ಹುಸಿಯಾಯಿತು ಸಿನಿಪ್ರಿಯರ ನಿರೀಕ್ಷೆ: ಅನ್​ಲಾಕ್​ 3ರ ಬಳಿಕವೂ ಚಿತ್ರಮಂದಿರಗಳಿಗಿಲ್ಲ ರಿಲೀಫ್​..!

ಚಿತ್ರಮಂದಿರ

ಚಿತ್ರಮಂದಿರ

  • Share this:
ಸಾಲು ಸಾಲು ಸಿನಿಮಾಗಳು ತೆರೆ ಕಾಣಲು ಸಿದ್ಧವಾಗಿವೆ. ಸ್ಟಾರ್ ನಟ-ನಟಿಯರ ಚಿತ್ರಗಳನ್ನು ಬೆಳ್ಳಿತೆರೆಯಲ್ಲಿ ವೀಕ್ಷಿಸಲು ಸಿನಿಪ್ರಿಯರು ಕಾತರರಾಗಿದ್ದಾರೆ. ಅಂತೆಯೇ ಫಿಲ್ಮ್​ ಮೇಕರ್ಸ್​ ಸಹ ಯಾವಾಗ ಚಿತ್ರಮಂದಿರಗಳು ತೆರೆಯುತ್ತವೆ ಎಂದು ಕಾಯುತ್ತಿದ್ದಾರೆ. 

ಕೊರೋನಾ ಭೀತಿಯಿಂದಾಗಿ ಮಾರ್ಚ್​ 14ರಂದು ಚಿತ್ರಮಂದಿರಗಳನ್ನು ಮುಚ್ಚಲಾಗಿತ್ತು. ಅಂದಿನಿಂದ ಇಂದಿನವರೆಗೂ ಅಂದರೆ, ಸುಮಾರು ನಾಲ್ಕೂವರೆ ತಿಂಗಳಿನಿಂದ ಸಿನಿಮಾ ಮಂದಿರಗಳು ಬಾಗಿಲು ಹಾಕಿವೆ. ಈ ಸಲವಾದರೂ ಅವುಗಳನ್ನು ತೆರೆಯಲು ಅನುಮತಿ ಸಿಗಲಿದೆ ಅನ್ನೋ ನಿರೀಕ್ಷೆ ಇತ್ತು. ಆದರೆ ಈಗ ಅದೂ ಹುಸಿಯಾಗಿದೆ.

Film Theaters may reopen in AP and Telangana in august but conditions apply
ಸಾಂದರ್ಭಿಕ ಚಿತ್ರ


ಇನ್ನು ಮಾರ್ಚ್​ ಎರಡನೇ ವಾರದಲ್ಲಿ ತೆರೆಕಂಡಿದ್ದ ಸಿನಿಮಾಗಳು ನಷ್ಟವನ್ನು ಅನುಭವಿಸಿವೆ. ಇನ್ನು ಸಾಲ ಮಾಡಿ ಸಿನಿಮಾ ನಿರ್ಮಿಸಿರುವ ನಿರ್ಮಾಪಕರು ಬಡ್ಡಿ ಕಟ್ಟುತ್ತಾ ಸಂಕಷ್ಟದಲ್ಲಿದ್ದಾರೆ. ಇನ್ನು ಸಿನಿಮಾ ಪ್ರದರ್ಶನಕ್ಕೆ ಅನುಮತಿ ಸಿಕ್ಕರೆ ಮುನ್ನೆಚ್ಚರಿಕೆ ಕ್ರಮವಾಗಿ ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಪಿವಿಆರ್​ ವಿಡಿಯೋ ಸಹ ರಿಲೀಸ್ ಮಾಡಿತ್ತು.


ಅನ್​ಲಾಕ್​ 3ರಲ್ಲಿ ಸಿನಿಮಾ ಮಂದಿರಗಳನ್ನು ತೆರೆಯಬಹುದು ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆ, ಕೇಂದ್ರ ಗೃಹ ಇಲಾಖೆಗೆ ಶಿಫಾರಸ್ಸು ಮಾಡಿತ್ತು. ಕಠಿಣ ನಿಯಮಗಳನ್ನು ಹೇರುವ ಮೂಲಕ ಈ ಸಲ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗುತ್ತದೆ ಎಂದು ಸಿನಿಪ್ರಿಯರು ಹಾಗೂ ಚಿತ್ರಮಂದಿರಗಳ ಮಾಲೀಕರು ನಿರೀಕ್ಷೆಯಲ್ಲಿದ್ದರು.


ಆದರೆ ಎಲ್ಲರ ನಿರೀಕ್ಷೆಗೆ ಈಗ ಹುಸಿಯಾಗಿದೆ. ಇನ್ನು ಆಗಸ್ಟ್ ತಿಂಗಳ ಅಂತ್ಯದವರೆಗೂ ಕಾಯಲೇಬೇಕಾಗಿದೆ. ಆದರೆ ಅಷ್ಟರಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಕಡಿಮೆಯಾಗಿ, ಸೋಂಕು ಹರಡುವುದು ಕಡಿಮೆಯಾದರೆ ಈ ಬಗ್ಗೆ ಕೇಂದ್ರ ಗೃಹ ಇಲಾಖೆ ತನ್ನ ನಿರ್ಧಾರ ಬದಲಿಸಬಹುದೇನೋ..!
Published by:Anitha E
First published: