Covid Vaccine- ಲಸಿಕೆ ಒಂದು ವರ್ಷವಾದರೂ ನಮ್ಮ ದೇಹಕ್ಕೆ ಕೆಲಸ ಮಾಡುತ್ತೆ: WHO ಮುಖ್ಯ ವಿಜ್ಞಾನಿ

Booster Dose Necessary?: ಸದ್ಯ ಒಂದು ವ್ಯಾಕ್ಸಿನ್ನ ನಿಗದಿತ ಡೋಸ್​ಗಳು ನಮ್ಮ ದೇಹವನ್ನು ಕೊರೋನಾದಿಂದ ರಕ್ಷಿಸಲು ಸಾಕು. ಬೂಸ್ಟರ್ ಡೋಸ್​​ಗಳು ಅಗತ್ಯ ಎನ್ನುವಂಥ ಸೂಚನೆ ಸಿಕ್ಕಿಲ್ಲ ಎಂದು ಡಬ್ಲ್ಯೂಎಚ್ಒ ಮುಖ್ಯ ವಿಜ್ಞಾನಿ ಹೇಳಿದ್ದಾರೆ.

ಡಾ. ಸೌಮ್ಯಾ ಸ್ವಾಮಿನಾಥನ್

ಡಾ. ಸೌಮ್ಯಾ ಸ್ವಾಮಿನಾಥನ್

 • News18
 • Last Updated :
 • Share this:
  ನವದೆಹಲಿ, ನ. 15: ನಾವು ಹಾಕಿಸಿಕೊಳ್ಳುವ ಯಾವುದೇ ಕೋವಿಡ್ ಲಸಿಕೆ ಖಾಯಂ ಆಗಿ ನಮ್ಮ ದೇಹಕ್ಕೆ ರಕ್ಷಣೆ ಕೊಡೋದಿಲ್ಲ. ಹಾಗಾದರೆ ಎಷ್ಟು ದಿನ ಎಂದು ನಮ್ಮ ದೇಹವನ್ನು ಕೋವಿಡ್ ವೈರಸ್​ನಿಂದ ಕಾಪಾಡುತ್ತದೆ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ಇದಕ್ಕೆ ಯಾರ ಬಳಿಯೂ ಖಚಿತ ಉತ್ತರ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆ (WHO- World Health Organization) ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ (WHO Chief Scientist Dr. Soumya Swaminathan) ಪ್ರಕಾರ, ಕೋವಿಡ್ ಲಸಿಕೆ ನಮ್ಮ ದೇಹದಲ್ಲಿ ಕನಿಷ್ಠ ಒಂದು ವರ್ಷವಾದರೂ ರಕ್ಷಣೆ ಕೊಡಬಲ್ಲುದಂತೆ.

  “ವ್ಯಾಕ್ಸಿನ್​ನಿಂದ ಸೃಷ್ಟಿಯಾದ ರೋಗನಿರೋಧಕ ಶಕ್ತಿ ದೀರ್ಘ ಕಾಲ ಇರಬಹುದು ಎಂಬ ಸುಳಿವು ಸಿಕ್ಕಿದೆ. ನಮ್ಮ ರಕ್ತದದಲ್ಲಿ ಪ್ರತಿಕಾಯಗಳ (Antibodies) ಮಟ್ಟ ಕಡಿಮೆಯಾದರೂ ರೋಗ ನಿರೋಧಕ ಶಕ್ತಿ (Body Immunity) ಜಾಗೃತವಾಗಿರುತ್ತದೆ. ಆರೋಗ್ಯಯುತ ವಯಸ್ಕರಲ್ಲಿ (Healthy Adults) ಬಹುತೇಕರಿಗೆ ಕನಿಷ್ಠ ಒಂದು ವರ್ಷವಾದರೂ, ಅಥವಾ ಇನ್ನೂ ಹೆಚ್ಚು ಕಾಲ ಲಸಿಕೆ ಒಳ್ಳೆಯ ರಕ್ಷಣೆ ಆಗಬಲ್ಲುದು” ಎಂದು ಡಬ್ಲ್ಯೂಎಚ್ಒ ವಿಜ್ಞಾನಿ ಅಭಿಪ್ರಾಯಪಟ್ಟಿದ್ದಾರೆ.

  ಕೊರೋನಾ ಪ್ರಕರಣ ಹೆಚ್ಚುತ್ತಿರುವುದಕ್ಕೆ ಚಿಂತೆಪಡುವ ಅಗತ್ಯ ಇಲ್ಲ:

  ಕೋವಿಡ್ ಪ್ರಕರಣಗಳು ಭಾರತವೂ ಸೇರಿದಂತೆ ಜಾಗತಿಕವಾಗಿ ಹೆಚ್ಚುತ್ತಿವೆ. ಕೋವಿಡ್​ನ ಮತ್ತೊಂದು ಅಲೆ ವಕ್ಕರಿಸುತ್ತಿದೆ. ಲಸಿಕೆಯನ್ನೂ ಮೀರಿ ಕೋವಿಡ್ ಹೊಸ ಅವತಾರ ತಾಳಿ ಮುನ್ನುಗ್ಗಬಹುದು ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಚೀಫ್ ಸೈಂಟಿಸ್ಟ್ ಆಗಿರುವ ಸೌಮ್ಯಾ ಸ್ವಾಮಿನಾಥನ್ ಅವರು ಈ ಬಗ್ಗೆ ಮಾತನಾಡಿದ್ದು, ಹೆಚ್ಚು ಚಿಂತೆ ಪಡುವ ಅಗತ್ಯವಿಲ್ಲ ಎಂದಿದ್ಧಾರೆ.

  ಜಾಗತಿಕವಾಗಿ ಕೋವಿಡ್ ಪ್ರಕರಣಗಳು ಏರುತ್ತಿರುವ ಪ್ರಮಾಣ ನಿರೀಕ್ಷಿತ ಮಟ್ಟದಲ್ಲೇ ಇದೆ ಎಂದ ಅವರು ಲಸಿಕೀಕರಣದಿಂದಾಗಿ ಸಾವಿನ ಪ್ರಮಾಣ ತಗ್ಗಿರುವ ಅಂಶವನ್ನು ಉಲ್ಲೇಖಿಸಿದ್ದಾರೆ.

  ಇದನ್ನೂ ಓದಿ: England: ಲೈಂಗಿಕ ಚಟುವಟಿಕೆಗೆ ಬೆಂಬಲ ನೀಡುವ ಕೋರ್ಸ್ ಆರಂಭಿಸಿದ ದುರ್‌ಹಮ್ ವಿಶ್ವವಿದ್ಯಾನಿಲಯ

  “ಪಶ್ಚಿಮ ಯೂರೋಪ್​ನ ಹಲವು ದೇಶಗಳಲ್ಲಿ ವಿವಿಧ ಕಾರಣಗಳಿಂದ ಕೋವಿಡ್ ಪ್ರಕರಣಗಳು ಹೆಚ್ಚಳವಾಗಿವೆ. ಆಸ್ಪತ್ರೆಗೆ ದಾಖಲಾಗುತ್ತಿರುವುದೂ ಹೆಚ್ಚುತ್ತಿದೆ. ಆದರೆ, ಸಾವಿನ ಪ್ರಮಾಣದಲ್ಲಿ ಗಮನಾರ್ಹ ಮಟ್ಟದಲ್ಲಿ ಹೆಚ್ಚಳವಾಗಿಲ್ಲ. ಸೋಂಕಿನ ಅಪಾಯ ಇರುವ ಜನರಿಗೆ ಬಹುತೇಕ ಲಸಿಕೆ ಹಾಕಿರುವುದರಿಂದ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಅಂತರ ತಗ್ಗಿದೆ” ಎಂದು ಕೋವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆಯ ಮಹತ್ವವನ್ನು ಡಾ. ಸೌಮ್ಯಾ ಸ್ವಾಮಿನಾಥನ್ ಎತ್ತಿತೋರಿಸಿದ್ದಾರೆ.

  ಲಸಿಕೆಗಳ ಬೆರಕೆ ಹಾಗೂ ಹೆಚ್ಚುವರಿ ಡೋಸ್ ಪರಿಣಾಮಕಾರಿಯಾ (Vaccine Mixup and Booster Doses)?

  ಲಸಿಕೆಗಳು ದೀರ್ಘಕಾಲ ಪರಿಣಾಕಾರಿ ಇರುವುದಿಲ್ಲ. ಬೂಸ್ಟರ್ ಡೋಸ್ ಅಗತ್ಯ ಇದೆ ಎಂಬ ಅಭಿಪ್ರಾಯಗಳು ಹಲವೆಡೆಯಿಂದ ಬರುತ್ತಿವೆ. ಹಾಗೆಯೇ, ವಿವಿಧ ಪ್ರಾಕಾರದ ಲಸಿಕೆಗಳ ಸಂಯೋಜನೆಯನ್ನ ಹಾಕಿಸಿಕೊಂಡರೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎಂಬ ಸುದ್ದಿ ಹಲವು ದಿನಗಳಿಂದ ಇದೆ. ಈ ಬಗ್ಗೆ ಸಿಎನ್​ಬಿಸಿ-ಟಿವಿ18 ವಾಹಿನಿಯಲ್ಲಿ ಪ್ರತಿಕ್ರಿಯಿಸಿದ ಡಬ್ಲ್ಯೂಎಚ್​ಒ ಮುಖ್ಯ ವಿಜ್ಞಾನಿ, ಈ ವಿಚಾರ ಬಹಳ ಕುತೂಹಲಕಾರಿ ಆಗಿದೆಯಾದರೂ ಇನ್ನೂ ಸಮರ್ಪಕ ಡಾಟಾ ಅಗತ್ಯ ಇದೆ. ಬೂಸ್ಟರ್ ಡೋಸ್​ಗಳ ಅಗತ್ಯತೆ ಇದೆಯಾ ಎಂಬುದಿನ್ನೂ ನಿರ್ಧಾರ ಆಗಬೇಕಿದೆ ಎಂದಿದ್ದಾರೆ.

  ಕೋವ್ಯಾಕ್ಸಿನ್​ಗೆ ಅನುಮೋದನೆ ನೀಡಲು ವಿಳಂಬವಾಗಿದ್ಯಾಕೆ?

  ಭಾರತದಲ್ಲಿ ದೇಶೀಯವಾಗಿ ನಿರ್ಮಿತವಾದ ಕೋವಾಕ್ಸಿನ್ ಲಸಿಕೆಗೆ (Covaxin Vaccine) ಡಬ್ಲ್ಯೂಎಚ್​ಒ ಅನುಮೋದನೆ ಕೊಡುವುದು ವಿಳಂಬವಾಯಿತು ಎಂಬ ಅಸಮಾಧಾನಗಳು ಕೆಲವೆಡೆಯಿಂದ ಬಂದಿವೆ. ಆದರೆ, ಈ ವಿಳಂಬವನ್ನು ಡಾ. ಸೌಮ್ಯಾ ಸಮರ್ಥಿಸಿಕೊಂಡಿದ್ದಾರೆ. “ಸ್ವತಂತ್ರವಾದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಕ್ರಿಯೆಗಳನ್ನ ಗೌರವಿಸಬೇಕು. ತುರ್ತು ಬಳಕೆ ಪಟ್ಟಿಗೆ ಸೇರಿಸುವ ಪ್ರಕ್ರಿಯೆಗೆ 45ರಿಂದ 165 ದಿನಗಳು ಬೇಕಾಗುತ್ತದೆ. ಕೋವ್ಯಾಕ್ಸಿನ್​ಗೆ 90 ದಿನ ಹಿಡಿದಿದೆ. ಅದು ತೀರಾ ವಿಳಂಬ ಆಯಿತೆಂದು ಅನಿಸುವುದಿಲ್ಲ” ಎಂದು ಡಬ್ಲ್ಯೂಎಚ್​ಒ ಚೀಫ್ ಸೈಂಟಿಸ್ಟ್ ತಿಳಿಸಿದ್ಧಾರೆ.
  Published by:Vijayasarthy SN
  First published: