ್​ಡೌನ್​ ಮಾಡವ ಆಲೋಚನೆಯಲ್ಲಿದೆ. ನಿನ್ನೆಯಷ್ಟೆ ಸುದೀಪ್​ ಅವರ ಮನೆ ಇರುವ ರಸ್ತೆಯಲ್ಲಿ ಒಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಇಡೀ ರಸ್ತೆಯೇ ಸೀಲ್​ಡೌನ್​ ಆಗಿದೆ.

ಈಗ ದರ್ಶನ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ರವಿಶಂಕರ್ ಗೌಡ  ಅವರ ಕುಟುಂಬ ವಾಸವಿರುವ ಅಪಾರ್ಟ್​ಮೆಂಟ್​ನಲ್ಲೂ ಕೊರೋನಾ ಕಾಟ ಆರಂಭವಾಗಿದೆ. ಹೌದು, ತಮ್ಮ ಎದುರು ಮನೆಯಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ರವಿಶಂಕರ್​ ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.'ನಮ್ಮ ಅಪಾರ್ಟ್​ಮೆಂಟ್​ನಲ್ಲಿ ನನ್ನ ಎದುರುಗಡೆಯ ಮನೆಗೆ
ವಕ್ಕರಿಸಿತು ಕೊರೋನ. ನನ್ನ ಮಕ್ಕಳಿರುವ ಮನೆಯನ್ನು ದೇವರೇ ಕಾಪಾಡಬೇಕು.
ಎಚ್ಚರ ಸ್ನೇಹಿತರೆ ಎಚ್ಚರ.... ನಾವೀಗ ನಮ್ಮನೆ ಬಾಗಿಲನ್ನು 14 ದಿನ ತೆಗೆಯುವಂತೆಯೇ ಇಲ್ಲ... ದಿಗ್ಬಂಧನ. ಈ ವಿಷಯ ತಿಳಿದ ಕೂಡಲೇ ಸುದೀಪ , ಗಣಪ , ಸೃಜನ್, ಮಕ್ಕಳನ್ನು ಕರೆದುಕೊಂಡು ನಮ್ಮ ಮನೆಗೆ ಬಂದುಬಿಡು ಅಂದರು. ವಾವ್!!!!! ಇದಲ್ಲವೆ ಗೆಳೆತನ ಅಂದರೆ. ಹಾಗೆ ಕುಟುಂಬವನ್ನು ವಿಚಾರಿಸಿದ, ಸಂತೋಷ್ ಆನಂದ್ ರಾಮ್, ರಘುರಾಮ್ ಅವರಿಗೆ ಧನ್ಯವಾದಗಳು' ಎಂದು ರವಿಶಂಕರ್ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ನಂದಿಬೆಟ್ಟದಲ್ಲಿ ಬುಲೆಟ್​ ಓಡಿಸಲು ಹೋಗಿ ಬಿದ್ದ ಶ್ರದ್ಧಾ ಶ್ರೀನಾಥ್​: ವಿಡಿಯೋ ಇಲ್ಲಿದೆ..!

ಹೊಸಕೆರೆ ಹಳ್ಳಿಯಲ್ಲಿರುವ ಅಪಾರ್ಟ್​ಮೆಂಟ್​ ಒಂದರಲ್ಲಿ ದರ್ಶನ್‌ ಅವರ ಕುಟುಂಬ ಸೇರಿದಂತೆ ನಟ ರವಿಶಂಕರ್ ಹಾಗೂ ಪೂಜಾ ಗಾಂಧಿ ಸಹ ವಾಸಿಸುತ್ತಿದ್ದಾರೆ. ಎಲ್ಲರಿಗೂ ಇದೀಗ ಕೊರೊನಾ ಆತಂಕ ಎದುರಾಗಿದೆ. ಇದರಿಂದಾಗಿಯೇ ನಿನ್ನೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕೊರೋನ ಸೋಂಕು ತಗುಲಿದೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಅದಕ್ಕೆ ವಿಜಯಲಕ್ಷ್ಮಿ ಟ್ವೀಟ್​ ಮಾಡುವ ಮೂಲಕ ಸ್ಪಷ್ಣೆ ನೀಡಿದ್ದಾರೆ.'ನಾನು ಆರೋಗ್ಯವಾಗಿದ್ದೇನೆ. ನನಗೆ ಸೋಂಕು ತಗುಲಿಲ್ಲ. ಇಂತಹ ಕಷ್ಟದ ಸಮಯದಲ್ಲಿ ಎಲ್ಲರೂ ಸುರಕ್ಷಿತವಾಗಿರಿ' ಎಂದು ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ.

ಕ್ರಿಯಾತ್ಮಕವಾಗಿ ಹೊಸ ಸಿನಿಮಾದ ಪ್ರಚಾರ ಆರಂಭಿಸಿದ ಶ್ರದ್ಧಾ ಶ್ರೀನಾಥ್​..!ಇದನ್ನೂ ಓದಿ: ಹೊಸ ಪ್ರಾಜೆಕ್ಟ್ ಜೊತೆಗೆ ನ್ಯೂ ಲುಕ್​ನಲ್ಲಿ ಎಂಟ್ರಿ ಕೊಟ್ಟ ಅರ್ಜುನ್​ ಜನ್ಯ..!
First published: