ಬೆಂಗಳೂರು (ಜುಲೈ 03); ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ಅಪಾರ ಸಾವು-ನೋವಿಗೆ ಕಾರಣವಾಗಿತ್ತು. ಪರಿಣಾಮ ಕಳೆದ ತಿಂಗಳು ಲಾಕ್ಡೌನ್ ಹೇರಲಾಗಿತ್ತು. ಆದರೆ, ಇದೀಗ ಕೊರೋನಾ ಅಲೆ ಕ್ರಮೇಣ ಇಳಿಕೆಯಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಹಂತಹಂತವಾಗಿ ಅನ್ಲಾಕ್ ಮಾಡಲಾಗುತ್ತಿದೆ. ಈಗಾಗಲೇ ಎರಡು ಹಂತದಲ್ಲಿ ಅನ್ಲಾಕ್ ಮಾಡಲಾಗಿದೆ. ಕೆಲವು ವಿಭಾಗಗಳನ್ನು ಹೊರತುಪಡಿಸಿ ಬಹುತೇಕ ಕ್ಷೇತ್ರಗಳಿಗೆ ಅವಕಾಶ ನೀಡಲಾಗಿದೆ. ಜನ ಸಹ ರಸ್ತೆಗೆ ಇಳಿದು ಓಡಾಡಲು ಆರಂಭಿಸಿದ್ದಾರೆ. ಆರ್ಥಿಕತೆ ಪುನಃ ಚೇತರಿಕೆಯ ಹಾದಿ ಹಿಡಿದಿದೆ. ಆದರೆ, ಏನೇ ಆದರೂ ಸರ್ಕಾರ ಮಾತ್ರ ಕೆಲವು ಕ್ಷೇತ್ರಗಳಿಗೆ ಈವರೆಗೆ ಅವಕಾಶ ನೀಡಿಲ್ಲ. ಅನ್ಲಾಕ್ 3 ರಲ್ಲಿ ಚಿತ್ರಮಂದಿರ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಸರ್ಕಾರ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಈ ನಡುವೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಈ ಬಗ್ಗೆ ಇಂದು ಮಾಹಿತಿ ನೀಡಿದ್ದಾರೆ.
ಅನ್ಲಾಕ್ 3 ಬಗ್ಗೆ ಮಾತನಾಡಿರುವ ಸಚಿವ ಬಸವರಾಜ್ ಬೊಮ್ಮಾಯಿ, "ಕೋವಿಡ್ ಉಸ್ತುವಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಜೊತೆ ನಾಳೆ ಸಭೆ ನಡೆಯಲಿದೆ. ಕೋವಿಡ್ ಸ್ಥಿತಿಗತಿ ಬಗ್ಗೆ ಸಂಪೂರ್ಣ ಚರ್ಚೆ ಮಾಡ್ತೀವಿ. ಅನ್ಲಾಕ್ 2 ಆದ್ಮೇಲೆ ಕೋವಿಡ್ ನಿರ್ವಹಣೆ ಏನೇನ್ ನಡೆಯುತ್ತಿದೆ ಎಂಬುದನ್ನು ಪರಿಶೀಲನೆ ಮಾಡಲಾಗುವುದು, ಆ ನಂತರ ಅನ್ಲಾಕ್ 3ರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಅವರು ತಿಳಿಸಿದ್ದಾರೆ.
ತಜ್ಞರ ವರದಿ ಹಾಗೂ ದೇವಿಶೆಟ್ಟಿ ಮೂರನೇ ಅಲೆಯ ಶಿಪ್ಪಾರಸ್ಸುಗಳನ್ನ ಯಾವ ರೀತಿ ಇಂಪ್ಲಿಮೆಂಟ್ ಮಾಡಬೇಕು ಅನ್ನೋದನ್ನು ಚರ್ಚೆಸುತ್ತೇವೆ. ಅಲ್ಲದೆ, ಯಾವ ರೀತಿ ಸಿದ್ದತೆ ಮಾಡಿಕೊಳ್ಳಬೇಕು ಎಂಬುದನ್ನು ಚರ್ಚಿಸುತ್ತೇವೆ. ಇವೆಲ್ಲವೂ ಇವತ್ತು ಚರ್ಚೆಯ ಭಾಗವಾಗಿದೆ. ಈ ಚರ್ಚೆಯಲ್ಲಿ ಹಲವು ನಿರ್ಣಯಗಳನ್ನ ಸಿಎಂ ತೆಗೆದುಕೊಳ್ಳಲಿದ್ದಾರೆ. ದೇವಸ್ಥಾನ, ಮಾಲ್ ಪ್ರತಿಯೊಂದರ ಬಗ್ಗೆ ಚರ್ಚೆಯಾಗಲಿದೆ.
ಹಲವು ಸಂಘ ಸಂಸ್ಥೆಗಳ ಮಾಲೀಕರು ಬಂದು ಮನವಿ ಮಾಡಿದ್ದಾರೆ. ಅವರ ಬಗ್ಗೆಯೂ ಚರ್ಚೆ ಮಾಡಿ ತೀರ್ಮಾನ ತೆಗದುಕೊಳ್ಳುತ್ತೇವೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೋವಿಡ್ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ಪರಿಶೀಲನೆ ಮಾಡಲಾಗುವುದು. ಗಡಿ ಪ್ರದೇಶದಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಚರ್ಚೆಸುತ್ತೇವೆ. ಮಹಾರಾಷ್ಟ್ರ ಮತ್ತು ಕೇರಳ ಸೇರಿದಂತೆ ಬಾರ್ಡರ್ ಗಳಿಂದ ಬರುವರಿಂದ ಆಗ್ತಿರುವ ಎಫೆಕ್ಟ್ ಬಗ್ಗೆ ಚರ್ಚೆ ಮಾಡುತ್ತೇವೆ" ಎಂದು ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿದೆ 44 ಕಂಟೈನ್ಮೆಂಟ್ ಜೋನ್:
ಬಹುತೇಕ ಬೆಂಗಳೂರು ಸದ್ಯ ಅನ್ ಲಾಕ್ ಆಗಿದೆ. ಹೀಗೆ ಕ್ರಮೇಣವಾಗಿ ಅನ್ ಲಾಕ್ ಆಗ್ತಿದ್ದಂತೆ ನಗರದಲ್ಲಿ ಕೊರೋನಾ ಸೋಂಕು ಹೆಚ್ಚಾಗ್ತಿದೆ. ದಿನದಿಂದ ದಿನಕ್ಕೆ ನಗರದ ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ ಹೆಚ್ಚಳವಾಗ್ತಿದೆ. ನಗರದ ಮಹಾದೇವಪುರ ವಲಯವೊಂದರಲ್ಲೇ 20 ಮೈಕ್ರೋ ಕಂಟೈನ್ಮೆಂಟ್ ವಲಯ ಗಳಿವೆ.
ಇದನ್ನೂ ಓದಿ: Siddaramaiah| ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ; ಸಿದ್ದರಾಮಯ್ಯ ಕಿಡಿ
ಜುಲೈ 5 ರಿಂದ ಅನ್ ಲಾಕ್ 3.O ಸಾಧ್ಯತೆ.. ಇದರ ನಡುವೆ ಸದ್ದಿಲ್ಲದೆ ನಗರದ ಕೆಲ ಏರಿಯಾಗಳಿಗೆ ಬೀಗ.!! ನಗರದ ಬಹುತೇಕ ಕ್ಷೇತ್ರಗಳಿಗೆ ಅನ್ ಲಾಕ್ ಭಾಗ್ಯ ಸಿಕ್ಕಿದೆ. ಜೊತೆಗೆ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕೂಡ ಹೆಚ್ಚಳವಾಗ್ತಿದೆ. ಇದರ ನಡುವೆ ನಗರದಲ್ಲಿ ದಿನದಿಂದ ದಿನಕ್ಕೆ ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳು ಹೆಚ್ಚಾಗ್ತಿದೆ. ಆಶ್ಚರ್ಯ ಎಂದರೆ ನಗರದಲ್ಲಿ ಒಟ್ಟು 44 ಆ್ಯಕ್ಟಿವ್ ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳಿವೆ. ನಗರದ 44 ಪ್ರದೇಶಗಳನ್ನ ಆ್ಯಕ್ಟಿವ್ ಕಂಟೈನ್ಮೆಂಟ್ ಝೋನ್ ಎಂದು ಗುರುತು ಮಾಡಿರುವ ಬಿಬಿಎಂಪಿ ಈ ಪ್ರದೇಶಗಳ ಮೇಲೆ ನಿಗಾ ಇಟ್ಟುಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ