HOME » NEWS » Coronavirus-latest-news » UTTAR PRADESH SISTER BROTHER CONVERTS CAR INTO ISOLATION WARD FOR COVID 19 POSITIVE MOTHER STG SCT

ಕೋವಿಡ್ ಸೋಂಕಿತ ಅಮ್ಮನಿಗಾಗಿ ಕಾರನ್ನೇ ಐಸೋಲೇಷನ್ ವಾರ್ಡ್​ ಆಗಿ ಮಾಡಿದ ಅಣ್ಣ-ತಂಗಿ!

ಉತ್ತರ ಪ್ರದೇಶದ ಲಖೀಂಪುರಿ ಖೇರಿಯ ನಿವಾಸಿಗಳಾದ ಪಾಯಲ್ ಸಿಂಗ್ ಮತ್ತು ಆಕಾಶ್ ಸಿಂಗ್ ತಮ್ಮ ತಾಯಿಯನ್ನು ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಆಸ್ಪತ್ರೆಯ ಪಾರ್ಕಿಂಗ್‌ನಲ್ಲೇ ತಮ್ಮ ಕಾರನ್ನು ಐಸೋಲೇಷನ್ ಕೇಂದ್ರವಾಗಿ ಬದಲಾಯಿಸಿದ್ದಾರೆ.

news18-kannada
Updated:May 5, 2021, 9:34 AM IST
ಕೋವಿಡ್ ಸೋಂಕಿತ ಅಮ್ಮನಿಗಾಗಿ ಕಾರನ್ನೇ ಐಸೋಲೇಷನ್ ವಾರ್ಡ್​ ಆಗಿ ಮಾಡಿದ ಅಣ್ಣ-ತಂಗಿ!
ಐಸೋಲೇಷನ್ ವಾರ್ಡ್ ಆಗಿ ಪರಿವರ್ತೆನಯಾದ ಕಾರು
  • Share this:
ಕೊರೊನಾ ಎರಡನೇ ಅಲೆ ಭಾರತದಲ್ಲಿ ನಿಜಕ್ಕೂ ಭೀಕರ ಪರಿಸ್ಥಿತಿಯನ್ನೇ ತಂದೊಡ್ಡಿದೆ. ಒಬ್ಬೊಬ್ಬರ ಕಥೆಯೂ ಮನಸ್ಸನ್ನು ಆರ್ದ್ರ ಗೊಳಿಸುತ್ತದೆ. ಉತ್ತರ ಪ್ರದೇಶದಲ್ಲಿ ಅಣ್ಣ-ತಂಗಿಯರಿಬ್ಬರು ತಮ್ಮ ತಾಯಿಯನ್ನು ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಆಸ್ಪತ್ರೆಯ ಪಾರ್ಕಿಂಗ್‌ನಲ್ಲೇ ತಮ್ಮ ಕಾರನ್ನು ಐಸೋಲೇಷನ್ ಕೇಂದ್ರವಾಗಿ ಬದಲಾಯಿಸಿದ್ದಾರೆ. ಅಷ್ಟೇ ಅಲ್ಲದೇ 10 ದಿನಗಳ ಕಾಲ ಅಲ್ಲಿಯೇ ಸಂಕಷ್ಟದ ಸಮಯವನ್ನು ಎದುರಿಸಿದ್ದಾರೆ.

ಉತ್ತರ ಪ್ರದೇಶದ ಲಖೀಂಪುರಿ ಖೇರಿಯ ನಿವಾಸಿಗಳಾದ ಪಾಯಲ್ ಸಿಂಗ್ (25) ಮತ್ತು ಅವರ ಸಹೋದರ ಆಕಾಶ್ ಸಿಂಗ್ (23) ಈ ಐಸೋಲೇಷನ್‌ನ ರೂವಾರಿಗಳಾಗಿದ್ದಾರೆ. ತಾಯಿ ಪರೂಲ್ ಸಿಂಗ್ (45) ಅವರಿಗೆ ಡಯಾಲಿಸಿಸ್ ಮಾಡಿಸಬೇಕಿದ್ದ ಕಾರಣ ಅವರ ಮಕ್ಕಳಾದ ಆಕಾಶ್ ಮತ್ತು ಪಾಯಲ್ ತಮ್ಮ ತಾಯಿಯನ್ನು ಕಾರಿನಲ್ಲಿ ಏಪ್ರಿಲ್ 20 ರಂದು ಲಕ್ನೋವಿನ ಆಸ್ಪತ್ರೆಗೆ ಕರೆ ತಂದಿದ್ದಾರೆ. ಡಯಾಲಿಸಿಸ್ ಮುಗಿಸಿಕೊಂಡು ಅಂದೇ ತಮ್ಮ ಊರಿಗೆ ತೆರಳುವ ನಿರ್ಧಾರ ಮಾಡಿದ್ದ ಕುಟುಂಬಕ್ಕೆ ಕಷ್ಟ ಆರಂಭವಾಗಿದೆ. ಡಯಾಲಿಸಿಸ್‌ಗೂ ಮುನ್ನ ಪರೂಲ್ ಅವರಿಗೆ ವೈದ್ಯರು ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಲು ಹೇಳಿದ್ದಾರೆ.

ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿದ ಅದೇ ದಿನ ರಾತ್ರಿ ಆಸ್ಪತ್ರೆಯ ಪಾರ್ಕಿಂಗ್‌ನಲ್ಲಿ ಕಾರಿನೊಳಗೆ ಮೂವರು ತಂಗಿದ್ದಾರೆ. ರಾತ್ರಿ ಹೇಗೋ ಸ್ಥಳೀಯ ಹೊಟೆಲ್‌ನಿಂದ ಆಹಾರ ತಂದು ರಾತ್ರಿ ಕಳೆದಿದ್ದಾರೆ. ಮಾರನೇ ದಿನ ಪರೂಲ್ ಅವರಿಗೆ ಕೋವಿಡ್ 19 ದೃಢಪಟ್ಟಿದೆ. ಈ ಸಮಯದಲ್ಲಿ ವೈದ್ಯರು ಡಯಾಲಿಸಿಸ್ ನಿರಾಕರಿಸಿದ್ದಾರೆ. ಆದ್ದರಿಂದ ಕುಟುಂಬವು ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಲು ಪ್ರಯತ್ನಿಸಿ ಕಡೆಗೆ ಯಶಸ್ವಿಯಾದರು. ಆದರೆ ಈಗ ಪರೂಲ್ ಅವರ ಆಕ್ಸಿಜನ್ ಮಟ್ಟ ಕಡಿಮೆಯಾಗತೊಡಗಿತು, ಈ ಕಾರಣದಿಂದ ಆಸ್ಪತ್ರೆ ಚಿಕಿತ್ಸೆಗೆ ನಿರಾಕರಿಸಿತು.

ಇದನ್ನೂ ಓದಿ: Cabinet Meeting: ಇಂದು ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ; ಲಾಕ್​ಡೌನ್ ಬಗ್ಗೆ ತೀರ್ಮಾನ ಸಾಧ್ಯತೆ

ಈ ಸಂದರ್ಭದಲ್ಲಿ ಅಕ್ಕ ಮತ್ತು ತಮ್ಮ ಎಲ್ಲಾ ಕಡೆ ಪ್ರಯತ್ನಪಟ್ಟರೂ ಆಕ್ಸಿಜನ್ ಬೆಡ್ ಲಭ್ಯವಾಗಿಲ್ಲ. ಆದರೂ ಕಡೆಗೆ 5 ಸಣ್ಣ ಆಮ್ಲಜನಕ ಕ್ಯಾನ್‌ಗಳನ್ನು ಹುಡುಕಿ ತಂದರು. ಹೇಗೋ ಪರೂಲ್ ಸುಧಾರಿಸಿಕೊಂಡರು. ಅವರ ಆಮ್ಲಜನಕದ ಮಟ್ಟವು ಸುಧಾರಿಸಿದಾಗ ಪರೂಲ್ ಅವರಿಗೆ ಡಯಾಲಿಸಿಸ್ ಮಾಡಲಾಯಿತು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಏಪ್ರಿಲ್ 22 ರವರೆಗೂ ಕಾರಿನಲ್ಲೇ ಊಟ, ತಿಂಡಿ , ನಿದ್ರೆ ಮಾಡಿದ್ದಾರೆ.

ಬಳಿಕ ಏಪ್ರಿಲ್ 23 ರಂದು ತಾಯಿಯವರನ್ನು ಪ್ರೋನ್ ಭಂಗಿಯಲ್ಲಿರಿಸಿ ಮತ್ತೊಮ್ಮೆ ಆಕ್ಸಿಜನ್ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿದ್ದಾರೆ. ಅಂದು ಅವರ ತಂದೆ ಇನ್ನೊಂದು ಬಾಡಿಗೆ ಕಾರಿನಲ್ಲಿ ಆಕ್ಸಿಜನ್ ಸಿಲಿಂಡರ್ ತಂದುಕೊಟ್ಟಿದ್ದಾರೆ. ಇನ್ನು ತಂದೆಯವರನ್ನು ಸೋಂಕಿನಿಂದ ರಕ್ಷಿಸಿಕೊಳ್ಳಲು ಮಕ್ಕಳು ಅವರನ್ನು ಮನೆಗೆ ಕಳುಹಿಸಿದ್ದಾರೆ. ಇದರ ನಡುವೆ ಹೇಗೋ ಪ್ರಯತ್ನ ಮಾಡಿದ ಈ ಅಕ್ಕ , ತಮ್ಮ ರಾಮ್ ಮನೋಹರ್ ಲೋಯಿಯಾ ಆಸ್ಪತ್ರೆಯಲ್ಲಿ ಬೆಡ್ ಪಡೆದು ತಾಯಿಯವರಿಗೆ ಚಿಕಿತ್ಸೆ ನೀಡುವಂತೆ ಮಾಡಿದ್ದು, ಅವರು ಏಪ್ರಿಲ್ 30 ರಂದು ಡಿಸ್ಟಾರ್ಜ್ ಆಗಿದ್ದಾರೆ.

ಇನ್ನು ಪಾಯಲ್ ಸಹೋದರ ಆಕಾಶ್‌ಗೂ ಕೋವಿಡ್‌ನ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಅವರು ಕೂಡ ಕಾರಿನಲ್ಲೇ ಐಸೋಲೇಟ್ ಆಗಿದ್ದರು. ಪಾಯಲ್ ಒಬ್ಬರೇ ಎಲ್ಲವನ್ನು ನಿಭಾಯಿಸಿದ್ದರು. ಈ ಸಂದರ್ಭದಲ್ಲಿ ಫೇಸ್ ಶೀಲ್ಡ್, ಫೇಸ್ ಮಾಸ್ಕ್ ಧರಿಸಿ ಪರಿಸ್ಥಿತಿ ನಿರ್ವಹಣೆ ಮಾಡಿದ್ದರು. ಜೊತೆಗೆ ತಮ್ಮ ಬಳಿ ಇದ್ದ 12,000 ರೂಪಾಯಿ ಮತ್ತು ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ಬಳಿಕ ಅವರ ತಂದೆ ಕೂಟ್ಟ ಹಣ ಈ ಸಂದರ್ಭದಲ್ಲಿ ಅವರಿಗೆ ನೆರವಾಗಿದೆ.

ಈ ಸಂದರ್ಭದಲ್ಲಿ ಅವರು ಸಾರ್ವಜನಿಕ ಶೌಚಾಲಯಗಳನ್ನು ಬಳಸುತ್ತಿದ್ದು, ಅದನ್ನು ಸೋಂಕು ನಿವಾರಕ ಸ್ಪ್ರೇ ಮೂಲಕ ಸ್ವಚ್ಚಗೊಳಿಸುತ್ತಿದ್ದರು ಎಂದು ಹೇಳಿದ್ದಾರೆ.
Published by: Sushma Chakre
First published: May 5, 2021, 9:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories