Covid Vaccine: ಸಾಗರೋತ್ತರ ವ್ಯಾಕ್ಸಿನ್ ಪ್ರವಾಸದ ಉದ್ದೇಶದಿಂದ ತಮ್ಮ ದೇಶಕ್ಕೆ ಬರಲು , ಭಾರತೀಯರಿಗೆ ಅನುಮತಿ ನೀಡಿರುವ ರಾಷ್ಟ್ರಗಳಲ್ಲಿ ರಷ್ಯಾವು ಕೂಡ ಒಂದಾಗಿದೆ. ಅದಕ್ಕಾಗಿ ಒಂದು ನೆಗೆಟಿವ್ ಪಿಸಿಆರ್ ರಿಪೋರ್ಟ್ ಇದ್ದರೆ ಸಾಕು ಮತ್ತು ಅಲ್ಲಿಗೆ ತಲುಪಿದ ನಂತರ ಕ್ವಾರಂಟೈನ್ ಆಗುವ ಅಗತ್ಯ ಕೂಡ ಇರುವುದಿಲ್ಲ. ಸಾಗರೋತ್ತರ “ವ್ಯಾಕ್ಸಿನ್ ಪ್ರವಾಸ” ಸದ್ಯ ಹೊಸ ಟ್ರೆಂಡ್. ಲಾಕ್ಡೌನ್ನಲ್ಲಿ ಮನೆಯಲ್ಲಿ ಬಂಧಿಯಾಗಿರುವ ಭಾರತೀಯರು, ತುರ್ತು ಸಂದರ್ಭ ಬಂದಾಗ ಪಕ್ಕದೂರಿಗೆ ಹೋಗಲು ಕಷ್ಟ ಪಡುತ್ತಿರುವ ಸಂದರ್ಭದಲ್ಲಿ ಪ್ರವಾಸವಂತೂ ಕನಸಿನ ಮಾತು ಅಂತೀರಾ? ಕೈ ತುಂಬಾ ದುಡ್ಡಿದ್ದರೆ , ವಿದೇಶ ಪ್ರವಾಸ ಮಾಡಬಹುದು. ಕೋವಿಡ್ನಿಂದ ಪಾರಾಗಲು ಅಲ್ಲೇ ಲಸಿಕೆ ಕೂಡ ಹಾಕಿಸಿಕೊಳ್ಳಬಹುದು. ಹೌದು, ಭಾರತದಲ್ಲಿ ಸಾಗರೋತ್ತರ ಲಸಿಕೆ ಪ್ರವಾಸೊದ್ಯಮಕ್ಕೆ ಬೇಡಿಕೆ ಹೆಚ್ಚುತ್ತಿದೆ. ಮತ್ತು ಹಾಗೆ ಪ್ರವಾಸ ಹೋಗಬೇಕೆಂದು ಬಯಸುವವರ ಪ್ರಮುಖ ಆಯ್ಕೆ ಮಾಸ್ಕೋ.
ರಷ್ಯಾದಲ್ಲಿ ಸ್ಪುಟ್ನಿಕ್ ಲಸಿಕೆ ಹಾಕಿಸಿಕೊಳ್ಳಬೇಕೆಂದು ಬಯಸುವವರಿಗಾಗಿ, ದೆಹಲಿ ಮೂಲದ ಟ್ರಾವೆಲ್ ಏಜೆನ್ಸಿಯೊಂದು 24 ದಿನಗಳ ಮಾಸ್ಕೋ ಪ್ಯಾಕೆಜ್ ಪ್ರವಾಸವನ್ನು ಆಯೋಜಿಸಿದೆ. ಈ ಪ್ರವಾಸಕ್ಕೆ ಒಬ್ಬರಿಗೆ ತಗಲುವ ವೆಚ್ಚ 1.3ಲಕ್ಷ ರೂಪಾಯಿ. ಪ್ರವಾಸಿಗರಿಗೆ ಮೊದಲ ಡೋಸ್ ಸ್ಪುಟ್ನಿಕ್ ಲಸಿಕೆ ಕೊಡಿಸಿ 21 ದಿನಗಳ ಬಳಿಕ ಎರಡನೇ ಡೋಸ್ ಕೊಡಿಸಲಾಗುವುದು. ಆ ನಡುವಿನ ದಿನಗಳಲ್ಲಿ ಪ್ರವಾಸಿಗರಿಗೆ ರಷ್ಯಾದ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲಾಗುವುದು.
“ಮಾಸ್ಕೋಗೆ ತಲುಪಿದ ಮಾರನೇ ದಿನವೇ ಮೊದಲ ಡೋಸ್ ಲಸಿಕೆ ಕೊಡಿಸಲಾಗುವುದು” ಎಂದು ಟ್ರಾವೆಲ್ ಏಜನ್ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ ಮೇ 15ರಂದು ಗುರುಗ್ರಾಮದಿಂದ ಹೊರಟಿದ್ದ, ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರುಗಳೇ ಇದ್ದ, 30 ಜನರ ಮೊದಲ ತಂಡ ಈಗಾಗಲೇ ರಷ್ಯಾ ತಲುಪಿದ್ದು, ಈಗಾಗಲೇ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ” ಎಂದು ಏಜನ್ಸಿಯ ಅಧಿಕಾರಿ ತಿಳಿಸಿದ್ದಾರೆ. ಮೇ 29ಕ್ಕೆ ಎರಡನೇ ತಂಡ ಹೊರಡಲು ಸಜ್ಜಾಗಿದ್ದು, ಅದರಲ್ಲಿ ದೆಹಲಿ ಮೂಲದ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನು ಕೆಲವು ತಂಡಗಳು ಜೂನ್ನಲ್ಲಿ ಹೊರಡಲಿವೆ.
ಇದನ್ನೂ ಓದಿ: https://kannada.news18.com/news/national-international/a-woman-in-mumbai-miraculously-escapes-a-treefall-due-to-tauktae-effect-in-a-viral-video-stg-sktv-566095.html
“ಈ ತಂಡಗಳು ಸೇಂಟ್ ಪೀಟರ್ಬರ್ಗ್ನಲ್ಲಿ ಮೂರು ದಿನ ಕಳೆಯಲಿದ್ದು, ಉಳಿದ ದಿನಗಳನ್ನು ಮಾಸ್ಕೊದಲ್ಲಿ ಕಳೆಯಲಿದ್ದಾರೆ. ಪ್ರವಾಸದ ದರವು, ದೆಹಲಿಯಿಂದ ಹೊರಡುವ ಏರೋಫ್ಲಾಟ್ ಟಿಕೆಟ್ ಮೊತ್ತ, ಊಟ ತಿಂಡಿ ಹಾಗೂ ಕೆಲವು ದಿನಗಳ ಕಾಲ ರಷ್ಯಾದ ಪ್ರೇಕ್ಷಣಿಯ ಸ್ಥಳಗಳನ್ನು ಸುತ್ತಾಡುವ ಖರ್ಚನ್ನು ಒಳಗೊಂಡಿರುತ್ತದೆ. 10,000 ರೂ.ಗಳ ವೀಸಾ ಮೊತ್ತವನ್ನು ಪ್ರತ್ಯೇಕವಾಗಿ ಭರಿಸಬೇಕಾಗುತ್ತದೆ” ಎಂದವರು ತಿಳಿಸಿದ್ದಾರೆ.
ಸಾಗರೋತ್ತರ ವ್ಯಾಕ್ಸಿನ್ ಪ್ರವಾಸದ ಉದ್ದೇಶದಿಂದ ತಮ್ಮ ದೇಶಕ್ಕೆ ಬರಲು , ಭಾರತೀಯರಿಗೆ ಅನುಮತಿ ನೀಡಿರುವ ರಾಷ್ಟ್ರಗಳಲ್ಲಿ ರಷ್ಯಾವು ಕೂಡ ಒಂದಾಗಿದೆ. ಅದಕ್ಕಾಗಿ ಒಂದು ನೆಗೆಟಿವ್ ಪಿಸಿಆರ್ ರಿಪೋರ್ಟ್ ಇದ್ದರೆ ಸಾಕು ಮತ್ತು ಅಲ್ಲಿಗೆ ತಲುಪಿದ ನಂತರ ಕ್ವಾರಂಟೈನ್ ಆಗುವ ಅಗತ್ಯ ಕೂಡ ಇರುವುದಿಲ್ಲ.
“ವ್ಯಾಕ್ಸಿನ್ ಪ್ರವಾಸೋದ್ಯಮ”ಕ್ಕೆ ಮೊದಲು ಅನುವು ಮಾಡಿಕೊಟ್ಟ ದೇಶ ದುಬೈ, ಆದರೆ ಈಗ ದುಬೈ ಸೇರಿದಂದೆ ಇನ್ನು ಕೆಲವು ದೇಶಗಳಲ್ಲಿ ಭಾರತೀಯರಿಗೆ ಪ್ರವೇಶ ನಿಷೇಧಿಸಲಾಗಿದೆ. ಕಳೆದ ವರ್ಷ ನವೆಂಬರ್ನಲ್ಲಿ , ಇಂತಹ ವ್ಯಾಕ್ಸಿನ್ ಪ್ರವಾಸ ಪ್ಯಾಕೆಜನ್ನು ಮೊದಲು ಘೋಷಿಸಿದ್ದು, ಮುಂಬೈ ಮೂಲದ ಟೂರಿಸ್ಟ್ ಏಜನ್ಸಿ. ಅಮೆರಿಕಾದಲ್ಲಿ ಫೈಜರ್ ಲಸಿಕೆ ಲಭ್ಯವಾದ ಕೂಡಲೆ. 1.7ಲಕ್ಷ ವೆಚ್ಚದಲ್ಲಿ ಭಾರತೀಯರಿಗಾಗಿ 4ದಿನಗಳ ವ್ಯಾಕ್ಸಿನ್ ಪ್ರವಾಸ ಆಯೋಜಿಸುವುದಾಗಿ ಅದು ಹೇಳಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ