HOME » NEWS » Coronavirus-latest-news » UTTAR PRADESH 50 LABOURS QUARANTINE IN KUSHALANAGARA RH

ನೆರೆ ಸಂತ್ರಸ್ತರಿಗೆ ಮನೆ ಕಟ್ಟಲು ಬಂದು ಅತಂತ್ರರಾಗಿ ನಡೆದುಕೊಂಡೇ ಉತ್ತರ ಪ್ರದೇಶಕ್ಕೆ ಹೊರಟ ಕಾರ್ಮಿಕರು ಕ್ವಾರಂಟೈನ್

ಬೆಳಗ್ಗೆ ಆರು ಗಂಟೆಗೆ ಮಾದಾಪುರದಿಂದ ಹೊರಟ ಕಾರ್ಮಿಕರು ರಾಷ್ಟ್ರೀಯ ಹೆದ್ದಾರಿ ಮಂಗಳೂರು ಮೈಸೂರು ಹೆದ್ದಾರಿಯಲ್ಲಿ ನಡೆದುಕೊಂಡೇ ಹೊರಟಿದ್ದರು. ಬೆಳಿಗ್ಗೆಯಿಂದ 25 ಕಿಲೋ ಮೀಟರ್ ನಡೆದ ಕಾರ್ಮಿಕರು ಕುಶಾಲನಗರ ಹೋಬಳಿಯ ಏಳನೆ ಹೊಸಕೋಟೆ ತಲುಪಿದ್ದರು. ಈ ಸಂದರ್ಭ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾರೆ.

news18-kannada
Updated:May 11, 2020, 5:49 PM IST
ನೆರೆ ಸಂತ್ರಸ್ತರಿಗೆ ಮನೆ ಕಟ್ಟಲು ಬಂದು ಅತಂತ್ರರಾಗಿ ನಡೆದುಕೊಂಡೇ ಉತ್ತರ ಪ್ರದೇಶಕ್ಕೆ ಹೊರಟ ಕಾರ್ಮಿಕರು ಕ್ವಾರಂಟೈನ್
ಉತ್ತರಪ್ರದೇಶಕ್ಕೆ ನಡೆದುಕೊಂಡು ಹೊರಟ್ಟಿದ್ದ ಕಾರ್ಮಿಕರು.
  • Share this:
ಕೊಡಗು: ಮಹಾಮಾರಿ ಕೊರೋನಾ ಹರಡುವ ಆತಂಕದಿಂದ ದೇಶವೇ ಲಾಕ್​ಡೌನ್ ಆದ ಬಳಿಕ ಕಳೆದ ಎರಡು ತಿಂಗಳಿಂದ ಕೊಡಗಿನಲ್ಲೇ ಇದ್ದ ಉತ್ತರ ಪ್ರದೇಶದ 50ಕ್ಕೂ ಹೆಚ್ಚು ಕಾರ್ಮಿಕರು ಸ್ವಂತ ಊರಿಗೆ ನಡೆದುಕೊಂಡೇ ಹೊರಟ್ಟಿದ್ದರು. ಬಳಿಕ ಇವರನ್ನೆಲ್ಲಾ ಕ್ವಾರಂಟೈನ್​ ಮಾಡಲಾಗಿದೆ.

ಈ ಕಾರ್ಮಿಕರೆಲ್ಲರೂ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ಮನೆ ನಿರ್ಮಾಣ ಕಾಮಗಾರಿ ಮಾಡುತ್ತಿದ್ದರು. ಇಡೀ ದೇಶ ಲಾಕ್ ಡೌನ್ ಆಗಿದ್ದರಿಂದ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಹೀಗಾಗಿ ಇವರೆಲ್ಲರೂ ತಮ್ಮ ಊರುಗಳಿಗೆ ಹೋಗಲು ಸೇವಾ ಸಿಂಧು ಮೂಲಕ ಪಾಸ್ ಪಡೆದುಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಪಾಸ್ ಸಿಗದಿದ್ದರಿಂದ ಐವತ್ತಕ್ಕೂ ಹೆಚ್ಚು ಕಾರ್ಮಿಕರು ಉತ್ತರ ಪ್ರದೇಶಕ್ಕೆ ನಡೆದುಕೊಂಡೇ ಹೊರಟಿದ್ದರು.

ಬೆಳಗ್ಗೆ ಆರು ಗಂಟೆಗೆ ಮಾದಾಪುರದಿಂದ ಹೊರಟ ಕಾರ್ಮಿಕರು ರಾಷ್ಟ್ರೀಯ ಹೆದ್ದಾರಿ ಮಂಗಳೂರು ಮೈಸೂರು ಹೆದ್ದಾರಿಯಲ್ಲಿ ನಡೆದುಕೊಂಡೇ ಹೊರಟಿದ್ದರು. ಬೆಳಿಗ್ಗೆಯಿಂದ 25 ಕಿಲೋ ಮೀಟರ್ ನಡೆದ ಕಾರ್ಮಿಕರು ಕುಶಾಲನಗರ ಹೋಬಳಿಯ ಏಳನೆ ಹೊಸಕೋಟೆ ತಲುಪಿದ್ದರು. ಈ ಸಂದರ್ಭ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾರೆ.

ಇದನ್ನು ಓದಿ: ಭಾರತಕ್ಕೆ ಎರಡನೇ ಕೊರೋನಾ ತಳಿ ಕಾಲಿಟ್ಟಿದೆ ಹುಷಾರಾಗಿರಿ; ಡಾ. ಸೂರಜ್ ರೇವಣ್ಣ ಎಚ್ಚರಿಕೆ

ಬಳಿಕ ಅವರನ್ನು ಪ್ರಶ್ನೆ ಮಾಡಿದಾಗ ನಮಗೆ ದುಡಿಮೆ ಇಲ್ಲ. ಅದಕ್ಕಿಂತ ಮುಖ್ಯವಾಗಿ, ಆಹಾರದ ಕೊರತೆ ಕಾಡುತ್ತಿದೆ. ಹೀಗಾಗಿ ನಾವು ನಮ್ಮ ಊರಿಗೆ ನಡೆದುಕೊಂಡೇ ಹೋಗುತ್ತೇವೆ ಎಂದು ಬರೋಬ್ಬರಿ 3000 ಕಿಲೋಮೀಟರ್ ನಡೆದುಕೊಂಡೇ ಹೊರಟಿದ್ದರು. ಚೆಕ್​ಪೋಸ್ಟ್ ಗಳಲ್ಲಿ ನಿಮ್ಮನ್ನು ತಡೆಯುತ್ತಾರೆ ಎಂದು ಪ್ರಶ್ನೆ ಮಾಡಿದಾಗ ನಾವು ಚೆಕ್​ಪೋಸ್ಟ್ ಗೆ ಹೋಗುವುದಿಲ್ಲ. ಬದಲಾಗಿ ಬೇರೆ ದಾರಿಗಳಲ್ಲಿ ಸಾಗುತ್ತೇವೆ ಎಂದು ಹೊರಟ್ಟಿದ್ದರು. ಬಳಿಕ ಏಳನೇ ಹೊಸಕೋಟೆ ಪಂಚಾಯಿತಿ ಅಧಿಕಾರಿಗಳಿಗೆ ಇದು ಗಮನಕ್ಕೆ ಬರುತ್ತಿದ್ದಂತೆ ಪಂಚಾಯಿತಿ ಅಧಿಕಾರಿಗಳು ಅಷ್ಟು ಕಾರ್ಮಿಕರನ್ನು ತಡೆದು  ಹಾಸ್ಟೆಲ್​ ಒಂದರಲ್ಲಿ ಕ್ವಾರಂಟೈನ್ ಮಾಡಿದರು. ಅಲ್ಲದೇ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದರು.
First published: May 11, 2020, 5:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading