ಲಾಕ್​ಡೌನ್​ ಉಲ್ಲಂಘನೆ; 6 ತಿಂಗಳ ಶಿಶು, 3 ವರ್ಷದ ಮಗು ವಿರುದ್ಧ ಕೇಸ್ ದಾಖಲು!

ಉತ್ತರ ಕಾಶಿಯಲ್ಲಿ ಲಾಕ್​ಡೌನ್​ ಇದ್ದರೂ ಗುಂಪಾಗಿ ರಸ್ತೆಯಲ್ಲಿ ಓಡಾಡಿದ ಒಂದು ಕುಟುಂಬ ಸೇರಿದಂತೆ 51 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉತ್ತರಾಖಂಡ (ಏ. 24): ದೇಶದೆಲ್ಲೆಡೆ ಮೇ 3ರವರೆಗೆ ಕಟ್ಟುನಿಟ್ಟಿನ ಲಾಕ್​ಡೌನ್​ ಘೋಷಿಸಲಾಗಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗುತ್ತಿದೆ. ಲಾಕ್​ಡೌನ್​ ಉಲ್ಲಂಘನೆ ಮಾಡುವವರ ವಿರುದ್ಧ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಉತ್ತರಾಖಂಡದಲ್ಲಿ ಲಾಕ್​ಡೌನ್​ ಉಲ್ಲಂಘನೆ ಮಾಡಿದರು ಎಂಬ ಕಾರಣಕ್ಕೆ 6 ತಿಂಗಳ ಶಿಶು ಮತ್ತು 3 ವರ್ಷದ ಮಗುವಿನ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ!

6 ತಿಂಗಳ ಮಗು ಮತ್ತು 3 ವರ್ಷದ ಮಗು ಸೇರಿದಂತೆ ಒಟ್ಟು 51 ಮಂದಿ ವಿರುದ್ಧ ಉತ್ತರ ಕಾಶಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಉತ್ತರ ಕಾಶಿಯಲ್ಲಿ ಲಾಕ್​ಡೌನ್​ ಇದ್ದರೂ ಗುಂಪಾಗಿ ರಸ್ತೆಯಲ್ಲಿ ಓಡಾಡಿದ ಒಂದು ಕುಟುಂಬ ಸೇರಿದಂತೆ 51 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ ಕುಟುಂಬದಲ್ಲಿ 6 ತಿಂಗಳ ಶಿಶು, 3 ವರ್ಷದ ಮಗು ಹಾಗೂ 8 ವರ್ಷದ ಬಾಲಕ ಕೂಡ ಇದ್ದಾರೆ. ಲಾಕ್​ಡೌನ್​ ಮಕ್ಕಳಿಗೂ ಅನ್ವಯವಾಗುವುದರಿಂದ ಅವರ ವಿರುದ್ಧವೂ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.ಆದರೆ, ಬಾಲಾಪರಾಧಿ ಕಾಯ್ದೆಯ ಪ್ರಕಾರ 8 ವರ್ಷದೊಳಗಿನ ಮಕ್ಕಳ ವಿರುದ್ಧ ಕೇಸು ದಾಖಲಿಸುವಂತಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್​ ಮಾಹಿತಿ ನೀಡಿದ್ದಾರೆ.
First published: