HOME » NEWS » Coronavirus-latest-news » UTTAR PRADESH CM YOGI ADITYANATH AND AKHILESH YADAV TESTS POSITIVE FOR COVID SESR

Covid 19: ಉತ್ತರ ಪ್ರದೇಶ ಮಾಜಿ, ಹಾಲಿ ಸಿಎಂಗಳಿಗೆ ಕೊರೋನಾ ಸೋಂಕು ದೃಢ

ದೆಹಲಿ ಸಾರಿಗೆ ಸಚಿವರಾಗಿರುವ ಕೈಲಾಶ್​ ಗೆಹ್ಲೋಟ್​ ಕೂಡ ಸೋಂಕಿಗೆ ತುತ್ತಾಗಿದ್ದು, ತಮ್ಮ ಸಂಪರ್ಕಕ್ಕೆ ಒಳಗಾದವರು ಅಗತ್ಯ ಕ್ರಮ ವಹಿಸುವಂತೆ ತಿಳಿಸಿದ್ದಾರೆ

news18-kannada
Updated:April 14, 2021, 3:19 PM IST
Covid 19: ಉತ್ತರ ಪ್ರದೇಶ ಮಾಜಿ, ಹಾಲಿ ಸಿಎಂಗಳಿಗೆ ಕೊರೋನಾ ಸೋಂಕು ದೃಢ
ಯೋಗಿ ಆದಿತ್ಯನಾಥ್​ ಮತ್ತು ಅಖಿಲೇಶ್​ ಯಾದವ್​​
  • Share this:
ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್​ ಪ್ರಕರಣಗಳು ಹೆಚ್ಚಾಗುತ್ತಿದೆ. ಕೊರೋನಾ ಎರಡನೇ ಅಲೆ ತೀವ್ರವಾಗಿದ್ದು, ಸೋಂಕಿನ ಹರಡುವಿಕೆ ಕೂಡ ಶೀಘ್ರವಾಗಿದೆ. ಲಸಿಕೆ ಲಭ್ಯತೆ ನಡುವೆ ಕೂಡ ಸೋಂಕು ಹೆಚ್ಚುತ್ತಿರುವುದು ಕಳವಳ ಮೂಡಿಸಿದೆ. ಈ ನಡುವೆ ಅನೇಕ ರಾಜಕೀಯ ನಾಯಕರು ಸೇರಿದಂತೆ ಗಣ್ಯರು ಕೂಡ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇಂದು ಕೂಡ ಹಲವು ರಾಜಕೀಯ ನಾಯಕರು ಸೋಂಕಿಗೆ ತುತ್ತಾಗಿದ್ದು, ಈ ಕುರಿತು ಎಚ್ಚರವಹಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಹಿನ್ನಲೆ ಅವರು ಸೆಲ್ಫ್​ ಐಸೋಲೇಷನ್​ಗೆ ಒಳಗಾಗಿದ್ದಾರೆ. ಈ ಕುರಿತು ಸಿಎಂ ಯೋಗಿ ಆದಿತ್ಯನಾಥ್​​ ಟ್ವಿಟರ್​ನಲ್ಲಿ ದೃಢಪಡಿಸಿದ್ದಾರೆ. ವೈದ್ಯರ ಸಲಹೆಯಂತೆ ಸ್ವಯಃ ಪ್ರತ್ಯೇಕತೆಗೆ ಮುಂದಾಗಿದ್ದು, ತಮ್ಮ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಸೋಂಕಿನ ಹಿನ್ನಲೆ ಮುಖ್ಯಮಂತ್ರಿಗಳು ಅಧಿಕಾರಿಗಳೊಂದಿಗೆ ವರ್ಚುಯಲ್​ ಮೂಲಕ ಸಭೆಗಳನ್ನು ನಡೆಸುವುದಾಗಿ ತಿಳಿಸಿದ್ದಾರೆ.



ಯೋಗಿ ಆದಿತ್ಯನಾಥ್​ಗೆ ಕೊರೋನಾ ದೃಢಪಟ್ಟ ಹಿನ್ನಲೆ ಅವರ ಸಂಪರ್ಕದಲ್ಲಿದ್ದ ಕೆಲ ಅಧಿಕಾರಿಗಳು ಕೂಡ ಸೋಂಕಿನ ಪರೀಕ್ಷೆಗೆ ಒಳಗಾಗಿದ್ದಾರೆ. ಈ ವೇಳೆ ಅವರ ಒಎಸ್​ಡಿ ಅಭಿಷೇಕ್​ ಕೌಶಿಕ್​ಗೆ ಸೋಂಕು ದೃಢಪಟ್ಟಿದೆ.


ಉತ್ತರ ಪ್ರದೇಶದ ಮಾಜಿ ಸಿಎಂ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ಗೆ ಕೂಡ ಕೊರೋನಾ ಸೋಂಕು ದೃಢಪಟ್ಟಿದೆ. ಈ ಕುರಿತು ಟ್ವೀಟ್​ ಮಾಡಿರುವ ಯಾದವ್​, ಸೋಂಕು ದೃಡ ಪಟ್ಟ ಹಿನ್ನಲೆ ಹೋಮ್​ ಕ್ವಾರಂಟೈನ್​ಗೆ ಒಳಗಾಗುತ್ತಿದ್ದು, ತಮ್ಮ ಸಂಪರ್ಕಕ್ಕೆ ಒಳಗಾದವರು ಪರೀಕ್ಷೆಗೆ ಒಳಗಾಗುವ ಮೂಲಕ ಎಚ್ಚರವಹಿಸುವಂತೆ ಮನವಿ ಮಾಡಿದ್ದಾರೆ.

ದೆಹಲಿ ಸಾರಿಗೆ ಸಚಿವರಾಗಿರುವ ಕೈಲಾಶ್​ ಗೆಹ್ಲೋಟ್​ ಕೂಡ ಸೋಂಕಿಗೆ ತುತ್ತಾಗಿದ್ದು, ತಮ್ಮ ಸಂಪರ್ಕಕ್ಕೆ ಒಳಗಾದವರು ಅಗತ್ಯ ಕ್ರಮ ವಹಿಸುವಂತೆ ತಿಳಿಸಿದ್ದಾರೆ
Published by: Seema R
First published: April 14, 2021, 3:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories