ಸಾಂದರ್ಭಿಕ ಚಿತ್ರ
ಕಾರವಾರ(ಮೇ.01): ಉತ್ತರ ಕನ್ನಡ ಜಿಲ್ಲೆ ಕೊನೆಗೂ ಕೊರೋನಾ ಮುಕ್ತವಾಗಿದೆ. ಎಲ್ಲ ಸೋಂಕಿತರು ಗುಣಮುಖವಾಗಿದ್ದು, ಜಿಲ್ಲೆಯ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಇದರ ಜತೆಗೆ ಕೊರೋನಾ ಸೋಂಕಿತರನ್ನ ಯಾವ ರೀತಿ ಚಿಕಿತ್ಸೆಗೊಳಪಡಿಸುತ್ತಾರೆ ಎನ್ನುವ ಬಗ್ಗೆ ಇವತ್ತು ಕಾರವಾರ ಕಿಮ್ಸ್ ನಲ್ಲಿ ಪ್ರಾತ್ಯಕ್ಷಿಕೆ ನಡೆಯಿತು.
ಜಿಲ್ಲೆಯ ಜನರಲ್ಲಿ ತೀರಾ ಕುತೂಹಲ ಇದ್ದ ಸಂಗತಿ ಎಂದ್ರೆ ಕೊರೋನಾ ಸೋಂಕಿತರನ್ನ ಹೇಗೆ ವೈದ್ಯರು ಚಿಕಿತ್ಸೆಗೊಳಪಡಿಸುತ್ತಾರೆ ಎನ್ನುವ ಬಗ್ಗೆ. ತೀರಾ ಭಯ ಆತಂಕ ಜನರಲ್ಲಿ ಇದೆ, ಜನರನ್ನ ಸೋಂಕಿತರಿಂದ ದೂರ ಇಡುತ್ತಾರೆ. ಆದರೆ, ವಾರಿಯರ್ಸ್ಗಳು ಹೇಗೆ ಅವರ ಜತೆಯಾಗಿ ಚಿಕಿತ್ಸೆ ನೀಡುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಇವತ್ತು ಉತ್ತರ ಕನ್ನಡ ಜಿಲ್ಲಾಡಳಿತ ಆಶ್ರಯದಲ್ಲಿ ಕಾರವಾರ ಕಿಮ್ಸ್ ನಲ್ಲಿ ಕೊರೋನಾ ಸೋಂಕಿತರಿಗೆ ಹೇಗೆ ಚಿಕಿತ್ಸೆ ನೀಡುತ್ತಾರೆ ಮತ್ತು ಚಿಕಿತ್ಸೆಗೆ ತರುವ ಮುಂಚಿತವಾಗಿ ಏನೆಲ್ಲ ಕ್ರಮ ಕೈಗೊಳ್ಳುತ್ತಾರೆ ಎನ್ನುವ ಬಗ್ಗೆ ಇವತ್ತು ಪ್ರಾತ್ಯಕ್ಷಿಕೆ ನಡೆಯಿತು. ಜಿಲ್ಲೆಯ ಕೊರೋನಾ ವಾರಿಯರ್ಸ್ ಕೈಗೊಳ್ಳುವ ಕ್ರಮ ಮತ್ತು ಸೇವೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಲಾಯಿತು.
ಇನ್ನೂ ಇವತ್ತು ನಡೆದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಇಷ್ಟು ದಿನ ಕೊರೋನಾ ಸೋಕಿತರಿಗೆ ಚಿಕಿತ್ಸೆ ನೀಡಿ ಗುಣಮುಖರಾಗುವಲ್ಲಿ ಶ್ರಮಿಸಿದ ವೈದ್ಯರ ಜತೆಯಾಗಿ ಶುಶ್ರೂಷಕಿಯರ ತಂಡ ಹಾಜರಿದ್ದು, ತಾವು ನೀಡಿದ ಚಿಕಿತ್ಸೆಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು.
ಇನ್ನೂ ಇಷ್ಟು ದಿನ ಕಾರವಾರ ನೌಕಾ ನೆಲೆಯಲ್ಲಿರುವ ಪತಂಜಲಿ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಈಗ ಕಾರವಾರ ಕಿಮ್ಸ್ ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು 250 ಹಾಸಿಗೆಯುಳ್ಳು ಸುಸಜ್ಜಿತ ವಾರ್ಡ್ ತೆರೆಯಲಾಗಿದೆ.
ಇದನ್ನೂ ಓದಿ :
ಮದುವೆ ಖರ್ಚಿನ ಹಣ ಬಡವರಿಗೆ ವ್ಯಯಿಸಿದ ನವದಂಪತಿ; ಪಡಿತರ ನೀಡಿ ಮಾನವಿಯತೆ ಮೆರೆದ ವಿದ್ಯಾವರ್ಧಕ ಸಂಘ
ಇಷ್ಟು ದಿನ ಕಾರವಾರ ನೌಕಾನೆಲೆಯಲ್ಲಿರುವ ಪತಂಜಲಿ ಆಸ್ಪತ್ರೆಯಲ್ಲಿ ಸೋಂಕಿತರನ್ನ ಚಿಕಿತ್ಸೆಗೊಳಪಡಿಸಲಾಗಿತ್ತು. ಆದರೆ, ಈಗ ಕಾರವಾರ ಕಿಮ್ಸ್ ನಲ್ಲೆ ಚಿಕಿತ್ಸೆ ದೊರೆಯಲಿದೆ. ಜತೆಗೆ ಪ್ರಯೋಗಾಲಯ ಕೂಡಾ ಸಿದ್ದಪಡಿಸಲಾಗಿದ್ದು ಒಂದೆ ವೇದಿಕೆಯಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಬಗ್ಗೆ ಜನರಲಿದ್ದ ಕುತೂಹಲತೆಗೆ ತೆರೆ ಬಿದ್ದಿದೆ.
(ವರದಿ : ದರ್ಶನ್ ನಾಯ್ಕ)
First published:
May 1, 2020, 7:55 PM IST