HOME » NEWS » Coronavirus-latest-news » VENTILATOR AMBULANCE SANCTIONED IN UTTARA KANNADA DISTRICT FOR CORONA VIRUS KFD SAYS MINISTER SHIVARAM HEBBAR HK

ಮಲೆನಾಡಿನಲ್ಲಿ ಮಂಗನಕಾಯಿಲೆ ವ್ಯಾಪಕ - ವೆಂಟಿಲೇಟರ್ ಆ್ಯಂಬುಲೆನ್ಸ್ ಖರೀದಿಗೆ ಸಿಎಂ ಅನುಮತಿ : ಶಿವರಾಮ ಹೆಬ್ಬಾರ್

ಸಿಎಂ ಬಿ ಎಸ್​ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರ ಗಮನಕ್ಕೆ ತಂದಿದ್ದು, ಅವರು ಹಣ ಬಿಡುಗಡೆಗೊಳಿಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಿದ್ದಾರೆ

news18-kannada
Updated:April 18, 2020, 10:51 PM IST
ಮಲೆನಾಡಿನಲ್ಲಿ ಮಂಗನಕಾಯಿಲೆ ವ್ಯಾಪಕ - ವೆಂಟಿಲೇಟರ್ ಆ್ಯಂಬುಲೆನ್ಸ್ ಖರೀದಿಗೆ ಸಿಎಂ ಅನುಮತಿ : ಶಿವರಾಮ ಹೆಬ್ಬಾರ್
ಶಿವರಾಮ್​ ಹೆಬ್ಬಾರ್​
  • Share this:
ಕಾರವಾರ (ಏ.18): ಮಲೆನಾಡು ಪ್ರದೇಶದಲ್ಲಿ ಮಂಗನ ಕಾಯಿಲೆ ವ್ಯಾಪಕವಾಗಿ ಹರಡುತ್ತಿದೆ. ತಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ಚಿಕಿತ್ಸೆಗೆ ಅವಶ್ಯಕವಿದ್ದ ವೆಂಟಿಲೇಟರ್​ ಆ್ಯಂಬುಲೆನ್ಸ್​​ ತಕ್ಷಣ ಖರೀದಿಗೆ ಅನುಮತಿ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್​​ ಹೆಬ್ಬಾರ್​ ತಿಳಿಸಿದ್ದಾರೆ.

ಮಂಗನ ಕಾಯಿಲೆ ಹಾಗೂ ಕೊರೋನಾ ವೈರಸ್​​ ಚಿಕಿತ್ಸೆ ಅಗತ್ಯವಾದ ವೆಂಟಿಲೇಟರ್​ ಆ್ಯಂಬುಲೆನ್ಸ್​​ ಒದಗಿಸುವಂತೆ ಸಿದ್ದಾಪುರ ತಾಲೂಕಿನ ಕ್ಯಾದಗಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಹಾಗೂ  ಸ್ಥಳೀಯ ಜನಪ್ರತಿನಿಧಿಗಳು ತಿಳಿಸಿದ್ದರು. ಈ ಕುರಿತು ಸಿಎಂ ಬಿ ಎಸ್​ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರ ಗಮನಕ್ಕೆ ತಂದಿದ್ದು, ಅವರು ಹಣ ಬಿಡುಗಡೆಗೊಳಿಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಿದ್ದಾರೆ ಎಂದರು.

ಇದನ್ನೂ ಓದಿ : ಹೌದೋ ಹುಲಿಯಾ..! ಲಾಕ್​ಡೌನ್ ನಂತರ ಕುಡಿಯಲು ಆಗದ ಪೀರಪ್ಪನ ಬದುಕು ಈಗ ಹೇಗಿದೆ?

ಮಂಗನ ಕಾಯಿಲೆ ಚಿಕಿತ್ಸೆಗಾಗಿ ಆಯುಷ್ಯ ಮಾನ್​​ ಭಾರತ್​ ಆರೋಗ್ಯ ಕರ್ನಾಟಕ ಚಿಕಿತ್ಸಾ ಫ್ಯಾಕೇಜ್ ಅಳವಡಿಸಿ ಪ್ರತ್ಯೇಕ ಸೌಲಭ್ಯಗಳ ಮಂಜೂರಿ ಕೋಡ್​​ ಮೊದಲು ಶಿವಮೊಗ್ಗ ಜಿಲ್ಲೆಗೆ ಮಾತ್ರ ಸೀಮಿತವಾಗಿತ್ತು. ಇದಿನಿಂದ ಈ ಯೋಜನೆಯ ಸೌಲಭ್ಯ ಉತ್ತರ ಕನ್ನಡ  ಜಿಲ್ಲೆಗೂ ಸಹ ಅನ್ವಯಿಸಲಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲಾಡಳಿತದಿಂದ ದನಕರುಗಳಿಗೆ ಅವಶ್ಯವಿರುವ ಔಷಧಗಳನ್ನು ಖರೀದಿಸಲು ಸುಮಾರು 87 ಸಾವಿರ ರೂಪಾಯಿ ಅನುದಾನವನ್ನು ಪಶು ಸಂಗೋಪನಾ ಇಲಾಖೆಗೆ ಮಂಜೂರು ಮಾಡಿದ್ದಾರೆ.

 
First published: April 18, 2020, 10:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories