ಕೊರೋನಾ ಶಂಕೆ; ಬಸ್​ನಿಂದ ತಳ್ಳಿದ್ದಕ್ಕೆ ಹೃದಯಾಘಾತದಿಂದ ಯುವತಿ ಸಾವು!

19 ವರ್ಷದ ಅನ್ಶಿಕಾ ಬಸ್​ನಲ್ಲಿ ನೊಯ್ಡಾದಿಂದ ಶಿಕೋಹಾಬಾದ್​ಗೆ ತೆರಳುತ್ತಿದ್ದಾಗ ಬಿಸಿಲಿನಿಂದ ಬಸ್​ನಲ್ಲೇ ತಲೆಸುತ್ತಿ ಬಿದ್ದಿದ್ದಳು. ಇದರಿಂದ ಆಕೆ ಕೊರೋನಾ ಸೋಂಕಿನಿಂದಲೇ ತಲೆಸುತ್ತಿ ಬಿದ್ದಿದ್ದಾಳೆ ಎಂದುಕೊಂಡ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಆಕೆಯನ್ನು ಬಸ್​ನಿಂದ ಹೊರಹಾಕಿದ್ದರು.

Sushma Chakre | news18-kannada
Updated:July 4, 2020, 11:34 AM IST
ಕೊರೋನಾ ಶಂಕೆ; ಬಸ್​ನಿಂದ ತಳ್ಳಿದ್ದಕ್ಕೆ ಹೃದಯಾಘಾತದಿಂದ ಯುವತಿ ಸಾವು!
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ (ಜು. 4): ಕೊರೋನಾ ಭೀತಿ ಯಾರೊಬ್ಬರನ್ನೂ ಬಿಟ್ಟಿಲ್ಲ. ಆದರೆ, ಈ ಭೀತಿಯಿಂದಾಗಿ ಮಾನವೀಯತೆಯನ್ನೇ ಮರೆತು ವರ್ತಿಸಿರುವ ಎಷ್ಟೋ ಘಟನೆಗಳು ನಮ್ಮ ನಡುವೆ ನಡೆಯುತ್ತಲೇ ಇವೆ. ಅದೇ ರೀತಿಯ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ನೊಯ್ಡಾದಿಂದ ಶಿಕೋಹಾಬಾದ್​ಗೆ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಕೊರೋನಾ ಇದೆ ಎಂಬ ಸಂದೇಹದಲ್ಲಿ ಬಸ್​ನಿಂದ ಕೆಳಗೆ ತಳ್ಳಲಾಗಿದೆ. ಈ ವೇಳೆ ಆಘಾತಕ್ಕೊಳಗಾದ ಆ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ!

ಈ ಘಟನೆ ನಡೆದಿರುವುದು ಜೂನ್ 15ರಂದು. ಹೃದಯಾಘಾತದಿಂದ ಯುವತಿ ಸಾವನ್ನಪ್ಪಿರುವುದಾಗಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ಆದರೆ, ಆ ಯುವತಿಯ ಪೋಷಕರು ಬಸ್​ನ ಚಾಲಕ ಮತ್ತು ಕಂಡಕ್ಟರ್ ಮೇಲೆ ಆರೋಪ ಮಾಡಿದ್ದು, ನಮ್ಮ ಮಗಳಿಗೆ ಕೊರೋನಾ ಇದೆ ಎಂದು ಬಸ್​ನಿಂದ ತಹೊರಹಾಕಿದ್ದರಿಂದಲೇ ಆಕೆಗೆ ಹೃದಯಾಘಾತವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Mumbai Rain: ಮಹಾರಾಷ್ಟ್ರದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಮುಂಬೈ ಸುತ್ತಮುತ್ತ ರೆಡ್ ಅಲರ್ಟ್​ ಘೋಷಣೆ

19 ವರ್ಷದ ಅನ್ಶಿಕಾ ಎಂಬ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿದಾಕೆ. ಬಸ್​ನಲ್ಲಿ ನೊಯ್ಡಾದಿಂದ ಶಿಕೋಹಾಬಾದ್​ಗೆ ತೆರಳುತ್ತಿದ್ದ ಆಕೆ ಬಿಸಿಲಿನಿಂದ ಬಸ್​ನಲ್ಲೇ ತಲೆಸುತ್ತಿ ಬಿದ್ದಿದ್ದಳು. ಇದರಿಂದ ಆಕೆ ಕೊರೋನಾ ಸೋಂಕಿನಿಂದಲೇ ತಲೆಸುತ್ತಿ ಬಿದ್ದಿದ್ದಾಳೆ ಎಂದುಕೊಂಡ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಆಕೆಯನ್ನು ಬಸ್​ನಿಂದ ಹೊರಗೆ ಹಾಕಿದ್ದರು. ಬಸ್​ನಿಂದ ಕೆಳಗೆ ಬಿದ್ದ ಆಕೆಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾಳೆ. ಆದರೆ, ಮಥುರಾ ಪೊಲೀಸರು ಈ ಬಗ್ಗೆ ಯಾವುದೇ ಸಾಕ್ಷಿಗಳಿಲ್ಲ ಎಂದಿದ್ದಾರೆ.

ಪೋಸ್ಟ್​ ಮಾರ್ಟಂ ವರದಿ ಪ್ರಕಾರ, ಅನ್ಶಿಕಾ ನೈಸರ್ಗಿಕವಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಅನ್ಶಿಕಾಳ ಅಪ್ಪ ಸುಶೀಲ್ ಕುಮಾರ್ ದೆಹಲಿಯಲ್ಲಿ ಸೆಕ್ಯುರಿಟಿ ಗಾರ್ಟ್​ ಆಗಿ ಕೆಲಸ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಕೊರೋನಾ ಕೇಸ್ ಜಾಸ್ತಿಯಾಗಿರುವುದರಿಂದ ಅವರು ತಮ್ಮ ಹೆಂಡತಿ ಮತ್ತು ಮಗಳನ್ನು ನೊಯ್ಡಾದಿಂದ ಊರಿಗೆ ಕಳುಹಿಸಲು ಬಸ್ ಹತ್ತಿಸಿದ್ದರು. ಆ ಬಸ್​ನಲ್ಲಿ ಅನ್ಶಿಕಾ ಕುಸಿದುಬಿದ್ದಿದ್ದಳು. ಇದರಿಂದ ಗಾಬರಿಗೊಂಡ ಕಂಡಕ್ಟರ್ ಮತ್ತು ಡ್ರೈವರ್ ಅವರನ್ನು ಮಧ್ಯ ದಾರಿಯಲ್ಲೇ ಬಸ್​ನಿಂದ ಹೊರಹಾಕಿದ್ದರು. ಬಸ್​ನಿಂದ ಕೆಳಗಿಳಿದ ಸ್ವಲ್ಪ ಹೊತ್ತಿನಲ್ಲೇ ಅನ್ಶಿಕಾ ಸಾವನ್ನಪ್ಪಿದ್ದಾಳೆ. ಬಸ್​ನಲ್ಲಿದ್ದವರೆಲ್ಲರೂ ನನ್ನ ಮಗಳಿಗೆ ಕೊರೋನಾ ಇದೆ ಎಂಬ ರೀತಿಯಲ್ಲೇ ವರ್ತಿಸಿದರು ಎಂದು ಅನ್ಶಿಕಾಳ ತಾಯಿ ಆರೋಪಿಸಿದ್ದಾರೆ.
Published by: Sushma Chakre
First published: July 4, 2020, 11:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading