vaccine for covid 19: ಸದ್ಯಕ್ಕಿಲ್ಲ ಕೊರೋನಾ ಲಸಿಕೆ; ಆರಂಭಿಕ ಹಂತದಲ್ಲೇ ಇದೆ ಭಾರತದ ಪ್ರಯೋಗ

ಕೊರೋನಾ ಲಸಿಕೆ ತಯಾರಿಸೋಕೆ ಕಳೆದ ಮೂರು ತಿಂಗಳಿನಿಂದ ಭಾರತದ 5 ಕಂಪೆನಿಗಳು ಕೇಂದ್ರ ಸರ್ಕಾರದ ಜೊತೆ ಕೆಲಸ ಮಾಡುತ್ತಿವೆ. ಆದರೆ, ಭಾರತ ಲಸಿಕೆ ತಯಾರಿಕೆಯಲ್ಲಿ ಇನ್ನೂ ಮೊದಲನೇ ಹಂತದಲ್ಲಿದೆ. ಹಾಗಾಗಿ ಕೂಡಲೇ ಅಂತೂ ಲಸಿಕೆ ತಯಾರಾಗುವ ಸಾಧ್ಯತೆಗಳು ಇಲ್ಲ ಎನ್ನಲಾಗುತ್ತಿದೆ.

news18-kannada
Updated:July 1, 2020, 7:26 AM IST
vaccine for covid 19: ಸದ್ಯಕ್ಕಿಲ್ಲ ಕೊರೋನಾ ಲಸಿಕೆ; ಆರಂಭಿಕ ಹಂತದಲ್ಲೇ ಇದೆ ಭಾರತದ ಪ್ರಯೋಗ
ಪ್ರಯೋಗಾಲಯದ ಪ್ರಾತಿನಿಧಿಕ ಚಿತ್ರ
  • Share this:
ಕೊರೊನಾ ಹೋಗ್ಬೇಕಾದ್ರೆ ಏನ್ಮಾಡ್ಬೇಕು? ವೈದ್ಯರು ಹೇಳೋ ಪ್ರಕಾರ ಇದಕ್ಕಿರುವುದು ಎರಡೇ ಉತ್ತರ. ಒಂದು ಎಲ್ಲರಿಗೂ ಸೋಂಕು ಬಂದು ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಬೇಕು. ಅಥವಾ ಇದಕ್ಕೊಂದು ಲಸಿಕೆ ಕಂಡುಹಿಡಿಯಬೇಕು. ಹಾಗಾದ್ರೆ ಭಾರತ ಲಸಿಕೆ ಕಂಡುಹಿಡಿಯುತ್ತಿದ್ಯಾ? ಎಷ್ಟು ಸಂಶೋಧನೆಗಳಾಗಿವೆ? ಈ ದಾರಿಯಲ್ಲಿ ಇನ್ನೆಷ್ಟು ದೂರ ಕ್ರಮಿಸುವುದು ಬಾಕಿ ಇದೆ? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಕೊರೋನಾ ಲಸಿಕೆ ತಯಾರಿಸೋಕೆ ಕಳೆದ ಮೂರು ತಿಂಗಳಿನಿಂದ ಭಾರತದ 5 ಕಂಪೆನಿಗಳು ಕೇಂದ್ರ ಸರ್ಕಾರದ ಜೊತೆ ಕೆಲಸ ಮಾಡುತ್ತಿವೆ. ಆದರೆ, ಭಾರತ ಲಸಿಕೆ ತಯಾರಿಕೆಯಲ್ಲಿ ಇನ್ನೂ ಮೊದಲನೇ ಹಂತದಲ್ಲಿದೆ. ಹಾಗಾಗಿ ಕೂಡಲೇ ಅಂತೂ ಲಸಿಕೆ ತಯಾರಾಗುವ ಸಾಧ್ಯತೆಗಳು ಇಲ್ಲ ಎನ್ನಲಾಗುತ್ತಿದೆ.

ಲಸಿಕೆ ತಯಾರಿಕೆಯಲ್ಲಿ ಒಟ್ಟು 4 ಹಂತಗಳಿರುತ್ತವೆ. ಅದರಲ್ಲಿ ಮೂರನೇ ಹಂತದಲ್ಲಿ ಮನುಷ್ಯರ ಮೇಲೆ ಪ್ರಯೋಗ ಮಾಡಲಾಗುತ್ತದೆ. ಮೊದಲನೇ ಹಂತದಲ್ಲಿ ರಾಸಾಯನಿಕಗಳನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗುತ್ತದೆ. ಭಾರತ ಸದ್ಯ ಈ ಹಂತದಲ್ಲಿ ಇದೆ. ಹೀಗಾಗಿ ಲಸಿಕೆ ತಯಾರಾಗೋಕೆ ಇನ್ನೂ ಕನಿಷ್ಟ 6-8 ತಿಂಗಳು ಸಮಯ ಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.

ಲಸಿಕೆ ತಯಾರಿಕೆಯಲ್ಲಿ ಪ್ರಮುಖವಾಗಿ ನಾಲ್ಕು ಹಂತಗಳಿರುತ್ತವೆ: 1.ಪ್ರಯೋಗಾಲಯದಲ್ಲಿ ರಾಸಾಯನಿಕಗಳ ಹೊಂದಾಣಿಕೆ ಪರೀಕ್ಷೆ 2. ಪ್ರಾಣಿಗಳ ಮೇಲೆ ಪರೀಕ್ಷೆ 3. ಮನುಷ್ಯರ ಮೇಲೆ ಪ್ರಯೋಗ 4. ಲಸಿಕೆಯ ಒಪ್ಪಿಗೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ರವಾನೆ ಮತ್ತು ತಯಾರಿಕೆ ಆರಂಭ.

ಇದನ್ನೂ ಓದಿ : ಬಾಯಿ ಬಿಟ್ಟರೆ ಬಣ್ಣಗೇಡು, ಕೈಲಾಗದ ನಾಯಕ ಗೋಲಾಟದಂತಿದೆ ಪ್ರಧಾನಿ ಮೋದಿ ಭಾಷಣ; ಸಿದ್ದರಾಮಯ್ಯ ಕಿಡಿ

ಆದರೆ, ಪ್ರಸ್ತುತ ಭಾರತ ಮೊದಲನೇ ಹಂತದಲ್ಲಿದೆ. ಕನಿಷ್ಟ ಮೂರನೇ ಹಂತಕ್ಕೆ ಬಂದ ಮೇಲಷ್ಟೇ ಸಮಾಧಾನ ಪಟ್ಟುಕೊಳ್ಳಬಹುದು.ಈಗ ಭಾರತದಲ್ಲಿ ರೋಗಲಕ್ಷಣಗಳಿಗಷ್ಟೇ ಚಿಕಿತ್ಸೆ ನೀಡಲಾಗುತ್ತಿದೆ. ಯಾವ ರೋಗಿಗೆ ಯಾವ ಲಕ್ಷಣವಿದೆಯೋ ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ನಿರ್ದಿಷ್ಟ ಲಸಿಕೆ ತಯಾರಿಕೆಯಾಗಿ ಜನರಿಗೆ ಸಿಗಲು ಕನಿಷ್ಟ ಇನ್ನು ಆರು ತಿಂಗಳಾಗುತ್ತದೆ ಎನ್ನುತ್ತಾರೆ ತಜ್ಞರು. ‌ಅಲ್ಲಿಗೆ‌ ಕೊರೋನಾ ಕಂಟಕ ಸದ್ಯಕ್ಕೆ ಮುಗಿಯುವ ಯಾವ ಲಕ್ಷಣಗಳೂ ಕಾಣದಂತಾಗಿರುವುದು ಮಾತ್ರ ವಿಪರ್ಯಾಸ.
First published:July 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading