news18-kannada Updated:May 12, 2020, 8:14 AM IST
ಸಾಂದರ್ಭಿಕ ಚಿತ್ರ
ಕಾರವಾರ(ಮೇ.12): ರಾಜ್ಯಕ್ಕೆ ಕಾರ್ಮಿಕರ ಮಹಾ ವಲಸೆ ಆರಂಭವಾಗಿ ಒಂದು ವಾರ ಸಮೀಪಿಸುತ್ತಿದೆ. ಈ ಮಹಾ ವಲಸೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಗ್ರಾಮೀಣ ಭಾಗಕ್ಕೆ ಬಂದ ಸಾವಿರಾರು ಕಾರ್ಮಿಕರು ಹೋಂ ಕ್ವಾರಂಟೈನ್ ನಲ್ಲಿದರೂ ಕೂಡಾ ಸುತ್ತಮುತ್ತ ಜನರಲ್ಲಿ ಆತಂಕ ಮನೆ ಮಾಡಿದೆ.
ಕಳೆದ ವಾರದಿಂದ ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮೀಣ ಭಾಗಕ್ಕೆ ಗೋವಾ ಹಾಗೂ ವಿವಿಧ ಅನ್ಯ ರಾಜ್ಯದಿಂದ ಕಾರ್ಮಿಕರು ಆಗಮಿಸುತ್ತಿದ್ದಾರೆ. ಸರಕಾರದ ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಜಿಲ್ಲಾಡಳಿತದಿಂದ ಅನುಮತಿ ಸಿಕ್ಕ ಬಳಿಕ ಹೊರ ರಾಜ್ಯದಲ್ಲಿ ನೆಲೆಸಿದ ಕಾರ್ಮಿಕರು ಜಿಲ್ಲೆಯತ್ತ ಆಗಮಿಸಿದ್ದಾರೆ.
ಬೇರೆ ರಾಜ್ಯದಲ್ಲಿ ಇದ್ದ ಕಾರ್ಮಿಕರು ಸುರಕ್ಷಿತವಾಗಿ ತವರು ಸೇರಿದ್ದಾರೆ ಎಂಬ ಖುಷಿ ಅವರಿಗೆ ಇದೆ. ಆದರೆ, ಅವರ ಸುತ್ತಮುತ್ತ ಮನೆಯವರಲ್ಲಿ ಈಗ ಆತಂಕ ಕಾಡುತ್ತಿದೆ. ಬಂದ ಕಾರ್ಮಿಕರು ಪೈಕಿ ಹೋಂ ಕ್ವಾರಂಟೈನ್ ನಲ್ಲಿ ಇದ್ದವರು ಅಲ್ಲಿ ಇಲ್ಲಿ ಕಣ್ತಪ್ಪಿಸಿ ಓಡಾಟ ನಡೆಸುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದ್ದು, ಅವರನ್ನ ಜಿಲ್ಲಾಡಳಿತದಿಂದಲೇ ಕ್ವಾರಂಟೈನ್ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ.
ಇನ್ನೂ ಈಗಾಗಲೆ ಭಟ್ಕಳದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ತೀರಾ ಹೆಚ್ಚಳವಾಗುತ್ತಿದ್ದು, ಜಿಲ್ಲೆಯ ಜನ ಈಗಾಗಲೆ ಭಯದ ನೆರಳಲ್ಲೆ ಜೀವನ ಕಳೆಯುತ್ತಿದ್ದಾರೆ. ಈಗ ಕೆಲ ಕೊರೋನಾ ಸೋಂಕಿತರು ರಾಜ್ಯದಿಂದ ಕೂಡಾ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಕಾರ್ಮಿಕರು ಆಗಮಿಸಿದ್ದು ಹಳ್ಳಿ, ಊರು, ಕೇರಿಗಳಲ್ಲಿರುವ ಸುತ್ತಮುತ್ತಲಿನ ಮನೆಯಲ್ಲಿ ಆತಂಕ ಮನೆ ಮಾಡಿದೆ. ಕೆಲ ಸುಳ್ಳು ವದಂತಿಗೆ ಕಿವಿಗೊಡುವ ಹಳ್ಳಿ ಮಂದಿ ಇನ್ನಷ್ಟು ಕಂಗಾಲಾಗಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಯವರು ಹೊರ ರಾಜ್ಯದಿಂದ ಬಂದ ಕಾರ್ಮಿಕರನ್ನ ತಾವು ಕಟ್ಟುನಿಟ್ಟಾಗಿ ಕ್ವಾರಂಟೈನ್ ಮಾಡಲು ಸೂಚಿಸಲಾಗಿದ್ದು, ಕ್ರಮಬದ್ಧವಾಗಿ ಎಲ್ಲ ನಡೆಯುತ್ತಿದೆ ಅಂತಿದ್ದಾರೆ.
ಇದನ್ನೂ ಓದಿ :
McGann Hospital: ಹತ್ತು ವರ್ಷದಿಂದ ನಿರುಪಯುಕ್ತವಾಗಿದ್ದ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಗುತ್ತಿದೆ ಕಾಯಕಲ್ಪ
ಒಟ್ಟಾರೆ ದಿನದಿಂದ ದಿನಕ್ಕೆ ಭಯದಲ್ಲೆ ಜೀವನ ಕಳೆಯುವ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಈಗ ಭಟ್ಕಳದಲ್ಲಿ ಕಂಡು ಬರುತ್ತಿರುವ ಸೋಂಕಿತರ ಸಂಖ್ಯೆ ಇನ್ನಷ್ಟು ಕಂಗಾಲಾಗಿಸಿದೆ. ಜತೆಗೆ ಜಿಲ್ಲಾಡಳಿತ ಕೈ ಗೊಂಡ ಕ್ರಮ ಎಷ್ಟು ಕ್ರಮ ಬದ್ಧವಾಗಿದೆಯೋ ಎನ್ನುವುದು ಮುಂದಿನ ಕಾಲವೇ ಉತ್ತರ ಹೇಳಬೇಕು.
First published:
May 12, 2020, 7:55 AM IST