HOME » NEWS » Coronavirus-latest-news » VACCINE SHORTAGE NO VACCINE CAMPAIGN START TODAY IN INDIA DUE TO VACCINE SHORTAGE DBDEL LG

Vaccine Shortage: ಲಸಿಕೆ ‌ಕೊರತೆ ಹಿನ್ನೆಲೆಯಲ್ಲಿ ದೇಶಾದ್ಯಂತ ಆರಂಭವಾಗದ 3ನೇ ಹಂತದ ವ್ಯಾಕ್ಸಿನೇಷನ್

ರಾಜ್ಯಗಳು ಕೊರೊನಾ ಲಸಿಕಾ ಉತ್ಪನ್ನ ಸಂಸ್ಥೆಗಳಾದ ಕೋವಿಶೀಲ್ಡ್, ಕೋವ್ಯಾಕ್ಸಿನ್ ಮತ್ತು ಸ್ಫುಟ್ನಿಕ್ ವಿ ಸಂಸ್ಥೆಗಳಲ್ಲಿ ಆರ್ಡರ್ ಮಾಡಿವೆ. ಆದರೆ ಆ ಕಂಪನಿಗಳಿಂದಲೂ ಲಸಿಕೆಗಳು ಪೂರೈಕೆಯಾಗಿಲ್ಲ. ರಷ್ಯಾದಿಂದ ಖರೀದಿಸುತ್ತಿರುವ ಸ್ಫುಟ್ನಿಕ್ ವಿ ಲಸಿಕೆ ಇಂದಷ್ಟೇ ಭಾರತಕ್ಕೆ ಆಗಮಿಸಲಿದೆ.

news18-kannada
Updated:May 1, 2021, 9:54 AM IST
Vaccine Shortage: ಲಸಿಕೆ ‌ಕೊರತೆ ಹಿನ್ನೆಲೆಯಲ್ಲಿ ದೇಶಾದ್ಯಂತ ಆರಂಭವಾಗದ 3ನೇ ಹಂತದ ವ್ಯಾಕ್ಸಿನೇಷನ್
ಸಾಂದರ್ಭಿಕ ಚಿತ್ರ.
  • Share this:
ನವದೆಹಲಿ(ಮೇ 1): ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಪ್ರತಿ ದಿನ ಸುಮಾರು ನಾಲ್ಕು ಲಕ್ಷದಷ್ಟು ಕೊರೋನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಇಂದಿನಿಂದ (ಮೇ 1ರಿಂದ) ದೇಶಾದ್ಯಂತ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಹಾಕುವ ಮೂರನೇ ಹಂತದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ದೇಶದ ಹಲವು ರಾಜ್ಯಗಳಲ್ಲಿ ಲಸಿಕೆ ಕೊರತೆ ಉಂಟಾಗಿರುವುದರಿಂದ ಈ ಮಹತ್ವದ ಅಭಿಯಾನಕ್ಕೆ ಆರಂಭದಲ್ಲೇ ಅಡಚಣೆ ಆಗಿದೆ.

ಭಾರತವನ್ನು ವಿಶ್ವ ಭೂಪಟದಲ್ಲಿ ಕೊರೋನಾ ಹಾಟ್ ಸ್ಪಾಟ್ ಆಗಿಸಿರುವ ಎರಡನೇ ಅಲೆಯನ್ನು ಅಡಗಿಸಲು 'ವ್ಯಾಕ್ಸಿನೇಷನ್‌' ಪರಿಣಾಮಕಾರಿ ಕ್ರಮ ಎಂದು ಹೇಳಲಾಗಿತ್ತು. ಆದರೆ ಕೇಂದ್ರ ಸರ್ಕಾರ ಹಲವು ರಾಜ್ಯಗಳಿಗೆ ಅವುಗಳ ಅಗತ್ಯಕ್ಕೆ ತಕ್ಕಷ್ಟು ಕೊರೋನಾ ಲಸಿಕೆಗಳನ್ನು ಪೂರೈಸದ ಹಿನ್ನಲೆಯಲ್ಲಿ 3ನೇ ಹಂತದ ಕೊರೋನಾ ಲಸಿಕೆ ಹಾಕುವ ಅಭಿಯಾನ ಹಲವು ರಾಜ್ಯಗಳಲ್ಲಿ ಮುಂದೂಡಲ್ಪಟ್ಟಿದೆ‌.

ಮೊದಲ ಹಂತದ ಅಭಿಯಾನದ ವೇಳೆ ಕೊರೋನಾ ವಾರಿಯರ್ಸ್ ಗಳಿಗೆ ಮಾತ್ರ ಲಸಿಕೆ ನೀಡಲಾಗಿತ್ತು. ಎರಡನೇ ಹಂತದ ಅಭಿಯಾನದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲಾಗುತ್ತಿದೆ. ಇದಾದ ಮೇಲೆ ಮೇ 1ರಿಂದ ದೇಶಾದ್ಯಂತ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಹಾಕುವ ಮೂರನೇ ಹಂತದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೊದಲ ಎರಡು ಹಂತಗಳಲ್ಲಿ ಕೇಂದ್ರ ಸರ್ಕಾರ ಕೊರೋನಾ ಲಸಿಕೆ ನೀಡಿತ್ತು. ಮೂರನೇ ಹಂತದಲ್ಲಿ 18ರಿಂದ 45 ವರ್ಷದ ವಯೋಮಾನದವರಿಗೆ ರಾಜ್ಯ ಸರ್ಕಾರಗಳೇ ಲಸಿಕೆ ಖರೀದಿಸಿ ನೀಡಬೇಕಾಗಿದೆ‌.

ಹಾವೇರಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಭೆ: ಮಾಧ್ಯಮಗಳಿಗೆ ನಿರ್ಬಂಧ, ಕಾರ್ಯಕರ್ತರಿಗೆ ಅವಕಾಶ..!

ಕೇಂದ್ರ ಸರ್ಕಾರ ಎಲ್ಲರಿಗೂ ಉಚಿತವಾಗಿ ಕೊರೊನಾ‌ ಲಸಿಕೆ ನೀಡಲಿ, ಕೊರೋನಾ ಲಸಿಕೆಯನ್ನು ರಾಷ್ಟ್ರೀಯ ಸಂಪತ್ತು ಎಂಬುದಾಗಿ ಘೋಷಣೆ ಮಾಡಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ಕರ್ನಾಟಕದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಉಚಿತವಾಗಿ ನೀಡಲು ಮನಸ್ಸು ಮಾಡಿಲ್ಲ. ಅಷ್ಟೇ ಅಲ್ಲ, ರಾಜ್ಯಗಳಿಗೆ ಅವುಗಳ ಅಗತ್ಯಕ್ಕೆ ತಕ್ಕಷ್ಟು ಲಸಿಕೆಯನ್ನೂ ಪೂರೈಕೆ ಮಾಡಿಲ್ಲ. ಇದರಿಂದಾಗಿ ಇಂದಿನಿಂದ ಎಲ್ಲಾ ರಾಜ್ಯಗಳಲ್ಲಿ ಲಸಿಕೆ ನೀಡುವ ಅಭಿಯಾನ ಆರಂಭ ಆಗುತ್ತಿಲ್ಲ.

ರಾಜ್ಯಗಳು ಕೊರೊನಾ ಲಸಿಕಾ ಉತ್ಪನ್ನ ಸಂಸ್ಥೆಗಳಾದ ಕೋವಿಶೀಲ್ಡ್, ಕೋವ್ಯಾಕ್ಸಿನ್ ಮತ್ತು ಸ್ಫುಟ್ನಿಕ್ ವಿ ಸಂಸ್ಥೆಗಳಲ್ಲಿ ಆರ್ಡರ್ ಮಾಡಿವೆ. ಆದರೆ ಆ ಕಂಪನಿಗಳಿಂದಲೂ ಲಸಿಕೆಗಳು ಪೂರೈಕೆಯಾಗಿಲ್ಲ. ರಷ್ಯಾದಿಂದ ಖರೀದಿಸುತ್ತಿರುವ ಸ್ಫುಟ್ನಿಕ್ ವಿ ಲಸಿಕೆ ಇಂದಷ್ಟೇ ಭಾರತಕ್ಕೆ ಆಗಮಿಸಲಿದೆ. ಸ್ಪುಟ್ನಿಕ್ ಬಂದ ಮೇಲೆ ರಾಜ್ಯಗಳಿಗೆ ನೀಡಲಾಗುತ್ತದೆ.
ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ಛತ್ತೀಸ್ಗಢ ಮತ್ತು ಒರಿಸ್ಸಾ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಮಾತ್ರ ಅಭಿಯಾನ ಆರಂಭ ಆಗುತ್ತಿದೆ.ಉಳಿದಂತೆ ಕರ್ನಾಟಕದ ಆರೋಗ್ಯ ಸಚಿವ ಡಾ‌. ಕೆ. ಸುಧಾಕರ್ ಕೂಡ 'ರಾಜ್ಯದಲ್ಲಿ ಕೊರೊನಾ ಲಸಿಕೆಗಳು ಇಲ್ಲ. ಆದುದರಿಂದ ಮೇ 1ರಂದು ಯಾರೂ ಲಸಿಕಾ ಕೇಂದ್ರಗಳ ಬಳಿ ಬರಬೇಡಿ' ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, 'ಅಗತ್ಯ ಇರುವಷ್ಟು ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಲಸಿಕೆ ಪೂರೈಕೆ ಬಳಿಕವಷ್ಟೆ ತಾವು ಜನರಿಗೆ ವ್ಯಾಕ್ಸಿನ್ ನೀಡಲು ಸಾಧ್ಯ' ಎಂದು ಸ್ಪಷ್ಟಪಡಿಸಿದ್ದಾರೆ.
Youtube Video

ಪಶ್ಚಿಮ ಬಂಗಾಳದಲ್ಲಿ ಇಂದು ಮೇ 1ರ ರಜೆ, ನಾಳೆ ಮೇ 2ಕ್ಕೆ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ, ಮೇ 3 ಮತ್ತು 4ರಂದು ಇನ್ನೂ ಯಾವುದೇ ಕಾರ್ಯಕ್ರಮ ನಿಗಧಿಯಾಗಿಲ್ಲ. ಮೇ 5ರಿಂದ ಅಭಿಯಾನ ಆರಂಭ ಆಗಬಹುದು ಎಂದು ಹೇಳಲಾಗುತ್ತಿದೆ. ಪಂಜಾಬ್, ಜಾರ್ಖಂಡ್ ಈ ಮೊದಲೇ 'ನಮ್ಮಲ್ಲಿ ಲಸಿಕೆ ಇಲ್ಲ, ಹಾಗಾಗಿ ಲಸಿಕೆ ಅಭಿಯಾನ ಆರಂಭಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದವು.
Published by: Latha CG
First published: May 1, 2021, 9:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories