ಕೊರೋನಾ ಭೀತಿ ಮಧ್ಯೆ ಅಮೆರಿಕದಲ್ಲಿ ಒಂದೇ ವಾರದಲ್ಲಿ ನಿರುದ್ಯೋಗ 10 ಪಟ್ಟು ಹೆಚ್ಚಳ

ಎರಡು ವಾರದ ಹಿಂದೆ ಬಂದ ವರದಿ ಪ್ರಕಾರ 2.82 ಲಕ್ಷ ಜನರು ನಿರುದ್ಯೋಗ ಭತ್ಯೆ ಪಟ್ಟಿಯಲ್ಲಿದ್ದರು. ಕಳೆದ ವಾರ ಈ ಸಂಖ್ಯೆ 32.8 ಲಕ್ಷಕ್ಕೆ ಏರಿದೆ.

news18
Updated:March 26, 2020, 8:45 PM IST
ಕೊರೋನಾ ಭೀತಿ ಮಧ್ಯೆ ಅಮೆರಿಕದಲ್ಲಿ ಒಂದೇ ವಾರದಲ್ಲಿ ನಿರುದ್ಯೋಗ 10 ಪಟ್ಟು ಹೆಚ್ಚಳ
ಪ್ರಾತಿನಿಧಿಕ ಚಿತ್ರ
  • News18
  • Last Updated: March 26, 2020, 8:45 PM IST
  • Share this:
ವಾಷಿಂಗ್ಟನ್(ಮಾ. 26): ಕೊರೋನಾ ವೈರಸ್ ಸೋಂಕು ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ ಅಮೆರಿಕ ದೇಶ ಈಗ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಹಲವು ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕಾಸ್ಟ್ ಕಟಿಂಗ್ ಕ್ರಮವಾಗಿ ಅನೇಕ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೊಡುತ್ತಿವೆ. ನಿರುದ್ಯೋಗ ಸಂಖ್ಯೆ ವಿಪರೀತ ಹೆಚ್ಚಾಗುತ್ತಿದೆ. ಅಮೆರಿಕದಲ್ಲಿ ನಿದ್ಯೋಗಿಗಳಿಗೆ ನೀಡುವ ಭತ್ಯೆಯನ್ನು ಕೇಳುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಇದಕ್ಕೆ ಸಾಕ್ಷಿ. ಅಮೆರಿಕದ ಇತಿಹಾಸದಲ್ಲೇ ಕಂಡು ಕೇಳರಿಯದ ಮಟ್ಟಿಗೆ ನಿರುದ್ಯೋಗಿಗಳು ಹೆಚ್ಚಾಗಿರುವಂತಿದೆ.

ಎರಡು ವಾರದ ಹಿಂದೆ ಬಂದ ವರದಿ ಪ್ರಕಾರ 2.82 ಲಕ್ಷ ಜನರು ನಿರುದ್ಯೋಗ ಭತ್ಯೆ ಪಟ್ಟಿಯಲ್ಲಿದ್ದರು. ಕಳೆದ ವಾರ ಈ ಸಂಖ್ಯೆ 32.8 ಲಕ್ಷಕ್ಕೆ ಏರಿದೆ. ಅಂದರೆ ಒಂದೇ ವಾರದಲ್ಲಿ 10 ಪಟ್ಟು ಹೆಚ್ಚಾಗಿರುವುದು ಕಂಡುಬಂದಿದೆ. 1982ರಲ್ಲಿ ಅಮೆರಿಕದಲ್ಲಿ 6.95 ಲಕ್ಷ ಜನರು ನಿರುದ್ಯೋಗ ಭತ್ಯೆ ಪಡೆದುಕೊಂಡಿದ್ದು. ಅದೇ ಈವರೆಗಿನ ದಾಖಲೆಯಾಗಿ ಉಳಿದಿತ್ತು. ಈಗ ಆ ದಾಖಲೆ ಭಾರೀ ಅಂತರದಿಂದ ಮುರಿದುಬಿದ್ದಿದೆ.

ಇದನ್ನೂ ಓದಿ: ಸೆಕ್ಸ್ ಮಾಡೋಕೆ ಜನರಿಗೆ ಸಿಕ್ತು ಸಿಕ್ಕಾಪಟ್ಟೆ ಪುರುಸೊತ್ತು; ಲಾಕ್ ಡೌನ್ ವೇಳೆ ಕಾಂಡೋಮ್​ಗೆ ಹೆಚ್ಚಾಯ್ತು ಡಿಮ್ಯಾಂಡ್

ಈ ವಿಚಾರದಲ್ಲಿ ಹಲವರ ಲೆಕ್ಕಾಚಾರವನ್ನೂ ಮೀರಿ ಪರಿಸ್ಥಿತಿ ಬಿಗಡಾಯಿಸಿದೆ. ರಾಯ್ಟರ್ಸ್ ಸುದ್ದಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ವಿವಿಧ ಅರ್ಥಶಾಸ್ತ್ರಜ್ಞರು ಅಮೆರಿಕದಲ್ಲಿ ನಿರುದ್ಯೋಗ ಭತ್ಯೆ ಪಡೆಯುವವರ ಸಂಖ್ಯೆ 10 ಲಕ್ಷಕ್ಕೇರಬಹುದು ಎಂದು ಅಂದಾಜು ಮಾಡಿದ್ದರು. ಈಗ ಅದನ್ನೂ ಮೀರಿಸಿ ಪಟ್ಟಿ ದೊಡ್ಡದಾಗಿದೆ.

First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading