ಕೊರೋನಾ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಒಟ್ಟಾಗಿ ಇದ್ದೇವೆ ಎಂದು ಸಾರುವ ಸಲುವಾಗಿ ಕಳೆದ ಭಾನುವಾರ ರಾತ್ರಿ 9ಕ್ಕೆ ಸರಿಯಾಗಿ 9 ನಿಮಿಷಗಳ ಕಾಲ ದೀಪ ಬೆಳಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು.
ನರೇಂದ್ರ ಮೋದಿ ಅವರ ಮನವಿಗೆ ದೇಶದ ಜನರು ದೀಪ ಬೆಳಗಿಸುವ ಮೂಲಕ ಐಕ್ಯತೆ ಪ್ರದರ್ಶನ ಮಾಡಿದ್ದರು. ಇದಕ್ಕೆ ಸೆಲೆಬ್ರಿಟಿಗಳೂ ಹೊರಾಗಿಲ್ಲ. ಆದರೆ ನಟ ವಿದ್ಯುತ್ ಜಮ್ವಾಲ್ ಎಂದಿನಂತೆ ತಮ್ಮ ಸ್ಟೈಲ್ನಲ್ಲಿ ದೀಪ ಹಚ್ಚಿ ಆರಿಸಿದ್ದಾರೆ. ಆದರೆ ಅದೇ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿಚಿತ್ರ ಪ್ರಯೋಗ ಮಾಡಿ ಟ್ರೋಲ್ ಆಗಿದ್ದಾರೆ.
![ಪ್ರಧಾನಿ ಕರೆಯಂತೆ 9 ಗಂಟೆಗೆ 9 ನಿಮಿಷ ದೀಪ ಬೆಳಗುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ ಭಾರತೀಯರು]()
ಪ್ರಧಾನಿ ಕರೆಯಂತೆ 9 ಗಂಟೆಗೆ 9 ನಿಮಿಷ ದೀಪ ಬೆಳಗುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ ಭಾರತೀಯರು
ಜಮ್ವಾಲ್ ಅವರು ತಮ್ಮ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಭಾನುವಾರ ರಾತ್ರಿ ದೀಪ ಹಚ್ಚುವಂತೆ ಪ್ರಧಾನಿ ಕರೆ ಕೊಟ್ಟಿದ್ದರೆ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಲೈಟರ್ನಿಂದ ಸಿಗರೇಟ್ ಹಚ್ಚಿ 'ಬೆಂಬಲ' ನೀಡಿದ್ದರು. ಈ ವಿಡಿಯೋವನ್ನು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ವರ್ಮಾರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ವರ್ಮಾ ಸದಾ ಒಂದಿಲ್ಲೊಂದು ವಿಷಯದಲ್ಲಿ ನೆಟ್ಟಿಗರಿಂದ ಟ್ರೋಲ್ ಆಗುವುದು ಸಹಜ. ದೀಪ ಬೆಳಗಿಸುವ ವಿಷಯದಲ್ಲೂ ಅವರ ವರ್ತನೆ ನೆಟ್ಟಿಗರಿಗೆ ಸಿಟ್ಟು ತರಿಸಿದೆ. ಇದೇ ಕಾರಣಕ್ಕೆ ಅವರಿಗೆ ಖಾರವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
(ಸೂಚನೆ: ಧೂಮಪಾನ ಆರೋಗ್ಯಕ್ಕೆ ಹಾನಿಕರ)
Disha Patani: ಲಾಕ್ಡೌನ್ನಲ್ಲೂ ಹಾಟ್ ಫೋಟೋಗಳಿಂದ ಪಡ್ಡೆಗಳ ನಿದ್ದೆ ಕದ್ದಿರುವ ನಟಿ ದಿಶಾ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ