HOME » NEWS » Coronavirus-latest-news » VEERSHAIVA MAHASABHA DEMANDED MLC AND MP ELECTION TICKET GNR

‘ನಮ್ಮ ಸಮುದಾಯಕ್ಕೆ ರಾಜ್ಯಸಭೆ, ಪರಿಷತ್​​​ ಟಿಕೆಟ್​​ ಕೊಡಿ‘ - ರಾಜಕೀಯ ಪಕ್ಷಗಳಿಗೆ ವೀರಶೈವ ಮಹಾಸಭಾ ಒತ್ತಾಯ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​​, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಯರಿಗೆ ಪತ್ರ ಬರೆದು ಆಗ್ರಹಿಸಿದೆ.

news18-kannada
Updated:June 5, 2020, 7:24 AM IST
‘ನಮ್ಮ ಸಮುದಾಯಕ್ಕೆ ರಾಜ್ಯಸಭೆ, ಪರಿಷತ್​​​ ಟಿಕೆಟ್​​ ಕೊಡಿ‘ - ರಾಜಕೀಯ ಪಕ್ಷಗಳಿಗೆ ವೀರಶೈವ ಮಹಾಸಭಾ ಒತ್ತಾಯ
ಕಾಂಗ್ರೆಸ್​-ಬಿಜೆಪಿ ಚಿಹ್ನೆ
  • Share this:
ಬೆಂಗಳೂರು(ಜೂ.05): ಒಂದೆಡೆ ರಾಜ್ಯಸಭಾ ಮತ್ತು ವಿಧಾನ ಪರಿಷತ್​​​ ಸದಸ್ಯ ಸ್ಥಾನಕ್ಕಾಗಿ ರಾಜಕೀಯ ಪಕ್ಷಗಳಲ್ಲೇ ಪೈಪೋಟಿ ನಡೆದಿದೆ. ಇನ್ನೊಂದೆಡೆ ವಿವಿಧ ಜಾತಿ, ಸಮುದಾಯಗಳಿಂದಲೂ ರಾಜಕೀಯ ಪಕ್ಷಗಳ ಮೇಲೆ ಒತ್ತಡ ತೀವ್ರಗೊಂಡಿದೆ. ಕಾಂಗ್ರೆಸ್​, ಜೆಡಿಎಸ್​​ ಮತ್ತು ಬಿಜೆಪಿ ನಾಯಕರಿಗೆ ನಮ್ಮ ಸಮುದಾಯದವರಿಗೆ ಟಿಕೆಟ್​ ಕೊಡಿ ಎಂದು ಒತ್ತಡ ಹಾಕುತ್ತಿದ್ದಾರೆ.


ಹೌದು, ಅಖಿಲ ಭಾರತ ವೀರಶೈವ ಮಹಾಸಭಾ ಮೂರು ರಾಜಕೀಯ ಪಕ್ಷಗಳಿಗೂ ಪತ್ರ ಬರೆದು ಹೀಗೊಂದು ಒತ್ತಾಯ ಮಾಡಿದೆ. ವೀರಶೈವ ಮಹಾಸಭಾ ವೀರಶೈವ ಲಿಂಗಾಯತ ಸಮುದಾಯವನ್ನ ಪ್ರತಿನಿಧಿಸುವ ಏಕೈಕ ಮಾತೃ ಸಂಸ್ಥೆಯಾಗಿದೆ. ನೆರೆಯ ಗೋವಾ, ಮಹಾರಾಷ್ಟ್ರ, ತೆಲಂಗಾಣ, ಸೀಮಾಂಧ್ರ ರಾಜ್ಯಗಳಲ್ಲೂ ಮಹಾಸಭಾ ರಾಜ್ಯ ಮಟ್ಟದ ಘಟಕಗಳನ್ನ ಹೊಂದಿದೆ.

ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆಯ ಕಾಲು ಭಾಗದಷ್ಟು ಸಮುದಾಯವಿದೆ. ಆದರೆ, ಶಾಸನ ಸಭೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಕ್ಕಿಲ್ಲ. ಹಾಗಾಗಿ ಈ ಬಾರಿ ನಡೆಯುವ ರಾಜ್ಯಸಭಾ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಮಹಾಸಭಾ ಒತ್ತಾಯಿಸಿದೆ.

ಇದನ್ನೂ ಓದಿ: ದೇವಸ್ಥಾನಗಳಲ್ಲಿ ಸಾಮಾಜಿಕ ಅಂತರ ಕಾಪಾಡೋದು ಕಷ್ಟ; ಆದ್ರೆ ಬಾರ್​​ಗಳಲ್ಲಿ ಸುಲಭ; ಅಬಕಾರಿ ಸಚಿವ ಎಚ್​.ನಾಗೇಶ್​

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​​, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಯರಿಗೆ ಪತ್ರ ಬರೆದು ಆಗ್ರಹಿಸಿದೆ.
Youtube Video
First published: June 5, 2020, 7:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories