ಸಾರ್ವಜನಿಕರು ಕೋವಿಡ್​ ಮಾರ್ಗಸೂಚಿ ಪಾಲನೆ ಮಾಡುವವರೆಗೆ ಅನ್​ಲಾಕ್​ ಸಾಧ್ಯವಿಲ್ಲ; ಗೌರವ್ ಗುಪ್ತಾ

ಒಂದು ಕಡೆ ಅನ್​ಲಾಕ್ ಮಾಡುವಂತೆ ಒತ್ತಡ, ಮನವಿಗಳು ಬರುತ್ತಿವೆ. ಆದರೆ, ಸಾರ್ವಜನಿಕರು ಕೋವಿಡ್ ರೂಲ್ಸ್ ಗಳನ್ನು ಪರಿಪಾಲನೆ ಮಾಡಿದ್ರೆ ಮಾತ್ರ ಅನ್​ಲಾಕ್ ಮಾಡಲು ಸಾಧ್ಯ. ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ.

 • Share this:
  ಬೆಂಗಳೂರು (ಜುಲೈ 01); ಸಾರ್ವಜನಿಕರು ಕೋವಿಡ್​ ಮಾರ್ಗಸೂಚಿಯನ್ನು ಚಾಚೂ ತಪ್ಪದೆ ಪಾಲನೆ ಮಾಡುವವರೆಗೆ ಬೆಂಗಳೂರಿನಲ್ಲಿ ಅನ್​ಲಾಕ್ ಮಾಡಲು ಸಾಧ್ಯವಿಲ್ಲ ಎಂದು ಪಾಲಿಕೆ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರಸ್ತುತ ಕೋವಿಡ್​ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಹಂತಹಂತವಾಗಿ ಅನ್​ಲಾಕ್ ಮಾಡುತ್ತಿದೆಯಾದರೂ ಸಂಪೂರ್ಣ ಅನ್​ಲಾಕ್ ಮಾಡಲಾಗಿಲ್ಲ. ಹೀಗಾಗಿ ಆಯುಕ್ತರಾದ ಗೌರವ್ ಗುಪ್ತ ಸದ್ಯಕ್ಕೆ ಬೆಂಗಳೂರಿನಲ್ಲಿ ಸಂಪೂರ್ಣ ಅನ್​ಲಾಕ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  ಬೆಂಗಳೂರು ಅನ್​ಲಾಕ್ ಬಗ್ಗೆ ಮಾತನಾಡಿರುವ ಗೌರವ್ ಗುಪ್ತಾ, "ಪ್ರತಿದಿನ 700 ರಿಂದ 800 ಕೇಸ್ ಗಳು ಬೆಂಗಳೂರಿನಲ್ಲಿ ದಾಖಲಾಗುತ್ತಿವೆ. ಒಂದು ಕಡೆ ಅನ್​ಲಾಕ್ ಮಾಡುವಂತೆ ಒತ್ತಡ, ಮನವಿಗಳು ಬರುತ್ತಿವೆ. ಆದರೆ, ಸಾರ್ವಜನಿಕರು ಕೋವಿಡ್ ರೂಲ್ಸ್ ಗಳನ್ನು ಪರಿಪಾಲನೆ ಮಾಡಿದ್ರೆ ಮಾತ್ರ ಅನ್​ಲಾಕ್ ಮಾಡಲು ಸಾಧ್ಯ. ದೇಶ, ವಿದೇಶಗಳಲ್ಲಿಯೂ ಸಹ ಇವತ್ತಿಗೂ ಎಲ್ಲ ವಲಯಗಳಲ್ಲಿಯೂ ಅನ್​ಲಾಕ್ ಆಗಿಲ್ಲ.

  ವರ್ತಕರು, ಗ್ರಾಹಕರು ಬಹಳ ಜಾಗೃತರಾಗಿದ್ರೆ ಮಾತ್ರ ನಾವು 3.0 ಅನ್ ಲಾಕ್ ಮಾಡಲು ಸಾಧ್ಯ. ಅಲ್ಲದೆ, ಗಡಿ‌ ಪ್ರದೇಶದ ಜಿಲ್ಲೆಗಳಲ್ಲಿ ಮಾತ್ರ ಆರ್ ಟಿಪಿಸಿಆರ್ ರಿಪೋರ್ಟ್ ತರುವಂತೆ ಆದೇಶ ಇದೆ. ಬೆಂಗಳೂರಿಗೆ ಆರ್ ಟಿಪಿಸಿಆರ್ ರಿಪೋರ್ಟ್ ಕಡ್ಡಾಯ ಅನ್ನುವ ಯಾವುದೇ ಆದೇಶ ಇಲ್ಲ" ಎಂದು ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

  ಇನ್ನೂ ಲಸಿಕೆ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಗೌರವ್ ಗುಪ್ತಾ, "ಮಹಾ ನಗರಗಳ ಪೈಕಿ ನಮ್ಮ ಬೆಂಗಳೂರಿನಲ್ಲಿಯೇ ಹೆಚ್ಚಿನ ವ್ಯಾಕ್ಸಿನ್ ನೀಡಲಾಗಿದೆ. ಮಹಾರಾಷ್ಟ್ರದ ಮಾದರಿಯಲ್ಲಿ ನಾವು ಸಹ ಮುಂದಿನ ದಿನಗಳಲ್ಲಿ ಮನೆ ಮನೆಗೆ ವ್ಯಾಕ್ಸಿನ್ ನೀಡುವ ಕಾರ್ಯ ಮಾಡಲಿದ್ದೇವೆ. ಯಾರು ಅನಾರೋಗ್ಯದಲ್ಲಿ ಪೀಡಿತರಾಗಿ ಹಾಸಿಗರ ಇಡಿದಿರುತ್ತಾರೋ ಅಂತಹವರಿಗೆ ಮನೆ ಮನೆಗೆ ಹೋಗಿ ವ್ಯಾಕ್ಸಿನ್ ಹಾಕುವ ವಿಚಾರವಾಗಿ ಚಿಂತನೆ ನಡೆದಿದೆ.

  ಇದನ್ನೂ ಓದಿ: Darbar Move| ಜಮ್ಮ-ಕಾಶ್ಮೀರದ 149 ವರ್ಷ ಹಳೆಯ ದರ್ಬಾರ್​ ಮೂವ್ ಅಭ್ಯಾಸವನ್ನು ಕೊನೆಗೊಳಿಸಿದ ಲೆಫ್ಟಿನೆಂಟ್​ ಗವರ್ನರ್​

  61 ಕಾಲೇಜುಗಳಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ಕ್ಯಾಂಪೇನ್ ಮಾಡಲಾಗಿದೆ. ವ್ಯಾಕ್ಸಿನ್ ಗೆ ಬೇಡಿಕೆ ಹೆಚ್ಚಿರೋದ್ರಿಂದ ಅಭಾವ ಅನಿಸುತ್ತಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವಂತವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಗೊಳಿಸುವಂತೆ ಒತ್ತಡ ಇದೆ. ಆದ್ರೇ ಈ ರೀತಿ ಕಡ್ಡಾಯ ರೋಲ್ಸ್ ಗಳು ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನಿರ್ವಹಿಸೋದು ಕಷ್ಟವಿದೆ" ಎಂದು ಅವರು ತಿಳಿಸಿದ್ದಾರೆ.

  ಇದನ್ನೂ ಓದಿ: ಆ್ಯಪ್‌ಗಳಿಂದ ಆರ್ಡರ್‌ ಮಾಡುವಾಗ ಗ್ರಾಹಕರು ಮಾಡುವ ತಪ್ಪುಗಳನ್ನು ಬಹಿರಂಗಪಡಿಸಿದ ಆಹಾರ ವಿತರಣಾ ಏಜೆಂಟ್

  ಕೊರೋನಾ ಎರಡನೇ ಅಲೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರತಿದಿನ 25 ಸಾವಿರಕ್ಕಿಂತ ಅಧಿಕ ಮತ್ತು ಬೆಂಗಳೂರಿನಲ್ಲಿ ಕನಿಷ್ಟ 10 ಸಾವಿರಕ್ಕಿಂತ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗುತ್ತಿದ್ದವು. ಸಾವಿನ ಸಂಖ್ಯೆಯೂ ಪ್ರತಿದಿನ 500ರ ಗಡಿ ದಾಟುತ್ತಿತ್ತು. ಈ ನಡುವೆ ಕಳೆದ ಎರಡು-ಮೂರು ವಾರಗಳಿಂದ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ.

  ಇದೇ ಕಾರಣಕ್ಕೆ ಲಾಕ್​ಡೌನ್ ಅನ್ನು ಸಡಿಲಿಕೆ ಮಾಡಿ ಹಂತಹಂತವಾಗಿ ರಾಜ್ಯ ಮತ್ತು ಬೆಂಗಳೂರಿನಲ್ಲಿ ಅನ್​ಲಾಕ್ ಮಾಡಲಾಗುತ್ತಿದೆ. ಈಗಾಗಲೇ ಮೂರು ಹಂತದಲ್ಲಿ ಅನ್​ಲಾಕ್ ಮಾಡಲಾಗಿದೆ. ಆದರೆ, ಬೆಂಗಳೂರಿನಲ್ಲಿ ಸಂಪೂರ್ಣ ಅನ್​ಲಾಕ್ ಘೋಷಣೆ ಮಾಡಬೇಕು ಎಂಬುದು ಹಲವು ವ್ಯಾಪಾರಸ್ಥರ ಒತ್ತಾಯ. ಆದರೆ, ಸದ್ಯಕ್ಕೆ ಇದು ಸಾಧ್ಯವಿಲ್ಲ ಎಂದು ಪಾಲಿಕೆ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: