ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಓಡಾಟ ನಡೆಸಿದ ಕೊರೋನಾ ಸೋಂಕಿತೆ; ಕಂಗಾಲಾದ ವೈದ್ಯರು

ಕಳೆದ ಭಾನುವಾರ ಆಸ್ಪತ್ರೆಗೆ ಬಂದಿದ್ದ ಈ ಯುವತಿ ಆಸ್ಪತ್ರೆಯ ಆವರಣದಲ್ಲಿ ಸುತ್ತಾಡಿದ್ದರು. ಇದು ಆಸ್ಪತ್ರೆಯ ಸಿಬ್ಬಂದಿಗೆ ಆತಂಕ ತಂದೊಡ್ಡಿದೆ. ವಿದೇಶದಿಂದ ಬಂತ ನಂತರ ಈ ಯುವತಿ ಮನೆಯಲ್ಲಿ ಇರಬೇಕಿತ್ತು. ಆದರೆ ಅವರು ವೈದ್ಯರ ಜೊತೆ ಆಸ್ಪತ್ರೆಯ ಆವರಣದಲ್ಲಿ ಓಡಾಡಿಕೊಂಡಿದ್ದರು.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ

  • Share this:
ಬೆಂಗಳೂರು: ಲಂಡನ್​ನಿಂದ ಬಂದ ಯುವತಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಸೋಂಕಿತ ಯುವತಿಯು ವಿಕ್ಟೋರಿಯಾ ಆಸ್ಪತ್ರೆಯ ನೆಪ್ರೋಯುರಾಲಾಜಿ ವಿಭಾಗದ ನಿರ್ದೇಶಕರ ಸಂಬಂಧಿಯಾಗಿದ್ದು, ಅವರೊಂದಿಗೆ ಆಸ್ಪತ್ರೆಗೆ ಸಹ ಭೇಟಿ ನೀಡಿದ್ದರು. ಹೀಗಾಗಿ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆತಂಕ ಮನೆ ಮಾಡಿದೆ.

ಕಳೆದ ಭಾನುವಾರ ಆಸ್ಪತ್ರೆಗೆ ಬಂದಿದ್ದ ಈ ಯುವತಿ ಆಸ್ಪತ್ರೆಯ ಆವರಣದಲ್ಲಿ ಸುತ್ತಾಡಿದ್ದರು. ಇದು ಆಸ್ಪತ್ರೆಯ ಸಿಬ್ಬಂದಿಗೆ ಆತಂಕ ತಂದೊಡ್ಡಿದೆ. ವಿದೇಶದಿಂದ ಬಂತ ನಂತರ ಈ ಯುವತಿ ಮನೆಯಲ್ಲಿ ಇರಬೇಕಿತ್ತು. ಆದರೆ ಅವರು ವೈದ್ಯರ ಜೊತೆ ಆಸ್ಪತ್ರೆಯ ಆವರಣದಲ್ಲಿ ಓಡಾಡಿಕೊಂಡಿದ್ದರು.

ಇನ್ನು ನೆಪ್ರೋಯುರಾಲಜಿ ವೈದ್ಯ ಕೂಡ ಆಸ್ಪತ್ರೆಯ ಕೆಲ ಮೀಟಿಂಗ್​ನಲ್ಲಿ ಭಾಗಿಯಾಗಿದ್ದರು. ಅಲ್ಲದೇ ನೂರಾರು ಜನರನ್ನು ಭೇಟಿಯಾಗಿದ್ದರು. ಯುವತಿಗೆ ಸೋಂಕು ಇರುವ ಮಾಹಿತಿ ಹೊರ ಬರುತ್ತಿದ್ದಂತೆ ಆ ವೈದ್ಯರು ಸಹ ನಾಪತ್ತೆಯಾಗಿರುವುದು ಸಿಬ್ಬಂದಿಗಳನ್ನು ಚಿಂತೆಗೀಡುಮಾಡಿದೆ.

ದೇಶದಾದ್ಯಂತ ಕೊರೋನಾ ಮಹಾಮಾರಿ ಜನರನ್ನು ತಲ್ಲಣಗೊಳಿಸಿದ್ದು, ಮನೆಯಿಂದ ಹೊರ ಬರುವುದಕ್ಕೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನಾದಲ್ಲಿ ಪತ್ತೆಯಾದ ಕೊರೋನಾ ವೈರಸ್ ಭಾರತದಲ್ಲೂ ವ್ಯಾಪಕವಾಗಿ ಹರಡುತ್ತಿದೆ. ಈವರೆಗೆ ಭಾರದಲ್ಲಿ 137 ಪ್ರಕರಣ ದಾಖಲಾಗಿದೆ.

(ವರದಿ: ಸಂಧ್ಯಾ ಎಂ)
First published: