Seema.RSeema.R
|
news18-kannada Updated:October 8, 2020, 8:32 PM IST
ಫಿಲ್ಟರ್ ಮಾಸ್ಕ್ ಚಿತ್ರಣ
ಕೊರೋನಾ ಸೋಂಕು ತಡೆಗೆ ಮಾಸ್ಕ್ ಧರಿಸುವುದು ಈಗ ಕಡ್ಡಾಯವಾಗಿದೆ. ಸೋಂಕಿನ ನಿವಾರಣೆಗಾಗಿ ಬಳಸುವ ಮಾಸ್ಕ್ಗಳು ಸರಿಯಾಗಿರಬೇಕಾಗಿರುವುದು ಅವಶ್ಯಕ. ಕಾಟಾಚಾರಕ್ಕೆ ಯಾವುದೋ ಒಂದು ಮಾಸ್ಕ್ ಧರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಹಿನ್ನಲೆ ಯಾವ ರೀತಿಯ ಮಾಸ್ಕ್ ಧರಿಸಬೇಕು ಎಂಬ ಬಗ್ಗೆ ಅರಿವಿರುವುದು ಮುಖ್ಯ. ಬಹುತೇಕರು ಮಾಸ್ಕ್ ಧರಿಸಿದರೆ, ಉಸಿರಾಟಕ್ಕೆ ಸಮಸ್ಯೆಯಾಗುತ್ತದೆ. ಕನ್ನಡಕದಲ್ಲಿ ಆವಿ ಕೂರುತ್ತದೆ ಎಂಬ ಕಾರಣಕ್ಕೆ ಫಿಲ್ಟರ್ ಮಾಸ್ಕ್ ಮೊರೆ ಹೋಗುತ್ತಾರೆ. ಆದರೆ, ಈ ಫಿಲ್ಟರ್ (ವಾಲ್ವ್) ಮಾಸ್ಕ್ ಧರಿಸುವುದು ಅಪಾಯ ಎನ್ನುತ್ತಾರೆ ವೈದ್ಯರು.
ಮಾಸ್ಕ್ ಧರಿಸಿದರೆ, ಅದು ಯಾವುದೇ ರೋಗಾಣುಗಳನ್ನು ನಿಮ್ಮ ಮೂಗು, ಬಾಯಿಯೊಳಗೆ ಸೇರದಂತೆ ಬಿಗಿಯಾದ ರಕ್ಷಣೆ ನೀಡಬೇಕು. ಆದರೆ, ಬಹುತೇಕ ಜನರು ಮಾಸ್ಕ್ ಫಿಲ್ಟರ್ ಮಾಸ್ಕ್ ಧರಿಸುತ್ತಾರೆ. ಆದರೆ, ಈ ಫಿಲ್ಟರ್ ಮಾಸ್ಕ್ ಸೋಂಕು ನಿಯಂತ್ರಣಕ್ಕೆ ಯಾವುದೇ ಸಹಾಯ ಮಾಡುವುದಿಲ್ಲ. ಇದು ಕೇವಲ ವಾಯು ಮಾಲಿನ್ಯದಿಂದ ಮಾತ್ರ ನಿಮ್ಮನ್ನು ರಕ್ಷಿಸಬಲ್ಲದು. ಕೊರೋನಾ ಸೋಕಿಗೂ ಮುನ್ನ ಮಹಾನಗರಿಗಳಲ್ಲಿ ಮಾಲಿನ್ಯದಿಂದ ರಕ್ಷಣೆ ಪಡೆಯಲು ಹಲವರು ಈ ರೀತಿಯ ಫಿಲ್ಟರ್ ಮಾಸ್ಕ್ ಧರಣೆ ಮಾಡುತ್ತಿದ್ದರು. ಅದನ್ನೇ ಈಗಲೂ ಧರಿಸಿದರೆ ಯಾವುದೇ ಪ್ರಯೋಜನವಿಲ್ಲ
ಸೋಂಕಿತ ವ್ಯಕ್ತಿಯೊಬ್ಬ ಫಿಲ್ಟರ್ ಮಾಸ್ಕ್ ಧರಿಸಿದಾಗ ಆತ ಕೆಮ್ಮಿದಾಗ, ಸೀನಿದಾಗ ಫಿಲ್ಟರ್ ಮೂಲಕ ಸೋಂಕು ಪಕ್ಕದಲ್ಲಿರುವ ವ್ಯಕ್ತಿಗೆ ಶೀಘ್ರವಾಗಿ ಹರಡುತ್ತದೆ. ವಾಲ್ವ್ ಮಾಸ್ಕ್ ಕೇವಲ ನೀವು ತೆಗೆದುಕೊಳ್ಳುವ ಗಾಳಿಯನ್ನು ಫಿಲ್ಟರ್ ಮಾಡುತ್ತದೆ. ನೀವು ಬಿಡುವ ಉಸಿರು ಫಿಲ್ಟರ್ ಆಗುವುದಿಲ್ಲ. ಇದರಿಂದ ಸೋಂಕಿತ ವ್ಯಕ್ತಿ ಈ ಮಾಸ್ಕ್ ಧರಿಸಿದರೆ ಅಪಾಯ ಹೆಚ್ಚು.

ಸಾಂದರ್ಭಿಕ ಚಿತ್ರ
ಒಂದು ವೇಳೆ ನಿಮಗೆ ಇಂತಹ ವಾಲ್ವ್ ಮಾಸ್ಕ್ಗಳು ಉಸಿರಾಡಲು ಅನುಕೂಲ ಎನ್ನುವಂತಿದ್ದರೆ, ಇದರಲ್ಲಿ ವೈರಲ್ ಫಿಲ್ಟರ್ ಮಾಸ್ಕ್ ಧರಿಸುವುದು ಉತ್ತಮ ಇದರಿಂದ ನಿಮಗೂ ಹಾಗೂ ನಿಮ್ಮ ಅಕ್ಕಪಕ್ಕದವರಿಗೂ ಒಳಿತು. ಫಿಲ್ಟರ್ ಮಾಸ್ಕ್ನಲ್ಲಿರುವ ಸಣ್ಣ ರಂಧ್ರದಿಂದಾಗಿ ಸೋಂಕಿತ ವ್ಯಕ್ತಿಯಲ್ಲಿನ ರೋಗಾಣು ಹೊರಬರುವ ಸಾಧ್ಯತೆ ಅತಿ ಹೆಚ್ಚು.
ಇದನ್ನು ಓದಿ: ಸದ್ಯ ಶಾಲೆ ತೆರೆಯಲ್ಲ; ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಸಿಎಂ ಬಿಎಸ್ ಯಡಿಯೂರಪ್ಪ
ಸೋಂಕು ತಡೆಗೆ ಎನ್ 95 ಮಾಸ್ಕ್ಗಳು ಸೂಕ್ತ ಎಂಬ ಕಲ್ಪನೆ ಕೆಲವರಲ್ಲಿದೆ. ಆದರೆ, ಈ ಎನ್95 ಮಾಸ್ಕ್ಗಳಲ್ಲಿ ಕೂಡ ಈ ರೀತಿಯ ಮಾಸ್ಕ್ಗಳು ಲಭ್ಯ. ಇವು ಸೋಂಕು ತಡೆಯುವುದಿಲ್ಲ. ವೈದ್ಯಕೀಯ ಶಸ್ತ್ರಚಿಕಿತ್ಸೆ ವೇಳೆ ಉಸಿರಾಟಕ್ಕೆ ಅನುಕೂಲವಾಗಲಿ ಹಾಗೂ ಕಾರ್ಖಾನೆಗಳಲ್ಲಿ ಧೂಳಿನ ರಕ್ಷಣೆಗಾಗಿ ಎನ್ 95 ಮಾಸ್ಕ್ ಬಳಕೆಯಾಗುತ್ತಿತ್ತು. ಆದರೆ, ಈಗಿನ ಸ್ಥಿತಿಯಲ್ಲಿ ಈ ಮಾಸ್ಕ್ ಧರಣೆ ಸೂಕ್ತವಲ್ಲ ಎಂದು ವೈದ್ಯರು ತಿಳಿಸುತ್ತಾರೆ. ಇದು ಧೂಳು ರಕ್ಷಣೆಗೆ ಮಾತ್ರ ನಿಮಗೆ ಸಹಾಯವಾಗಲಿದೆ ಅಷ್ಟೇ ಹೊರತು ಸೋಂಕು ತಡೆಯುವಲ್ಲಿ ಅಲ್ಲ ಎನ್ನುತ್ತಾರೆ.
ಧರಿಸುವ ಮಾಸ್ಕ್ ಹೇಗಿರಬೇಕು:
- ನಿಮ್ಮ ಬಾಯಿ, ಮುಖನ್ನು ಯಾವುದೇ ಸೋಂಕು ಒಳ ಹೋಗದಂತೆ ಮುಚ್ಚಿರಬೇಕು.
- ಹಾಗೇಂದ ಮಾತ್ರಕ್ಕೆ ಉಸಿರಾಟಕ್ಕೆ ಕಷ್ಟ ಎನ್ನಿಸುವಷ್ಟು ಮಟ್ಟಿಗೆ ಬಿಗಿ ಇರಬಾರದು.
- ಉಸಿರಾಡಲು ಸಾಧ್ಯವಾಗುವಂತಹ ಕಾಟನ್, ಬಟ್ಟೆಗಳನ್ನು ಬಳಸುವುದು ಉತ್ತಮ.
ಮಾಸ್ಕ್ ಬದಲಾಗಿ ಬಹುತೇಕ ಮಂದಿ ಖರ್ಚೀಫ್ಗಳನ್ನು ಸುರಕ್ಷತೆಗೆ ಬಳಸುತ್ತಾರೆ. ಇದು ಉತ್ತಮವೇ ಆದರೂ ನೀವು ಕಟ್ಟುವ ವಿಧಾನ ಕೂಡ ಮುಖ್ಯವಾಗುತ್ತದೆ. ಕರವಸ್ತ ಕೆಳ ತುದಿಯಿಂದ ಸೋಂಕು ಹರಡದಂತೆ ಮಡಚುವುದು ಉತ್ತಮ.
Published by:
Seema R
First published:
October 8, 2020, 8:32 PM IST