HOME » NEWS » Coronavirus-latest-news » US VICE PRESIDENT HARRIS DELIVERS REMARKS ON US COVID 19 RELIEF FOR INDIA KVD

ನನ್ನ ತವರು ದೇಶ ನರಳಬಾರದು: ಭಾರತದ ಸ್ಥಿತಿ ಕಂಡು ಮರುಗಿದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ನನ್ನ ಕುಟುಂಬದ ಹಿಂದಿನ ತಲೆಮಾರುಗಳು ಭಾರತದಿಂದ ಬಂದಿವೆ. ನನ್ನ ತಾಯಿ ಭಾರತದಲ್ಲಿ ಹುಟ್ಟಿ ಬೆಳೆದವರು. ಇಂದಿಗೂ ನನ್ನ ಕುಟುಂಬದ ಅನೇಕ ಸದಸ್ಯರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಭಾರತ ಕ್ಷೇಮವಾಗಿರುವುದು ಅಮೆರಿಕಕ್ಕೆ ಅತ್ಯಂತ ಮುಖ್ಯವಾದ ವಿಷಯ.

Kavya V | news18-kannada
Updated:May 10, 2021, 2:24 PM IST
ನನ್ನ ತವರು ದೇಶ ನರಳಬಾರದು: ಭಾರತದ ಸ್ಥಿತಿ ಕಂಡು ಮರುಗಿದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​​​
  • Share this:
ನ್ಯೂಯಾರ್ಕ್​​: ಕೊರೋನಾ 2ನೇ ಅಲೆಯಿಂದ ಭಾರತ ತತ್ತರಿಸುತ್ತಿದೆ. ದೇಶದಲ್ಲಿ ಸಂಭವಿಸುತ್ತಿರುವ ನಿತ್ಯ ಸೋಂಕಿನ ಸಂಖ್ಯೆ, ಸಾವಿನ ಪ್ರಮಾಣವನ್ನು ಕಂಡು ಇಡೀ ವಿಶ್ವವೇ ಬೆಚ್ಚಿದೆ. ಭಾರತದ ಸಹಾಯಕ್ಕೆ ಹಲವು ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ. ವಿಶ್ವದ ದೊಡ್ಡಣ್ಣ ಅಮೆರಿಕವೂ ಈಗಾಗಲೇ ನೆರವನ್ನು ಭಾರತಕ್ಕೆ ತಲುಪಿಸಿದೆ. ಈ ಮಧ್ಯೆ ಭಾರತೀಯ ಮೂಲದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಭಾವನಾತ್ಮಕ ಸಂದೇಶ ಕಳುಹಿಸಿದ್ದಾರೆ. ತವರು ದೇಶ ಭಾರತ ನರಳಬಾರದು, ನನ್ನ ಭಾರತ ಕ್ಷೇಮವಾಗಿರಬೇಕು. ಅದಕ್ಕಾಗಿ ಅಮೆರಿಕ ಸದಾ ಸಿದ್ಧವಿರುತ್ತೆ ಎಂದು ಕಮಲಾ ಧೈರ್ಯ ತುಂಬಿದ್ದಾರೆ.

ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಕಮಲಾ ಹ್ಯಾರಿಸ್​ ಹಲವು ವರ್ಷಗಳಿಂದ, ಇಂಡಿಯಾಸ್ಪೊರಾ ಮತ್ತು ಅಮೆರಿಕನ್ ಇಂಡಿಯಾ ಫೌಂಡೇಶನ್‌ನಂತಹ ಡಯಾಸ್ಪೋರಾ (ಭಾರತೀಯ ಸಮುದಾಯ) ಗುಂಪುಗಳು ಅಮೆರಿಕ ಮತ್ತು ಭಾರತದ ನಡುವೆ ಸೇತುವೆಗಳಾಗಿವೆ. ಕಳೆದ ವರ್ಷ ನೀವು COVID-19 ಪರಿಹಾರ ಕಾರ್ಯಗಳಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದೀರಿ. ನಿಮ್ಮೆಲ್ಲಾ ಕೆಲಸಕ್ಕೆ ಧನ್ಯವಾದಗಳು. ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ, ನನ್ನ ಕುಟುಂಬದ ಹಿಂದಿನ ತಲೆಮಾರುಗಳು ಭಾರತದಿಂದ ಬಂದಿವೆ. ನನ್ನ ತಾಯಿ ಭಾರತದಲ್ಲಿ ಹುಟ್ಟಿ ಬೆಳೆದವರು. ಇಂದಿಗೂ ನನ್ನ ಕುಟುಂಬದ ಅನೇಕ ಸದಸ್ಯರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಭಾರತ ಕ್ಷೇಮವಾಗಿರುವುದು ಅಮೆರಿಕಕ್ಕೆ ಅತ್ಯಂತ ಮುಖ್ಯವಾದ ವಿಷಯ.

ಭಾರತದಲ್ಲಿ COVID-19 ಸೋಂಕುಗಳು ಮತ್ತು ಸಾವುಗಳ ಸಂಖ್ಯೆಯ ಹೆಚ್ಚಳವು ಅತ್ಯಂತ ದಾರುಣವಾಗಿದೆ. ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಮನದಾಳದ ಸಂತಾಪಗಳು. ಭಾರತದ ಪರಿಸ್ಥಿತಿಯ ಭೀಕರ ಸ್ವರೂಪ ಸ್ಪಷ್ಟವಾದ ತಕ್ಷಣ ನಮ್ಮ ಆಡಳಿತವು ಕ್ಷಿಪ್ರ ಕ್ರಮಗಳನ್ನು ತೆಗೆದುಕೊಂಡಿದೆ. ಏಪ್ರಿಲ್ 26ರಂದು ನಮ್ಮ ಅಧ್ಯಕ್ಷರಾದ ಜೋ ಬೈಡೆನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ ಬೆಂಬಲ ವ್ಯಕ್ತ ಪಡಿಸಿದರು.   ಏಪ್ರಿಲ್ 30ರ ಹೊತ್ತಿಗೆ, ಅಮೆರಿಕದ ಸೇನೆಯ ಸದಸ್ಯರು ಮತ್ತು ನಾಗರಿಕರು ಪರಿಹಾರದ ಸಾಮಗ್ರಿಗಳ ವಿತರಣೆ ಕಾರ್ಯದಲ್ಲಿ ನಿರತರಾಗಿದ್ದರು.

ಈಗಾಗಲೇ ನಾವು ಮರುಪೂರಣ ಮಾಡಬಹುದಾದ ಆಮ್ಲಜನಕ ಸಿಲಿಂಡರ್‌ಗಳನ್ನು ಭಾರತಕ್ಕೆ ತಲುಪಿಸಿದ್ದೇವೆ. ಅಂತೆಯೇ ಆಮ್ಲಜನಕ ಸಾಂದ್ರಕಗಳನ್ನು ಕೂಡ ಕಳುಹಿಸಿಕೊಟ್ಟಿದ್ದೇವೆ, ಇನ್ನೂ ಹೆಚ್ಚಿನ ಸಹಾಯ ಬರಲಿದೆ. ಇದರ ಜೊತೆಗೆ N95 ಮಾಸ್ಕ್​​ಗಳನ್ನೂ ಕೂಡ ರವಾನೆ ಮಾಡಿದ್ದೇವೆ, ಇನ್ನಷ್ಟು ರವಾನೆಗೆ ಸಿದ್ಧವಾಗಿವೆ. COVID ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ರೆಮ್‌ಡೆಸಿವಿರ್ ಗಳನ್ನು ತಲುಪಿಸಿದ್ದೇವೆ. ಏತನ್ಮಧ್ಯೆ, COVID-19 ಲಸಿಕೆಗಳ ಪೇಟೆಂಟ್‌ಗಳನ್ನು ತೆಗೆದುಹಾಕಲು ನಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದೇವೆ. ಇದರಿಂದ ಭಾರತ ಮತ್ತು ಇತರ ರಾಷ್ಟ್ರಗಳು ತಮ್ಮ ಜನರಿಗೆ ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಲಸಿಕೆ ನೀಡಲು ಸಹಾಯಕವಾಗುತ್ತದೆ. ಭಾರತ ಮತ್ತು ಅಮೆರಿಕ ವಿಶ್ವದಲ್ಲೇ ಅತಿ ಹೆಚ್ಚು COVID-19 ಪ್ರಕರಣಗಳನ್ನು ಹೊಂದಿವೆ.

Youtube Video


ಈ ಸಾಂಕ್ರಾಮಿಕ ರೋಗದ ಆರಂಭದಲ್ಲಿ, ನಮ್ಮ ಆಸ್ಪತ್ರೆಗಳು ತುಂಬಿತುಳುಕುತ್ತಿದ್ದಾಗ ಭಾರತ ನಮ್ಮ ನೆರವಿಗೆ ಬಂದಿತ್ತು. ಇಂದು ಭಾರತದ ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಲು ನಾವು ದೃಢ ಸಂಕಲ್ಪ ಮಾಡಿದ್ದೇವೆ. ನಾವು ಇದನ್ನು ಭಾರತದ ಸ್ನೇಹಿತರಾಗಿ, ಕ್ವಾಡ್‌ನ ಸದಸ್ಯರಾಗಿ ಮತ್ತು ಜಾಗತಿಕ ಸಮುದಾಯದ ಭಾಗವಾಗಿ ಮಾಡುತ್ತಿದ್ದೇವೆ.  ನಾವು ರಾಷ್ಟ್ರಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಿದರೆ ಈ ಕಷ್ಟದ ಸಮಯವನ್ನು ದಾಟುವುದು ನಿಶ್ಚಿತ ಎಂದು ಕಮಲಾ ಹ್ಯಾರಿಸ್​ ತಿಳಿಸಿದ್ದಾರೆ.
Published by: Kavya V
First published: May 10, 2021, 2:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories