HOME » NEWS » Coronavirus-latest-news » UTTARA KANNADA ANKOLA MANGO SELLERS IN TROUBLE AFTER MANGO PRICE DOWN DUE TO COVID 19 LOCKDOWN DKK SCT

ಕೊರೋನಾಗೆ ಹೆದರಿದ ಅಂಕೋಲದ ಮಾವು ವ್ಯಾಪಾರಸ್ಥರು; ಕರಿ ಇಶಾಡು ಮಾವಿನ ಮಾರಾಟ ಕುಸಿತ

Ankola Mango: ಕರಿ ಇಶಾಡು ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ದಿ ಪಡೆದ ಮಾವಿನ ಹಣ್ಣು. ಕೇವಲ ರಾಜ್ಯ ಅಷ್ಟೆ ಅಲ್ಲದೆ, ಹೊರ ರಾಜ್ಯದಲ್ಲೂ ಹೊರ ದೇಶಕ್ಕೂ ಕೂಡ ಕರಿ ಇಶಾಡು ತಳಿಯ ಮಾವಿನ ಹಣ್ಣು ರಫ್ತಾಗುತ್ತದೆ.

news18-kannada
Updated:May 5, 2021, 8:31 AM IST
ಕೊರೋನಾಗೆ ಹೆದರಿದ ಅಂಕೋಲದ ಮಾವು ವ್ಯಾಪಾರಸ್ಥರು; ಕರಿ ಇಶಾಡು ಮಾವಿನ ಮಾರಾಟ ಕುಸಿತ
ಹಣ್ಣಿನ ಮಾರಾಟಗಾರರು
  • Share this:
ಕಾರವಾರ (ಮೇ 5): ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಪ್ರಸಿದ್ಧ ಕರಿ ಈಶಾಡು ಮಾವಿನ ಹಣ್ಣಿನ ವ್ಯಾಪಾರಕ್ಕೆ ಈ ವರ್ಷವೂ ಕೊರೋನಾ ಕಾಡಿದ್ದು ಎರಡನೇ ಅಲೆಗೆ ಸಿಕ್ಕಿದ್ದ ಮಾವು ಬೆಳೆಗಾರರು ಮತ್ತು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಕರಿ ಇಶಾಡು ಮಾವಿನ ಹಣ್ಣಿಗೆ ಜಿಐ ಮಾನ್ಯತೆ ನೀಡಬೇಕೆಂದು ಸರ್ಕಾರ ಶಿಫಾರಸು ಮಾಡಿದೆ. ಕರಿ ಇಶಾಡು ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ದಿ ಪಡೆದ ಮಾವಿನ ಹಣ್ಣು. ಕೇವಲ ರಾಜ್ಯ ಅಷ್ಟೆ ಅಲ್ಲದೆ, ಹೊರ ರಾಜ್ಯದಲ್ಲೂ ಹೊರ ದೇಶಕ್ಕೂ ಕೂಡ ಕರಿ ಇಶಾಡು ತಳಿಯ ಮಾವಿನ ಹಣ್ಣು ರಫ್ತಾಗುತ್ತದೆ. ಆದರೆ, ಕಳೆದ ವರ್ಷ ಲಾಕ್ ಡೌನ್ ಮತ್ತು ಈ ವರ್ಷದ ಜನತಾ ಕರ್ಪ್ಯೂ ಗೆ ವ್ಯಾಪಾರ ನೆಲಕಚ್ಚಿದೆ.

ಸರಕಾರ ಈಗ ನಿಗದಿ ಮಾಡಿದ ಅವಧಿಯಲ್ಲಿ ಮಾವಿನ ಹಣ್ಣು ವ್ಯಾಪಾರ ಮಾಡಲಿಕ್ಕೆ ಆಗದೆ ವ್ಯಾಪಾರಸ್ಥರು ಕಕ್ಕಾಬಿಕ್ಕಿ ಆಗಿದ್ದಾರೆ. ಹೊರ ಜಿಲ್ಲೆಗೆ ತೆಗೆದುಕೊಂಡು ಹೋಗಿ ವ್ಯಾಪಾರ ಮಾಡಲು ಅವಕಾಶ ಸಿಗದ ಹಿನ್ನಲೆಯಲ್ಲಿ ಈ ಬಾರಿ ಕರಿ ಇಶಾಡು ಮಾವಿನ ಹಣ್ಣಿಗೆ ಬೆಲೆ ಇದ್ದರೂ ಕೂಡ ವ್ಯಾಪಾರಕ್ಕೆ ಸರಿಯಾದ ಮಾರುಕಟ್ಟೆ ಸಿಗದೆ ಬೆಳೆಗಾರರು ಮತ್ತು ವ್ಯಾಪಾರಸ್ಥರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಕಾರವಾರ ಸೇರಿ ಜಿಲ್ಲೆಯಲ್ಲಿ ಎಲ್ಲ ತಾಲೂಕಿನಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದ್ದು ಕಂಗಾಲಾಗಿದ್ದಾರೆ. ಕೊರೋನಾ ಮಹಾಮಾರಿ ದುಡಿದು ತಿನ್ನುವವರ ಹೊಟ್ಟೆ ಮೇಲೆ ನರ್ತನ ಮಾಡುತ್ತಿದೆ.

ಕಳೆದ ವರ್ಷ ಕರಿ ಇಶಾಡು ಮಾವಿನ ಹಣ್ಣು ವ್ಯಾಪಾರದ ಆರಂಭದಲ್ಲಿ ರೈತರಿಗೆ ಸಮಸ್ಯೆ ತಂದೊಡ್ಡಿತ್ತು. ಈ ವರ್ಷ ಹೊಸ ಆಸೆ ಹೊಸ ಭರವಸೆಯೊಂದಿಗೆ ವ್ಯಾಪಾರಕ್ಕೆ ಇಳಿದ ಬೆಳೆಗಾರರು ಮತ್ತು ವ್ಯಾಪಾರಸ್ಥರ ಪಾಲಿಗೆ ಕೊರೋನಾ ಮಹಾಮಾರಿ ಅಕ್ಷರಶಃ ಯಮನಂತೆ ಕಾಡಿದೆ. ಕರಿ ಇಶಾಡು ಮಾವಿನ ಹಣ್ಣಿಗೆ ಕೇವಲ ರಾಜ್ಯದಲ್ಲಿ ಆಗಲಿ ಜಿಲ್ಲೆಯಲ್ಲಿ ಆಗಲಿ ಬೇಡಿಕೆ ಇಲ್ಲ. ಹೊರ ದೇಶದಲ್ಲೂ ಕೂಡ ಬೇಡಿಕೆ ಇದೆ. ಈ ಹಿನ್ನಲೆಯಲ್ಲಿ ಏಪ್ರಿಲ್- ಮೇ ತಿಂಗಳಲ್ಲಿ ಮಾವಿನ ಹಣ್ಣಿಗೆ ಭಾರೀ ಬೇಡಿಕೆಯಿದೆ. ಆದರೆ, ಇದೇ ತಿಂಗಳಲ್ಲಿಯೇ ಕೊರೋನಾ ಮಹಾಮಾರಿ ಒಕ್ಕರಿಸಿ ಅಲ್ಲೊಲ ಕಲ್ಲೋಲ ಮಾಡಿದೆ. ಲಕ್ಷಾಂತರ ರೂ ಬಂಡವಾಳ ಹಾಕಿ ಬೆಳೆದ ಮಾವು ಕೊರೋನಾ ಪಾಲಾಗಿದೆ.

ಕೊರೋನಾ ಮಹಾಮಾರಿ ಹಿನ್ನಲೆಯಲ್ಲಿ ಕೇವಲ ಕರಿ‌ ಇಶಾಡು ಮಾವಿನ ಹಣ್ಣಿನ ವ್ಯಾಪಾರಕ್ಕೆ ಮಾತ್ರ ಅಡ್ಡಿ ಉಂಟಾಗುತ್ತಿಲ್ಲ. ಇದರ ಬೆನ್ನಲ್ಲೆ ಎಲ್ಲ ತಳಿಯ ಮಾವಿನ ಹಣ್ಣಿನ ವ್ಯಾಪಾರಕ್ಕೂ ಕೊರೋನಾ ಅಡ್ಡಿ ಉಂಟಾಗಿದೆ. ಕರ್ಪ್ಯೂ ಹಿನ್ನಲೆಯಲ್ಲಿ ಸರಕಾರ ವ್ಯಾಪಾರಕ್ಕೆ ನೀಡಿದ ಅವಧಿ ಸಾಕಾಗುತ್ತಿಲ್ಲ ಈ ಹಿನ್ನಲೆಯಲ್ಲಿ ತಂದ ಹಣ್ಣು ಹಾಳಾಗುತ್ತಿವೆ. ಹೀಗೆ ವ್ಯಾಪಾರಸ್ಥರು  ಬೆಳೆಗಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗೆ ಮುಂದುವರಿದರೆ ಬದುಕು ಬೀದಿಗೆ ಬರುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಸರಕಾರ ನೆರವಿಗೆ ಬರಬೇಕು ಅಂತಿದ್ದಾರೆ.
Published by: Sushma Chakre
First published: May 5, 2021, 8:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories