COVID-19 Variant: 2022ರಲ್ಲಿ ಮತ್ತೆ ಜಗತ್ತನ್ನು ಬಾಧಿಸಲಿದೆ COVID-19 ರೂಪಾಂತರ, ಹೇಗೆ ಅಂತೀರಾ? ಇಲ್ಲಿದೆ ವಿವರ

ಶ್ರೀಮಂತ ದೇಶಗಳು ಲಸಿಕೆ ಹಾಗೂ ಇನ್ನಿತರ ಉತ್ತಮ ವೈದ್ಯಕೀಯ ಸವಲತ್ತುಗಳಿಂದ ವೈರಸ್‌ಗೆ ತಡೆಯೊಡ್ಡುತ್ತವೆ. ಆದರೆ ಬಡ ದೇಶಗಳಲ್ಲಿ ವೈರಸ್ ಪರಿಣಾಮ ಹಾಗೆಯೇ ಉಳಿದಿದೆ. ಶ್ರೀಮಂತ ದೇಶಗಳಂತೆ ಬಡ ದೇಶಗಳಿಗೆ ವೈರಸ್ ಹತ್ತಿಕ್ಕುವ ಯೋಜನೆಗಳನ್ನು ಅಳವಡಿಸಲು ಸಾಧ್ಯವಿಲ್ಲ. ಇದರಿಂದ ರೂಪಾಂತರಗಳು ಅಭಿವೃದ್ಧಿಗೊಳ್ಳಲಿವೆ ಎಂದು ತಿಳಿಸಿದ್ದಾರೆ.

ಕೊರೋನಾ ವೈರಸ್.

ಕೊರೋನಾ ವೈರಸ್.

  • Share this:
ಅಮೆರಿಕ(America) ಮೂಲದ ಖ್ಯಾತ ರೋಗನಿರೋಧಕ ತಜ್ಞರಾದ ಡಾ. ಮಾರ್ಕ್ ಡೈಬುಲ್ ಕೊರೋನಾ ವೈರಸ್(Corona virus) ಸಾಂಕ್ರಾಮಿಕದ ಭವಿಷ್ಯದ ಕುರಿತು ಆತಂಕಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದು ಕೋವಿಡ್-19 ಲಸಿಕೆ ನಿರೋಧಕ ವೈರಸ್ ತಳಿಯು(Vaccine-resistant COVID-19 variant) 2022ರಲ್ಲಿ ಬಾಧಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಜಾರ್ಜ್‌ಟೌನ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್‌ನ ಮೆಡಿಸಿನ್ ವಿಭಾಗ(Medicine Department)ದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಡೈಬುಲ್ ಎನೋಚಿಯನ್ ಬಯೋಸೈನ್ಸ್‌ನ CEO ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಷಿಂಗ್ಟನ್, DCಯಲ್ಲಿ ನಡೆದ ಪ್ರಮುಖ ಅಮೆರಿಕನ್ ವ್ಯಾಪಾರ ಸುದ್ದಿ ಬಿಡುಗಡೆಯಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು, ಪ್ರಸಿದ್ಧ ರೋಗನಿರೋಧಕಶಾಸ್ತ್ರಜ್ಞರು ಮಾಹಿತಿಯುಕ್ತ ಪ್ರತಿಪಾದನೆ ನಡೆಸುತ್ತಿಲ್ಲ. ಲಸಿಕೆ(Vaccine) ಎಷ್ಟು ಪರಿಣಾಮಕಾರಿ ಎಂಬ ವಿವರವನ್ನೂ ನೀಡಿಲ್ಲ ಹೀಗಾಗಿ ಕೋವಿಡ್-19 ಲಸಿಕೆ ನಿರೋಧಕ ತಳಿಯು 2022ರಲ್ಲಿ ತನ್ನ ವಿಸ್ತಾರ ಜಾಲ ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.

ಲಸಿಕೆ-ನಿರೋಧಕ ರೂಪಾಂತರ:

ನಾವು ಎಷ್ಟು ಬೇಗ ಸುಧಾರಣೆಗೊಳ್ಳುತ್ತೇವೆಯೋ ಅಷ್ಟು ಬೇಗ ನಾವು ಸುರಕ್ಷಿತರಾಗಿರುತ್ತೇವೆ ಎಂದು ಹೇಳಿರುವ ಅವರು, ತಮ್ಮ ಭವಿಷ್ಯ ನಿಜವಾಗುವುದರ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ನಾನು ಹೇಳುವ ಪ್ರತಿಯೊಂದು ವಿಷಯವೂ ನಿಜವಾಗುತ್ತಿದೆ. ಆದರೂ ಈ ಸಮಯದಲ್ಲಿ ನನ್ನ ಭವಿಷ್ಯ ಸುಳ್ಳಾಗಲೂಬಹುದು. ಮಾರ್ಚ್, ಏಪ್ರಿಲ್, ಮೇ ತಿಂಗಳೊಳಗೆ ನಾವು ಪೂರ್ಣವಾಗಿ ಲಸಿಕೆ-ನಿರೋಧಕ ರೂಪಾಂತರ ಹೊಂದಲಿದ್ದೇವೆ. ಲಸಿಕೆ ಹಾಕಿದ ಮತ್ತು ಲಸಿಕೆ ಹಾಕದ ಜನರ ನಡುವೆ ವೈರಸ್ ಇದೀಗ ತನ್ನಾಟ ಆಡುತ್ತಿರುವುದರಿಂದ ಕಡಿಮೆ ಪ್ರಮಾಣದ ವ್ಯಾಕ್ಸಿನೇಶನ್ ದರ ಸಹಾಯಕವಾಗಿರುವುದಿಲ್ಲ ಎಂದು ತಿಳಿಸಿರುವ ಅವರು ಹೀಗಾಗಿ ಲಸಿಕೆಗೂ ಬಗ್ಗದ ರೂಪಾಂತರವನ್ನು ನಾವು ಶೀಘ್ರದಲ್ಲಿಯೇ ಕಂಡುಕೊಳ್ಳುವ ನಿರೀಕ್ಷೆ ಇದೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Vegetarians: ಸಸ್ಯಾಹಾರಿ ಪ್ರಯಾಣಿಕರಿಗೆ ಸಿಹಿಸುದ್ದಿ! ಇನ್ಮುಂದೆ ರೈಲುಗಳಲ್ಲಿ ದೊರೆಯಲಿದೆ ಶುದ್ಧ ವೆಜ್ ಫುಡ್..!

ಸಾಂಕ್ರಾಮಿಕ ರೋಗ ಮುಂದಿನ ದಿನಗಳಲ್ಲಿ ಹೇಗಿರಬಹುದು?

ಸಾಂಕ್ರಾಮಿಕ ರೋಗ ಮುಂದಿನ ದಿನಗಳಲ್ಲಿ ಹೇಗಿರಬಹುದು ಎಂಬುದರ ಕುರಿತು ಕೆಲವೊಂದು ಅಂಶಗಳನ್ನು ಪ್ರಸ್ತಾವಿಸಿದ ಅವರು, ಶತಮಾನದ ಹಿಂದೆ ಬಂದೆರಗಿದ್ದ ಸ್ಪ್ಯಾನಿಶ್‌ ಜ್ವರದಂತೆಯೇ ದುರ್ಬಲಗೊಳ್ಳಬಹುದು ಎಂದಾಗಿದೆ. ಆದರೆ ಡೈಬುಲ್ ಹೇಳುವಂತೆ ಪ್ರಪಂಚವು ಸಾಂಕ್ರಾಮಿಕದೊಂದಿಗೆ ಹೋರಾಡಲು ಹೆಚ್ಚು ಸಜ್ಜುಗೊಡ್ಡಿರುವುದರಿಂದ ವೈರಸ್ ದುರ್ಬಲವಾಗುತ್ತದೆ ಎಂಬುದಾಗಿ ಊಹಿಸುವುದು ಕಷ್ಟವೆಂದಿದ್ದಾರೆ. ಜನರು ಇದೀಗ ಸಾಮಾನ್ಯ ಜೀವನೆದೆಡೆಗೆ ಮುಖ ಮಾಡಿರುವುದರಿಂದ ಕೋವಿಡ್-19 ಹರಡುವಿಕೆ ಸುಲಭವಾಗಿದೆ ಎಂದು ತಿಳಿಸಿದ್ದಾರೆ.

ಬಡ ದೇಶಗಳಲ್ಲಿ ವೈರಸ್ ಪರಿಣಾಮ ಹೆಚ್ಚು

ಇನ್ನು ಎರಡನೆಯ ವಿಚಾರ ಮುಂದಿಟ್ಟ ಅವರು, ಶ್ರೀಮಂತ ದೇಶಗಳು ಲಸಿಕೆ ಹಾಗೂ ಇನ್ನಿತರ ಉತ್ತಮ ವೈದ್ಯಕೀಯ ಸವಲತ್ತುಗಳಿಂದ ವೈರಸ್‌ಗೆ ತಡೆಯೊಡ್ಡುತ್ತವೆ. ಆದರೆ ಬಡ ದೇಶಗಳಲ್ಲಿ ವೈರಸ್ ಪರಿಣಾಮ ಹಾಗೆಯೇ ಉಳಿದಿದೆ. ಶ್ರೀಮಂತ ದೇಶಗಳಂತೆ ಬಡ ದೇಶಗಳಿಗೆ ವೈರಸ್ ಹತ್ತಿಕ್ಕುವ ಯೋಜನೆಗಳನ್ನು ಅಳವಡಿಸಲು ಸಾಧ್ಯವಿಲ್ಲ. ಇದರಿಂದ ರೂಪಾಂತರಗಳು ಅಭಿವೃದ್ಧಿಗೊಳ್ಳಲಿವೆ ಎಂದು ತಿಳಿಸಿದ್ದಾರೆ.

ಇನ್ನು ಮೂರನೇ ಅಂಶದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಡೈಬುಲ್, ತಡೆಗಟ್ಟುವ ಔಷಧ ಹಾಗೂ ಲಸಿಕೆಗಳು ರೂಪಾಂತರಗಳ ದಿಕ್ಕನ್ನು ಬದಲಾಯಿಸಲಿದ್ದು, ಪ್ರಪಂಚದಾದ್ಯಂತ ಸಾಂಕ್ರಾಮಿಕದ ಪರಿಸ್ಥಿತಿಯು ಭವಿಷ್ಯಕ್ಕಾಗಿ ಗೊಂದಲಮಯವಾಗಿರುವ ಸಾಧ್ಯತೆ ಹೆಚ್ಚು ಎಂದು ತಿಳಿಸಿದ್ದಾರೆ. ಆದರೆ ಇಂತಹ ಪರಿಸ್ಥಿತಿ ಶೀಘ್ರದಲ್ಲೇ ಉಂಟಾಗುವ ಸಾಧ್ಯತೆ ಕಡಿಮೆ ಎಂದು ಹೇಳಿರುವ ಡೈಬುಲ್, ಈ ರೀತಿಯ ಪರಿಸ್ಥಿತಿಗೆ ಪ್ರಪಂಚವು ಬರಲು ಅಂದಾಜು ಎರಡರಿಂದ ಮೂರು ವರ್ಷಗಳ ಸಮಯ ತೆಗೆದುಕೊಳ್ಳಬಹುದು.

ಇದನ್ನೂ ಓದಿ: Life in Moon- ಚಂದ್ರನಲ್ಲಿ ಇಡೀ ಮಾನವಕುಲ 1 ಲಕ್ಷ ವರ್ಷ ಬದುಕುವಷ್ಟು ಆಕ್ಸಿಜನ್ ಇದೆ, ಆದರೆ…

ವಿಶ್ವ ಆರೋಗ್ಯ ಸಂಸ್ಥೆಯ (WHO) ಸಾಪ್ತಾಹಿಕ ವರದಿ:

ಇದರ ನಡುವೆಯೇ ವಿಶ್ವ ಆರೋಗ್ಯ ಸಂಸ್ಥೆ (WHO) ಸಾಪ್ತಾಹಿಕ ವರದಿಯನ್ನು ಬಹಿರಂಗಪಡಿಸಿದ್ದು, ಸಾಂಕ್ರಾಮಿಕದಿಂದ ಮರಣ ಪ್ರಮಾಣಗಳು ಸ್ಥಿರವಾಗಿವೆ. ಅಂತೆಯೇ ಯುರೋಪ್ ಹೊರತುಪಡಿಸಿ ಮಿಕ್ಕೆಲ್ಲಾ ಪ್ರದೇಶಗಳಲ್ಲಿ ಸೋಂಕು ಇಳಿಮುಖವಾಗಿವೆ ಎಂದು ತಿಳಿಸಿದೆ. ಯುರೋಪ್‌ನಲ್ಲಿ ಕೋವಿಡ್-19 ಪ್ರಕರಣಗಳು ಹಾಗೂ ಮರಣ ಪ್ರಮಾಣಗಳು ಏರಿಕೆಯಾಗುತ್ತಿರುವುದರಿಂದ ಜನವರಿ 2022ರ ವೇಳೆಗೆ 500,000ಕ್ಕೂ ಹೆಚ್ಚು ಸಾವುಗಳು ದಾಖಲಾಗಬಹುದು ಎಂಬ ಆತಂಕಗಳಿವೆ.
Published by:Latha CG
First published: