Unlock 3 Guidelines: ಆ. 5ರಿಂದ ಜಿಮ್, ಯೋಗ ಕೇಂದ್ರ ತೆರೆಯಲು ಅನುಮತಿ; ಅನ್​ಲಾಕ್​ 3 ಬಳಿಕ ಏನಿರುತ್ತೆ? ಏನಿರಲ್ಲ?

Covid 19 Unlock 3 Guidelines: ಆಗಸ್ಟ್​ 5ರ ನಂತರ ರಾತ್ರಿ ವೇಳೆ ಜನರು ಹೊರಗೆ ತಿರುಗುವುದಕ್ಕೆ ಹೇರಲಾಗಿರುವ ನಿಷೇಧ (ರಾತ್ರಿ ಕರ್ಫ್ಯೂ) ತೆರವುಗೊಳಿಸಲಾಗಿದೆ. ಆಗಸ್ಟ್​ 5ರಿಂದ ಯೋಗ ಕೇಂದ್ರಗಳು, ಜಿಮ್ನಾಸ್ಟಿಕ್​ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

news18-kannada
Updated:July 30, 2020, 8:57 AM IST
Unlock 3 Guidelines: ಆ. 5ರಿಂದ ಜಿಮ್, ಯೋಗ ಕೇಂದ್ರ ತೆರೆಯಲು ಅನುಮತಿ; ಅನ್​ಲಾಕ್​ 3 ಬಳಿಕ ಏನಿರುತ್ತೆ? ಏನಿರಲ್ಲ?
ಸಾಂದರ್ಭಿಕ ಚಿತ್ರ
  • Share this:
Unlock 3 Guidelines | ನವದೆಹಲಿ (ಜು. 29): ಆಗಸ್ಟ್​ 1ರಿಂದ 3ನೇ ಹಂತದ ಅನ್​ಲಾಕ್​ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಇಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕಂಟೇನ್​ಮೆಂಟ್​ ಜೋನ್​ಗಳನ್ನು ಹೊರತುಪಡಿಸಿ, ಉಳಿದ ಪ್ರದೇಶಗಳಲ್ಲಿ ಆಗಸ್ಟ್​ 5ರಿಂದ ಜಿಮ್, ಯೋಗ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಆದರೆ, ಆಗಸ್ಟ್​ 31ರವರೆಗೆ ಕಂಟೇನ್​ಮೆಂಟ್​ ಜೋನ್​ಗಳಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಮುಂದುವರಿಯಲಿದೆ. ಆಗಸ್ಟ್​ 5ರ ನಂತರ ರಾತ್ರಿ ವೇಳೆ ಜನರು ಹೊರಗೆ ತಿರುಗುವುದಕ್ಕೆ ಹೇರಲಾಗಿರುವ ನಿಷೇಧ (ರಾತ್ರಿ ಕರ್ಫ್ಯೂ) ತೆರವುಗೊಳಿಸಲಾಗಿದೆ. ಆಗಸ್ಟ್​ 5ರಿಂದ ಯೋಗ ಕೇಂದ್ರಗಳು, ಜಿಮ್ನಾಸ್ಟಿಕ್​ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಶಾಲೆಗಳು, ಕಾಲೇಜುಗಳು, ಕೋಚಿಂಗ್ ಇನ್​ಸ್ಟಿಟ್ಯೂಷನ್​ಗಳನ್ನು ಆಗಸ್ಟ್​ 31ರವರೆಗೆ ತೆರೆಯದಿರಲು ಆದೇಶಿಸಲಾಗಿದೆ.
ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ದೇಶದಲ್ಲಿ ಹೆಚ್ಚಿರುವ ಕೊರೋನಾ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಸರ್ಕಾರ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ನಾಲ್ಕು ತಿಂಗಳ ಕಾಲ ಲಾಕ್​ಡೌನ್ ಮುಂದುವರೆಸಿದರೂ ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಅನ್​ಲಾಕ್​ 3ರಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ನಡೆಸಲು ಅನುಮತಿ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅನುಮತಿ ನೀಡಲಾಗಿದೆ.ಇದನ್ನೂ ಓದಿ: Rafale Jets: ಭಾರತಕ್ಕೆ ಬಂದಿಳಿದ ರಫೇಲ್ ಯುದ್ಧ ವಿಮಾನಗಳು; ನಮ್ಮ ಸೇನಾ ಇತಿಹಾಸದಲ್ಲಿ ಹೊಸ ಶಕೆ ಆರಂಭ ಎಂದ ರಾಜನಾಥ ಸಿಂಗ್

ಥಿಯೇಟರ್ ತೆರೆಯಲು ಶಿಫಾರಸು ಮಾಡಿದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಲಹೆಯನ್ನು ಗೃಹ ಇಲಾಖೆ ಪರಿಗಣಿಸಿಲ್ಲ. ಮೂರನೇ ಹಂತದ ಅನ್​ಲಾಕ್​ನಲ್ಲೂ ಥಿಯೇಟರ್​ ಲಾಕ್​ಡೌನ್ ಮುಂದುವರೆಯಲಿದೆ. 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದ ಕೆಳಗಿನ ಮಕ್ಕಳು ಮನೆಯಲ್ಲಿ ಇರಬೇಕು. ತೀರಾ ಅಗತ್ಯ ಕೆಲಸಗಳಿಗೆ ಮಾತ್ರ ಹೊರಗೆ ಹೋಗಬೇಕು. ಹಾಗೇ, ವಂದೇ ಭಾರತ್ ಮಿಷನ್ ಅಡಿ ಸೀಮಿತ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುವುದು. ವಂದೇ ಭಾರತ ಮಿಷನ್ ಹೊರತಾದ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅವಕಾಶ ಇಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.ಕಂಟೇನ್​ಮೆಂಟ್​ ಜೋನ್​ಗಳನ್ನು ಹೊರತುಪಡಿಸಿ ಬೇರೆ ಪ್ರದೇಶಗಳಲ್ಲಿ ಮೆಟ್ರೋ ಸಂಚಾರ, ಸಿನಿಮಾ ಹಾಲ್, ಸ್ವಿಮ್ಮಿಂಗ್ ಪೂಲ್, ಥಿಯೇಟರ್, ಬಾರ್​ಗಳು, ಆಡಿಟೋರಿಯಂ, ಸಾರ್ವಜನಿಕ ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ. ಯಾವುದೇ ರೀತಿಯ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಮಾರಂಭಗಳನ್ನು ನಡೆಸದಿರಲು ಸೂಚಿಸಲಾಗಿದೆ.
Published by: Sushma Chakre
First published: July 29, 2020, 8:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading