’ವಿಶ್ವ ಆರೋಗ್ಯ ಸಂಸ್ಥೆಯ ಜೊತೆಗೂಡಿ ಕೊರೋನಾ ಲಸಿಕೆಯನ್ನು ಅಭಿವೃದ್ಧಿಪಡಿಸುವುದಿಲ್ಲ’; ಪ್ರಯೋಗದಿಂದ ಹೊರನಡೆದ ಅಮೆರಿಕ!

ನಾವು ವೈರಸ್ ವಿರುದ್ಧ ಹೋರಾಡಲು ಆಂತರಾಷ್ಟ್ರೀಯ ಪಾಲುದಾರರಿಗೆ ಸಹಕಾರ ನೀಡುತ್ತೇವೆ. ಆದರೆ ಭ್ರಷ್ಟಗೊಂಡಿರುವ WHOನಂತಹ, ಚೀನಾದಿಂದ ಪ್ರಭಾವಿತವಾದ ಬಹುಪಕ್ಷೀಯ ಸಂಸ್ಥೆಯಿಂದ ನಾವು ನಿರ್ಬಂಧಿತರಾಗುವುದಕ್ಕೆ ಬಯಸುವುದಿಲ್ಲ ಎಂದು ಶ್ವೇತಭವನದ ವಕ್ತಾರ ಜುಡ್ ಡೀರೆ ಅಭಿಪ್ರಾಯಪಟ್ಟಿದ್ದಾರೆ.

ಡೊನಾಲ್ಡ್‌ ಟ್ರಂಪ್‌.

ಡೊನಾಲ್ಡ್‌ ಟ್ರಂಪ್‌.

  • Share this:
ವಾಷಿಂಗ್ಟನ್ (ಆಗಸ್ಟ್‌ 02); ವಿಶ್ವವನ್ನೇ ಬಾಧಿಸುತ್ತಿರುವ ಕೊರೋನಾ ವೈರಸ್‌ಗೆ ಲಸಿಕೆಯನ್ನು ಅಭಿವೃದ್ಧಿಪಡಿಸಿ ಎಲ್ಲಾ ದೇಶಗಳಿಗೆ ಹಂಚಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ಸಂಶೋಧನೆಯಲ್ಲಿ ತೊಡಗಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯಂತಹ ಬಹುಪಕ್ಷೀಯ ಗುಂಪುಗಳ ನಿರ್ಬಂಧಕ್ಕೆ ಅಮೇರಿಕಾ ಒಳಗಾಗಲು ಬಯಸುವುದಿಲ್ಲವಾದ್ದರಿಂದ, ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿ ವಿತರಿಸುವ ಜಾಗತಿಕ ಪ್ರಯತ್ನದಲ್ಲಿ ತಾನು ಭಾಗಿಯಾಗುವುದಿಲ್ಲ ಎಂದು ಅಮೇರಿಕಾ ತಿಳಿಸಿರುವುದಾಗಿ ವಾಷಿಂಗ್ಟನ್ ಪೋಸ್ಟ್‌ ವರದಿ ಮಾಡಿದೆ.

ಲಸಿಕೆ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ 170 ದೇಶಗಳ ಜೊತೆಗೆ ಮಾತುಕತೆ ನಡೆಸಿದ್ದು, ಪ್ರಯೋಗದಲ್ಲಿ ನಿರತವಾಗಿದೆ. ಡಬ್ಲ್ಯುಎಚ್‌ಒ ಒಕ್ಕೂಟದ ಸಾಂಕ್ರಾಮಿಕ ಪೂರ್ವಸಿದ್ಧತೆ ಆವಿಷ್ಕಾರಗಳು ಮತ್ತು ಲಸಿಕೆ ಒಕ್ಕೂಟದ ಗವಿ ಅವರ ಸಹ-ನೇತೃತ್ವದ ಈ ಯೋಜನೆ ಟ್ರಂಪ್ ಆಡಳಿತದ ಕೆಲವು ಸದಸ್ಯರಿಗೆ ಆಸಕ್ತಿಯನ್ನುಂಟುಮಾಡಿತ್ತು. ಜಪಾನ್, ಜರ್ಮನಿ ಮತ್ತು ಯುರೋಪಿಯನ್ ಕಮಿಷನ್ ಸೇರಿದಂತೆ ಅಮೆರಿಕದ ಸಾಂಪ್ರದಾಯಿಕ ಮಿತ್ರರಾಷ್ಟ್ರಗಳೂ ಸಹ ವಿಶ್ವಸಂಸ್ಥೆಯ ಈ ಪ್ರಯತ್ನವನ್ನು ಬೆಂಬಲಿಸಿವೆ.

ಆದರೆ, ಈ ಪ್ರಯತ್ನವನ್ನು "ಚೀನಾ ಪ್ರೇರಿತ ಪ್ರತಿಕ್ರಿಯೆ" ಹಾಗೂ WHOಗೆ ಸುಧಾರಣೆಯ ಅವಶ್ಯಕತೆ ಇದೆ. ಅದು ಚೀನಾದಿಂದ ಹೆಚ್ಚು ಪ್ರಭಾವಿತವಾಗಿದೆ ಎಂದು ಜರಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಈ ಒಕ್ಕೂಟದಿಂದ ಹೊರ ನಡೆಯುವ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿರುವಂತೆ, "ಈ ನಿರ್ಧಾರವು ಜುಲೈ ಆರಂಭದಲ್ಲಿ ಅಮೇರಿಕಾವು WHO ದಿಂದ ಹೊರಬರುವ ಶ್ವೇತಭವನದ ನಿರ್ಧಾರವನ್ನು ಅನುಸರಿಸಿದೆ" ಎಂದು ಹೇಳಲಾಗುತ್ತಿದೆ.

"ನಾವು ವೈರಸ್ ವಿರುದ್ಧ ಹೋರಾಡಲು ಆಂತರಾಷ್ಟ್ರೀಯ ಪಾಲುದಾರರಿಗೆ ಸಹಕಾರ ನೀಡುತ್ತೇವೆ. ಆದರೆ ಭ್ರಷ್ಟಗೊಂಡಿರುವ WHOನಂತಹ, ಚೀನಾದಿಂದ ಪ್ರಭಾವಿತವಾದ ಬಹುಪಕ್ಷೀಯ ಸಂಸ್ಥೆಯಿಂದ ನಾವು ನಿರ್ಬಂಧಿತರಾಗುವುದಕ್ಕೆ ಬಯಸುವುದಿಲ್ಲ" ಎಂದು ಶ್ವೇತಭವನದ ವಕ್ತಾರ ಜುಡ್ ಡೀರೆ ಅಭಿಪ್ರಾಯಪಟ್ಟಿದ್ದಾರೆ.

ಈ ನಿರ್ಧಾರವು WHOನಿಂದ ಅಮೇರಿಕಾ ಹೊರಬಂದಿದ್ದರ ಪರಿಣಾಮವಾಗಿದೆ. ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುವಲ್ಲಿ ಅಮೆರಿಕವು ತನ್ನ ಜಾಗತಿಕ ನಾಯಕತ್ವವನ್ನು ತ್ಯಜಿಸುತ್ತಿದೆ ಎಂದು ಉತ್ತರ ಅಮೆರಿಕದ ನಿರ್ದೇಶಕ ಟಾಮ್ ಹಾರ್ಟ್ ತಿಳಿಸಿದ್ದಾರೆ.

"ಈ ಕ್ರಮವು ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಜೀವವನ್ನು ಅಪಾಯಕ್ಕೆ ತಳ್ಳುವುದು ಮಾತ್ರವಲ್ಲ, ಇದು ಕೊರೊನಾ ವಿರುದ್ಧದ ಪರಿಣಾಮಕಾರಿ ಲಸಿಕೆಯಿಂದ ಅಮೆರಿಕನ್ನರನ್ನು ಸಂಪೂರ್ಣವಾಗಿ ಪ್ರತ್ಯೇಕಿಸುತ್ತದೆ" ಎಂದು ಟಾಮ್ ಹಾರ್ಟ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಮೊರೊಟೋರಿಯಂ ಅವಧಿಯ ಇಎಂಐ ಮೇಲೆ ಬಡ್ಡಿ?; ಇಂದು ತೀರ್ಪು ನೀಡಲಿರುವ ಸುಪ್ರೀಂ ಕೋರ್ಟ್‌

ಆದರೆ, ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಜಾಗತಿಕ ಆರೋಗ್ಯ ಕಾನೂನಿನ ಪ್ರಾಧ್ಯಾಪಕರಾದ ಲಾರೆನ್ಸ್ ಗೋಸ್ಟಿನ್ ಅಮೆರಿಕದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, "ಗೋ-ಇಟ್-ಅಲೋನ್ ತಂತ್ರವನ್ನು (ಎಲ್ಲವನ್ನೂ ಒಬ್ಬರೇ ಎದುರಿಸುವುದು) ಅನುಸರಿಸುವ ಮೂಲಕ ಅಮೆರಿಕ ದೇಶವು ಬಹುದೊಡ್ಡ ಜೂಜಾಟಕ್ಕೆ ತನ್ನನ್ನು ತೊಡಗಿಸಿಕೊಳ್ಳುತ್ತಿದೆ" ಎಂದಿದ್ದಾರೆ.

ಮತ್ತೊಂದೆಡೆ, ಡಾರ್ಟ್ಮೌತ್‌ನ ಗೀಸೆಲ್ ಸ್ಕೂಲ್ ಆಫ್ ಮೆಡಿಸಿನ್‌ನ ಸಹಾಯಕ ಪ್ರಾಧ್ಯಾಪಕ ಕೆಂಡಾಲ್ ಹೊಯ್ಟ್, "ಈ ಕ್ರಮವು ವಿಮಾ ಪಾಲಿಸಿಯಿಂದ ಹೊರಗುಳಿಯುವುದಕ್ಕೆ ಹೋಲುತ್ತದೆ" ಎಂದು ಜಾಡಿಸಿದ್ದಾರೆ.
Published by:MAshok Kumar
First published: