HOME » NEWS » Coronavirus-latest-news » VATAL NAGARAJ PROTEST AT RAMANGARA DEMANDING FOR CANCELLATION OF ONLINE EDUCATION AND SSLC PUC EXAMS SNVS

Vatal Nagaraj - ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ, ಆನ್​ಲೈನ್ ಶಿಕ್ಷಣ ರದ್ದುಗೊಳಿಸಿ: ವಾಟಾಳ್ ನಾಗರಾಜ್ ಆಗ್ರಹ

Demanding cancellation of SSLC and PUC exams and Online Education - ಎಷ್ಟೋ ಹಳ್ಳಿಗಳಲ್ಲಿ ಮೊಬೈಲ್ ಕೊಳ್ಳಲು ಜನರ ಬಳಿ ಹಣವಿಲ್ಲದ ಈ ಪರಿಸ್ಥಿತಿಯಲ್ಲಿ ಆನ್​ಲೈನ್ ಶಿಕ್ಷಣ ವ್ಯವಸ್ಥೆ ರೂಪಿಸಿರುವುದು ಸರಿಯಲ್ಲ ಎಂದಿದ್ಧಾರೆ ವಾಟಾಳ್ ನಾಗರಾಜ್.

news18-kannada
Updated:June 9, 2020, 5:05 PM IST
Vatal Nagaraj - ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ, ಆನ್​ಲೈನ್ ಶಿಕ್ಷಣ ರದ್ದುಗೊಳಿಸಿ: ವಾಟಾಳ್ ನಾಗರಾಜ್ ಆಗ್ರಹ
ವಾಟಾಳ್ ನಾಗರಾಜ್
  • Share this:
ರಾಮನಗರ(ಜೂನ್ 09): ರಾಜ್ಯ ಸರ್ಕಾರದ ವಿರುದ್ಧ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಇಂದು ರಾಮನಗರದ ಐಜೂರು ವೃತ್ತದಲ್ಲಿ ಕಾರ್ಯಕರ್ತರೊಂದಿಗೆ ಧಿಕ್ಕಾರ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು. ಎಷ್ಟೋ ಹಳ್ಳಿಗಳಲ್ಲಿ ಮೊಬೈಲ್ ವ್ಯವಸ್ಥೆ ಇಲ್ಲ. ಮೊಬೈಲ್ ಕೊಂಡುಕೊಳ್ಳಲು ಜನರ ಬಳಿ ಹಣವಿಲ್ಲದ ಈ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಆನ್​ಲೈನ್ ಶಿಕ್ಷಣ ವ್ಯವಸ್ಥೆ ರೂಪಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದ ಅವರು ಆನ್​ಲೈನ್ ಶಿಕ್ಷಣವನ್ನ ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.

ಮುಖ್ಯವಾಗಿ ರಾಜ್ಯದ ಎಲ್ಲಾ SSLC, PUC ವಿದ್ಯಾರ್ಥಿಗಳನ್ನ ಯಾವುದೇ ಪರೀಕ್ಷೆ ನಡೆಸದೇ ಪಾಸ್ ಮಾಡಬೇಕು.ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬಾರದು. ಈಗಾಗಲೇ ತೆಲಂಗಾಣದಲ್ಲಿ ಎಲ್ಲಾ SSLC ವಿದ್ಯಾರ್ಥಿಗಳನ್ನ ಪಾಸ್ ಮಾಡಿದ್ದಾರೆ. ದೆಹಲಿ, ಮಹಾರಾಷ್ಟ್ರ ಸೇರಿ 12 ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಎಲ್ಲಾ ಪರೀಕ್ಷೆಗಳನ್ನ ಮುಂದೂಡಿದ್ದಾರೆ. ಹಾಗಾಗಿ ನಮ್ಮ ರಾಜ್ಯ ಸರ್ಕಾರ ಕೂಡ ಇಂತಹ ಕ್ರಮ ಕೈಗೊಳ್ಳಬೇಕು. ಎಲ್ಲಕ್ಕಿಂತ ಜೀವ ಮುಖ್ಯ. ಜೀವ ಇದ್ದರಷ್ಟೇ ಜೀವನ. ಹಾಗಾಗಿ ಸರ್ಕಾರ ಶೀಘ್ರವೇ ಕ್ರಮ ವಹಿಸಬೇಕೆಂದು ರಾಮನಗರದಲ್ಲಿ ಹಿರಿಯ ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ತಿಳಿಸಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಬಹುತೇಕ ಆಗಸ್ಟ್​​​ ನಂತರ ಶಾಲೆಗಳ ಆರಂಭ - ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಸ್ಪಷ್ಟನೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸುವ ತೆಲಂಗಾಣ ಸರ್ಕಾರದ ನಿರ್ಧಾರವನ್ನು ಇವತ್ತು ತಮಿಳುನಾಡು ಸರಕಾರವೂ ಅನಸರಿಸಿದೆ.

ವರದಿ: ಎ.ಟಿ. ವೆಂಕಟೇಶ್

Youtube Video
First published: June 9, 2020, 5:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories