US COVID-19: ಅಮೆರಿಕಾದಲ್ಲಿ ಮತ್ತೆ ಕೊರೋನಾ ಸ್ಫೋಟ; 3 ವಾರಗಳಲ್ಲಿ ಕೇಸ್ ಡಬಲ್

ಅಮೆರಿಕಾದಲ್ಲಿ ಈವರೆಗೆ 55.6 ಜನರು ಕೋವಿಡ್​-19ನ ಮೊದಲ ಲಸಿಕೆ ಪಡೆದಿದ್ದಾರೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಹೇಳಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    ಅಮೆರಿಕಾದಲ್ಲಿ ಕೆಲ ತಿಂಗಳಿನಿಂದ ಕಡಿಮೆಯಾಗಿದ್ದ ಕೊರೋನಾ ಆರ್ಭಟ ಈಗ ಮತ್ತೆ ಹೆಚ್ಚಾಗಿದೆ. ಕಳೆದ ಮೂರು ವಾರಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ಡೆಲ್ಟಾ ರೂಪಾಂತರಿ ವೈರಸ್​ ಅತೀ ವೇಗವಾಗಿ ದೇಶಾದ್ಯಂತ ಹರಡುತ್ತಿದ್ದು, ಜನರಲ್ಲಿ ಮತ್ತೆ ಆತಂಕ ಹುಟ್ಟಿಸಿದೆ.

    ಸೋಮವಾರ ಒಂದೇ ದಿನ ಅಮೆರಿಕಾದಲ್ಲಿ 23,600 ಕೊರೋನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ಜೂನ್​ 23ರಂದು 11,300 ಕೊರೋನಾ ಪ್ರಕರಣಗಳು ದೃಢಪಟ್ಟಿದ್ದವು. ಈಗ ಕೊರೋನಾ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಜಾನ್ಸ್​ ಹಾಪ್ಕಿನ್ಸ್​ ಯೂನಿವರ್ಸಿಟಿ ಮಾಹಿತಿ ನೀಡಿದೆ.

    ಅಮೆರಿಕಾದಲ್ಲಿ ಮೈನ್​ ಮತ್ತು ಸೌತ್​ ಡಕೋಟ ಎಂಬ ಎರಡು ರಾಜ್ಯಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಕಡೆ ಕಳೆದ 2 ವಾರಗಳಿಂದ ಅತೀ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ.

    ಇದನ್ನೂ ಓದಿ:ಅಬ್ಬಾ..! ಸತ್ತವರ ಹಲ್ಲು, ಬೂದಿಯಿಂದ ಆಭರಣ; ಅದಕ್ಕೆ ಲಕ್ಷಗಟ್ಟಲೇ ಬೆಲೆ..!

    ಜುಲೈ 4ನೇ ವಾರದ ನಂತರ ಇನ್ನೂ ಹೆಚ್ಚಿನ ಕೊರೋನಾ ಪ್ರಕರಣಗಳು ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇದು ಕಾಕತಾಳೀಯವಲ್ಲ ಎಂದು ಸೇಂಟ್​ ಲೂಯಿಸ್​ನಲ್ಲಿರುವ ವಾಷಿಂಗ್ಟನ್​ ಯೂನಿವರ್ಸಿಟಿ ಸ್ಕೂಲ್​ ಆಫ್ ಮೆಡಿಸಿನ್​​ನ ಸಾಂಕ್ರಾಮಿಕ ರೋಗ ವಿಭಾಗದ ಸಹ ನಿರ್ದೇಶಕ ಡಾ.ಬಿಲ್​ ಪೌಡರ್ಲಿ ಅಭಿಪ್ರಾಯಪಟ್ಟಿದ್ದಾರೆ.

    ಇದೇ ಸಮಯದಲ್ಲಿ ಕೊರೋನಾ ವಿರುದ್ಧ ಹೋರಾಡಲು ಅಮೆರಿಕಾದ ಅನೇಕ ಕಡೆ ಜನರಿಗೆ ತ್ವರಿತವಾಗಿ ಲಸಿಕೆ ನೀಡಲಾಗುತ್ತಿದೆ. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಕಾಣಿಸಿಕೊಂಡ ರೂಪಾಂತರಿ​ ಕೊರೋನಾ ವೈರಸ್​ ಈಗ ಎಲ್ಲೆಡೆ ಅತೀ ವೇಗವಾಗಿ ಹರಡುತ್ತಿದೆ.

    ಅಮೆರಿಕಾದಲ್ಲಿ ಈವರೆಗೆ 55.6 ಜನರು ಕೋವಿಡ್​-19ನ ಮೊದಲ ಲಸಿಕೆ ಪಡೆದಿದ್ದಾರೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಹೇಳಿದೆ.

    ಒಟ್ಟು 5 ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳು ಕಳೆದ 2 ವಾರಗಳಲ್ಲಿ ದ್ವಿಗುಣಗೊಂಡಿವೆ. ಜೊತೆಗೆ ಈ ರಾಜ್ಯಗಳಲ್ಲಿ ವ್ಯಾಕ್ಸಿನೇಶನ್ ದರ ಕಡಿಮೆ ಇದೆ. ಮಿಸೌರಿಯಲ್ಲಿ ಶೇ. 45.9, ಅರ್ಕಾನ್ಸಾಸ್​ನಲ್ಲಿ ಶೇ.43, ನೆವಾಡಾದಲ್ಲಿ ಶೇ.50.9, ಲೂಯಿಸಿಯಾನದಲ್ಲಿ ಸೇ.39.2 ಮತ್ತು ಉತಾಹ್​​​ನಲ್ಲಿ ಶೇ.49.5 ಲಸಿಕೆ ದರ ಇದ್ದು, ಈ ರಾಜ್ಯಗಳು ಅತೀ ಕಡಿಮೆ ವ್ಯಾಕ್ಸಿನೇಷನ್ ರೇಟ್ಸ್ ಹೊಂದಿವೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ:Anekal: ಲಾಕ್​ಡೌನ್​ ತೆರವಾದರೂ ಚೇತರಿಕೆ ಕಾಣದ ಪುಷ್ಪೋದ್ಯಮ; ಹೂ ಬೆಳೆಗಾರರ ಸಂಕಷ್ಟ ಕೇಳೋರಿಲ್ಲ..!

    ದಿನೇ ದಿನೇ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆ, ಲಾಸ್​ ಏಂಜಲೀಸ್ ಕೌಂಟಿ ಮತ್ತು ಸೇಂಟ್​ ಲೂಯಿಸ್​ನಂತಹ ಸ್ಥಳಗಳಲ್ಲಿ ಆರೋಗ್ಯಾಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಹಾಕಿಕೊಳ್ಳಿ ಎಂದು ಜನರಿಗೆ ಮನವಿ ಮಾಡುತ್ತಿದ್ದಾರೆ.

    ಮಿಸೌರಿ ಮತ್ತು ಆರ್ಕಾನ್ಸಾಸ್​​ನಿಂದ ಚಿಕಾಗೋಗೆ ಬರುವ ಪ್ರಯಾಣಿಕರು ಲಸಿಕೆ ಹಾಕಿಸಿಕೊಂಡಿರದಿದ್ದರೆ, ಅವರನ್ನು 10 ದಿನ ಕ್ವಾರಂಟೈನ್​​ಲ್ಲಿ ಇರಿಸಲಾಗುತ್ತದೆ. ಇಲ್ಲವೇ ಅವರು ಕೋವಿಡ್​-19 ನೆಗೆಟಿವ್ ವರದಿ ತೋರಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:Latha CG
    First published: