Unlock 3.0 Guidelines : ಅನ್​ಲಾಕ್​​ -3.0 ಮಾರ್ಗಸೂಚಿಯ ಅಂತಿಮ ಹಂತದ ತಯಾರಿ ಆರಂಭ : ಏನಿರುತ್ತೆ? ಏನಿರಲ್ಲ?

Unlock 3.0 Rules : ಮೂರನೇ ಹಂತದ ಲಾಕ್​ಡೌನ್​ ಮಾರ್ಗಸೂಚಿ ಪ್ರಕಟಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ

news18-kannada
Updated:July 27, 2020, 9:02 AM IST
Unlock 3.0 Guidelines : ಅನ್​ಲಾಕ್​​ -3.0 ಮಾರ್ಗಸೂಚಿಯ ಅಂತಿಮ ಹಂತದ ತಯಾರಿ ಆರಂಭ : ಏನಿರುತ್ತೆ? ಏನಿರಲ್ಲ?
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜುಲೈ.27): ದೇಶದಲ್ಲಿ ಈಗ ಪ್ರತಿದಿನ ಸರಿ ಸುಮಾರು 50 ಸಾವಿರ ಪ್ರಕರಣಗಳು ಕಂಡು ಬರುತ್ತಿವೆ. ಇದೇ ಸಂದರ್ಭದಲ್ಲಿ ಎರಡನೇ ಹಂತದ ಅನ್​ಲಾಕ್​ ಅಂತ್ಯವಾಗುತ್ತಿದೆ. ಎರಡನೇ ಹಂತದ ಅನ್​ಲಾಕ್​ ಮುಕ್ತಾಯವಾಗಲು ನಾಲ್ಕು ದಿನ ಮಾತ್ರ ಬಾಕಿ ಇದ್ದು ಆಗಸ್ಟ್ ಒಂದರಿಂದ ಮೂರನೇ ಹಂತದ ಅನ್​ಲಾಕ್​ ನಿಯಮಗಳು ಜಾರಿ ಬರಬೇಕಿದೆ. ಇದಕ್ಕಾಗಿ ಕೇಂದ್ರ ಗೃಹ ಇಲಾಖೆ ಅಂತಿಮ ಹಂತದ ತಯಾರಿ ನಡೆಸುತ್ತಿದೆ.

ಮೂರನೇ ಹಂತದ ಲಾಕ್​ಡೌನ್​ ಮಾರ್ಗಸೂಚಿ ಪ್ರಕಟಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಹೊಸ ಮಾರ್ಗಸೂಚಿ ಸ್ವರೂಪ ಹೇಗಿರಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳಿಂದ ಅಭಿಪ್ರಾಯ ಕೇಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ವಾರ ಬಿಹಾರ, ಅಸ್ಸಾಂ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಹಿಮಾಚಲ ಪ್ರದೇಶ, ಉತ್ತಾರಖಂಡ ಮುಖ್ಯಮಂತ್ರಿಗಳ ಜೊತೆ ದೂರವಾಣಿಯಲ್ಲಿ ಚರ್ಚಿಸಿದ್ದರು. ಸದ್ಯದ ಮಾಹಿತಿಗಳ ಪ್ರಕಾರ ಮೂರನೇ ಹಂತದ ಅನ್​ಲಾಕ್​ ನಲ್ಲಿ ಏನಿರುತ್ತೆ? ಏನಿರಲ್ಲ? ಎಂಬ ಸಂಗತಿಗಳು ಈ ಕೆಳಕಂಡಂತಿವೆ.

ಶಾಲೆ ಮತ್ತು ಕಾಲೇಜುಗಳು ಆರಂಭದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ
ಅಗಸ್ಟ್ 15ರ ಬಳಿಕ ಅಥವಾ ಸೆಪ್ಟಂಬರ್ 1ರ ನಂತರ ಆರಂಭಕ್ಕೆ ನೀಡಬಹುದು
ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬಹುದು.
ಖಾಸಗಿ ಶೈಕ್ಷಣಿಕ ಕೋಚಿಂಗ್ ಸಂಸ್ಥೆಗಳಿಗೆ ಷರತ್ತು ಬದ್ಧವಾದ ಅವಕಾಶ ನೀಡಬಹುದುಆಗಸ್ ಕೊನೆಯಿಂದ ಸಿನಿಮಾ ಮಂದಿರಗಳನ್ನು ಆರಂಭಿಸಲು ಅನುಮತಿ ನೀಡಬಹುದು
ಶೇ. 25 ರಿಂದ 50 ರಷ್ಟು ವೀಕ್ಷಕರೊಂದಿಗೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬಹುದು

ಇದನ್ನೂ ಓದಿ :  ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ‘: ಇಂದು ಬಿಜೆಪಿ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ

ಜಿಮ್ ಗಳಿಗೆ ಷರತ್ತುಗಳನ್ನು ವಿಧಿಸಿ ಅವಕಾಶ ನೀಡುವ ಸಾಧ್ಯತೆ ಇದೆ.
ಸದ್ಯಕ್ಕೆ ಪೂರ್ಣ ಪ್ರಮಾಣದ ರೈಲು ಸಂಚಾರ ಇರುವುದಿಲ್ಲ
ವಿಶೇಷ ವಿಶೇಷ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ
ಪೂರ್ಣ ಪ್ರಮಾಣದ ವಿಮಾನ ಸಂಚಾರ ಕೂಡ ಇರುವುದಿಲ್ಲ
ವಿಮಾನ ಹಾರಾಟದ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ

ಕೆಲ ವಿದೇಶಗಳಿಗೂ ನಿರ್ದಿಷ್ಟವಾದ ವಿಮಾನ‌ ಹಾರಾಟ ಸಾಧ್ಯತೆ ಇದೆ
ಮೆಟ್ರೋ ರೈಲು ಸಂಚಾರ ಮೇಲಿರುವ ನಿರ್ಬಂಧ ಸಡಿಲ ಮಾಡುವ ಸಾಧ್ಯತೆ ಇಲ್ಲ
ಸದ್ಯಕ್ಕೆ ಸ್ವಿಮಿಂಗ್ ಫೂಲ್ ತೆರೆಯಲು ಅವಕಾಶ ನೀಡುವ ಸಾಧ್ಯತೆಗಳೂ ಇಲ್ಲ
ಕಂಟೈನ್​​ಮೆಂಟ್ ಝೋನ್ ಹೊರೆತಾದ ಪ್ರದೇಶಗಳಲ್ಲಿ ನೈಟ್ ಕರ್ಪ್ಯೂ ಸಮಯ ಇಳಿಕೆ ಸಾಧ್ಯತೆ
Published by: G Hareeshkumar
First published: July 27, 2020, 8:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading